ಶಾಸ್ತ್ರೀಯ ನೃತ್ಯ ಇಷ್ಟಪಡುವವರಿಗೆ ಎರಡು ದಿನಗಳ 'ಪರಂಪರ' ನೃತ್ಯೋತ್ಸವವನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿದೆ ರಂಜನಿ ಕಲಾಕೇಂದ್ರ. ಜ.30, 31ರಂದು ದಿನ ಸಂಜೆ 6.30ರಿಂದ ಕಾರ್ಯಕ್ರಮ. ಇಂದು ಸುಪರ್ಣ ರವಿಶಂಕರ್ ಭರತನಾಟ್ಯ, ವೈಜಯಂತಿ ಕಾಶಿ ಕೂಚುಪುಡಿ, ಪುಲಿಕೇಶಿ ಕಸ್ತೂರಿ ಭರತನಾಟ್ಯ; ನಾಳೆ ಜ್ಯೋತಿ ಪಟ್ಟಾಭಿರಾಮನ್ ನೃತ್ಯರೂಪಕ, ಸುಪರ್ಣ ವೆಂಕಟೇಶ್ ಕಥಕ್ ನೃತ್ಯ, ಪೂಜಶ್ರೀ ಸಂಗಡಿಗರಿಂದ ನೃತ್ಯವಿದೆ.
ಉದ್ಘಾಟನೆ ಸಮಾರಂಭದಲ್ಲಿ ಹಿರಿಯ ನೃತ್ಯಗುರು ಉಷಾ ದಾತಾರ್ ಅವರಿಗೆ ಸನ್ಮಾನವಿದೆ. ಅರಸಿಕೆರೆಯ ದಾತಾರ್ ಅವರು ಭರತನಾಟ್ಯ, ಕೂಚುಪುಡಿ, ಮೋಹಿನಿ ಅಟ್ಟಂ, ಕಟ್ಟಕಲಿ, ಸಾತ್ವಿಕ ಅಭಿನಯ ಮತ್ತು ಭಾರತೀಯ ದೇಗುಲ ನೃತ್ಯಗಳಲ್ಲಿ ಪರಿಣಿತರು. ಜಗತ್ತಿನಾದ್ಯಂತ ಅವರ ಶಿಷ್ಯರಿದ್ದಾರೆ.
ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಬೆಂಗಳೂರು
ಸಂಪರ್ಕ: 9945182095