ಊಟಕ್ಕೆ 15 ನಿಮಿಷ ಮೊದಲು ಒಂದು ಲೋಟ ನೀರು ಕುಡಿಯಿರಿ. ಅದು ನಿಮ್ಮ ಆಹಾರ ಸೇವನೆಯನ್ನು ಮಿತಗೊಳಿಸುತ್ತದೆ.
ನೀತಿಗಿಳಿ
ಆತ್ಮೀಯರಿಗೆ ಸುಳ್ಳು ಹೇಳುವುದು ಸುಲಭ. ಹಾಗೆಂದು ಸುಳ್ಳು ಹೇಳಿದರೆ ಆಮೇಲೆ ಪಶ್ಚಾತ್ತಾಪ ಪಡಬೇಕಾದ್ದು ನೀವೇ.
-
ಒಂದು ಒಳ್ಳೆಯ ಸ್ನೇಹದ ಬೆಲೆ, ಒಂದು ಕಳಪೆ ಸುಳ್ಳಿನಿಂದ ನಿರ್ಧಾರವಾಗುತ್ತದೆ.
ದುಭಾಷಿತ
ತಪ್ಪು ಉಪದೇಶಕ್ಕೆ ಕಿವಿಗೊಡಬೇಡಿ.
ಅಜ್ಞಾನಕ್ಕಿಂತ ಅದು ಅಪಾಯಕಾರಿ.
- ಜಾರ್ಜ್ ಬರ್ನಾರ್ಡ್ ಶಾ
ಉಪದೇಶಕ್ಕೇ ಕಿವಿಗೊಡದಿರುವುದು ಅತ್ಯಂತ ಒಳ್ಳೆಯದು.
ಟಿಪ್‌ಟಾಪ್
ತಿಂಗಳಿಗೆರಡು ಸಲ ಮಿಕ್ಸರ್‌ನಲ್ಲಿ ತುಸು ಉಪ್ಪನ್ನು ಹಾಕಿ ಗ್ರೈಂಡ್ ಮಾಡಿಕೊಳ್ಳಿ. ಅದು ಜಾರ್‌ನ ಬ್ಲೇಡ್‌ಗಳನ್ನು ಹರಿತವಾಗಿಡುತ್ತದೆ.