ಕಬ್ಬು ಎತ್ತರದ ಬಹುವಾರ್ಷಿಕ ಹುಲ್ಲುಗಳ, ಸ್ಯಾಕರಮ್ ಪಂಗಡಕ್ಕೆ ಸೇರಿದ ಸಸ್ಯ.
ಏಷ್ಯಾದ ಬೆಚ್ಚಗಿನ ಸಮಶೀತೋಷ್ಣ, ಉಷ್ಣ ವಲಯದ ಪ್ರದೇಶಗಳಲ್ಲಿ ಇದನ್ನು ಬೆಳೆಯಲಾಗುತ್ತದೆ.
ನಮ್ಮ ದೇಶದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಕಬ್ಬಿಗೆ ಮಹತ್ವದ ಸ್ಥಾನ.
ಮಲೆನಾಡಿನ ಕಬ್ಬಿನ ಆಲೇಮನೆಗಳಲ್ಲಿ ತಯಾರಿಸುವ ಜೋನಿಬೆಲ್ಲ ಪರಿಶುದ್ಧವಾದುದು, ಉತ್ಕೃಷ್ಟವಾದುದು.