ಬೈಟುಕಾಫಿ

ಅಣಬೆ ಬಳಸುವಾಗ ಎಚ್ಚರ

ಸ್ವಾದಿಷ್ಟ ರುಚಿ, ಪೋಷಕಾಂಶ ಇರುವ ಅಣಬೆಗಳಿರುವಂತೆ ವಿಷಪೂರಿತ ಅಣಬೆಗಳೂ ಇರುತ್ತವೆ. ಅವುಗಳನ್ನು ಎಚ್ಚರವಹಿಸಿ ಬಳಸಬೇಕು. ಇಲ್ಲವಾದರೆ ಸಾವು ಖಂಡಿತ!
ಸಾಮಾನ್ಯವಾಗಿ ಅಣಬೆಗಳು ತೇವಾಂಶ ಇರುವ ಜಾಗಗಳಲ್ಲಿ, ಅಂದರೆ ಮರಗಳಕಾಂಡಗಳಿಗೆ ಅಂಟಿಕೊಂಡೋ, ಹುತ್ತಗಳಿರುವ ಜಾಗಗಳಲ್ಲೋ, ಕಸದ ರಾಶಿಗಳಲ್ಲೋ, ಅಡಕೆಸಿಪ್ಪೆ ರಾಶಿಗಳಲ್ಲೋ ಬೆಳೆಯುತ್ತವೆ. ಕೆಲವು ಜಾತಿಯ ಅಣಬೆಗಳು ನೇರ ಸೂರ್ಯ ರಶ್ಮಿಗೆ ಎದುರಾಗಿ ಬೆಳೆಯುತ್ತವೆ. ತೇವಾಂಶವಿರುವ ಜಾಗಗಳನ್ನು ಬಿಟ್ಟು ಒಣ ಪ್ರದೇಶಗಳಲ್ಲಿ ವಿಪರೀತ ಬೇಸಿಗೆಯಲ್ಲಿ ಅಣಬೆ ಬೆಳೆಯಲಾರದು.
ಕೊಡೆಯಾಕಾರದಲ್ಲಿ ತೆರೆದಿರುವ ಭಾಗವು ಅಣಬೆಯ ಫಲವತ್ತತೆಯ ಭಾಗವಾಗಿದೆ. ಭೂಮಿಯೊಳಗೆ ಉಳಿದ ಭಾಗವು ಕೊಳವೆಯಾಕಾರದ ಬಿಳಿಯ ನೂಲಿನ ಎಳೆಗಳಂತೆ ಕೂಡಿರುತ್ತದೆ. ಈ ನೂಲಿನೆಳೆಗಳು ಬೆಳೆದಂತೆಲ್ಲಾ ಹರಡಿಕೊಂಡು ಮೇಲೇರಿ ಹೋಗಿ ಛತ್ರಿಯಾಕಾರವನ್ನು ನಿರ್ಮಿಸುತ್ತವೆ. ಅಣಬೆಗಳನ್ನು ಅಡುಗೆಗೆ ಬಳಸುವಾಗ ತಿಳಿದವರಿಂದ ಸರಿಯಾದ ಮಾಹಿತಿ ಪಡೆದು ನಂತರ ಬಳಸುವುದು ಒಳಿತು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

- ಅರಳಕುಪ್ಪೆ ಶ್ರೀನಿವಾಸ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!