ಬೈಟುಕಾಫಿ

ತೆರೆದ ಹೃದಯದಿಂದ ಸ್ವೀಕರಿಸಿ


'ಭಾರತದ ಸದ್ಯದ ದುಸ್ಥಿತಿಗೆ ಬಹುಮಟ್ಟಿಗೆ ಕಾರಣವಾದುದು ಭಾರತೀಯರ ಆಲಸ್ಯ ಮತ್ತು ಕೂಪಮಂಡೂಕ ಬುದ್ಧಿ.'
ನಮ್ಮ ದೇಶದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಚೀನಾ ಹಾಗೂ ಜಪಾನುಗಳಿಗೆ ಭೇಟಿ ನೀಡುವಂತಾಗಬೇಕು. ಜಪಾನಿಯರ ಪಾಲಿಗಂತೂ ಭಾರತವೆಂದರೆ ಶ್ರೇಷ್ಠ-ಉನ್ನತ ವಿಚಾರಗಳ ಸ್ವಪ್ನಲೋಕವೇ ಆಗಿದೆ. ಆದರೆ ಭಾರತೀಯರು ಜೀವನವಿಡೀ ಕಾಡು ಹರಟೆಯಲ್ಲೇ ಮುಳುಗಿರುವವರು, ಹರಟೆಮಲ್ಲರು. ಶತಶತಮಾನಗಳಿಂದಲೂ ಮೂಢನಂಬಿಕೆ-ಕಂದಾಚಾರಗಳ ಕಂತೆಗಳನ್ನೇ ತಲೆಯ ಮೇಲೆ ಹೊತ್ತು ಕುಳಿತಿರುವವರು!
ಈಗ ನೀವು ಮಾಡುತ್ತಿರುವುದಾದರೂ ಏನು? ನಿಮ್ಮ ತಲೆಯಲ್ಲಿರುವ ಅತ್ಯುನ್ನತ ಧ್ಯೇಯವೆಂದರೆ ತಿಂಗಳಿಗೆ ಸಂಬಳ ಎಣಿಸಿಕೊಳ್ಳುವುದು! ಇನ್ನೂ ಹೆಚ್ಚೆಂದರೆ ನೌಕರಿ ಹೊಂದುವುದು. ಇದೇ ಭಾರತೀಯ ಯುವಕರ ಪರಮಾದರ್ಶ. ಇಷ್ಟೇ ನಿಮ್ಮ ಬದುಕು!
ಲೌಕಿಕ ಜೀವನದ ಸಮೃದ್ಧಿ, ಸುವ್ಯವಸ್ಥೆಗಳಿಗಾಗಿ ತಮ್ಮ ರಾಷ್ಟ್ರಕ್ಕೆ ಬೇಕಾದುದೆಲ್ಲವನ್ನೂ ತಾವೇ ಉತ್ಪಾದಿಸುವ ಪಣ ತೊಟ್ಟು ಕಾರ್ಯಶೀಲರಾಗಿ. ಜೀವನದ ಪ್ರತಿಯೊಂದು ರಂಗದಲ್ಲೂ ಪ್ರಗತಿಯ ಹಂಬಲ ಎದ್ದು ಕಾಣಲಿ. ಅಭಿವೃದ್ಧಿಯ ಕುರಿತಾದ ತೀವ್ರ ಉತ್ಸಾಹ, ಕೈಗಾರಿಕೆ, ವಿದ್ಯಾಭ್ಯಾಸ, ವ್ಯವಸಾಯ ಮೊದಲಾದ ಪ್ರತಿಯೊಂದು ಕ್ಷೇತ್ರದಲ್ಲೂ ಮುನ್ನಡೆ ಸಾಧಿಸಿ ಸ್ವಾವಲಂಬಿಗಳಾಗಬೇಕೆಂಬ ಛಲವಿರಲಿ. ಸದ್ವಿಚಾರಗಳನ್ನು, ಸತ್ಕಾರ್ಯಗಳನ್ನು ಮುಕ್ತ ಮನಸ್ಸಿನಿಂದ, ತೆರೆದ ಹೃದಯದಿಂದ ಸ್ವೀಕರಿಸಿ, ಅನುಷ್ಠಾನಗೊಳಿಸಿ...
= ಆನಂದ ಎಸ್.ಎನ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಭೀಕರ ಹಿಟ್‌ ಅಂಡ್ ರನ್‌; ಟೀ ಕುಡಿಯುತ್ತಾ ಬೈಕ್ ಮೇಲೆ ಕುಳಿತಿದ್ದವನಿಗೆ ಶಾಕ್ ಕೊಟ್ಟ ಕಾರು, ಗಾಳಿಯಲ್ಲಿ ಹಾರಿದ ವ್ಯಕ್ತಿ! Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ