ಕಳೆದೊಂದೂವರೆ ವರ್ಷದ ಹಿಂದೆ ರಣಬೀರನಿಂದ ದೂರಾಗಿದ್ದ ದೀಪಿಕಾ ಪಡುಕೋಣೆ ಮೋಹಕ ಬೆರಳುಗಳ ಮಾಯಗಾತಿ, ಕೊನೆಗೂ ಮತ್ತೊಬ್ಬ ಬಾಯ್ಫ್ರೆಂಡ್ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ಈ ಬಾರಿ ಅವಳನ್ನು ತನ್ನ ತೋಳ ತೆಕ್ಕೆಯಲ್ಲಿ ಬಂಧಿಸಿಕೊಳ್ಳುವ ಅವಕಾಶ ಪಡೆದಿರುವ ಅದೃಷ್ಟ ಶಾಲಿ ರಣವೀರ್ ಸಿಂಗ್. 'ಬ್ಯಾಂಡ್ ಬಾಜಾ ಬಾರಾತ್'ನ ಹೀರೋ ಈಗ ದೀಪಿಕಾಳ ಹೊಸ ಲವ್ವರ್ ಬಾಯ್ ಆಗಿದ್ದಾನೆ. ಇತ್ತೀಚೆಗೆ ದುಬೈನಲ್ಲಿ ನಡೆದ 'ರೇಸ್- 2' ಚಿತ್ರದ ಪ್ರೋಮೋಷನ್ ನಂತರ ಕ್ಲಬ್ ಒಂದರಲ್ಲಿ ಇವರಿಬ್ಬರ ರೊಮ್ಯಾನ್ಸ್ ಬೆಳಗಿನಝಾವದವರೆಗೂ ನಡೆದೇ ಇತ್ತಂತೆ. ಮೂರು ತಿಂಗಳ ಹಿಂದೆ 'ರಾಮ್ ಲೀಲಾ' ಚಿತ್ರಕ್ಕೆ ಸಹಿ ಮಾಡಿದ ನಂತರ ಪರಿಚಯವಾದವರು, ಈಗ 'ಟಚಿಂಗ್.... ಟಚಿಂಗ್'ವರೆಗೂ ಬಂದು ನಿಂತಿದ್ದಾರೆ. ಅತ್ತ, ರಾಮಲೀಲೆ ಹೆಸರಲ್ಲಿ ಇವರ ಕೃಷ್ಣಲೀಲೆ ಶುರುವಾಗಿರೋದನ್ನು ಬಾಲಿವುಡ್ ಬೆರಗುಗಣ್ಣಿನಿಂದ ನೋಡುತ್ತಿದೆ. <
-ಚೇತನ್