ನಾನೊಬ್ಬ ಸರ್ಕಾರಿ ನೌಕರ. ವಯಸ್ಸು 29. ಯಾವುದೇ ದುಶ್ಚಟವಿಲ್ಲ. ಆಸ್ತಿಯೂ ಇಲ್ಲ. ಆದರೂ ದೊಡ್ಡ ದೊಡ್ಡ ಕನಸುಗಳು. ಅವುಗಳನ್ನು ಈಡೇರಿಸೋದಿಕ್ಕೆ ಆಗ್ತಿಲ್ಲ. ಅದಕ್ಕೆ ಇನ್ನೂ ಮದ್ವೆಯಾಗಿಲ್ಲ. ಲಂಚ ತಗೊಳ್ಳೋದಿಕ್ಕೆ ಇಷ್ಟ ಇಲ್ಲ. ಏನ್ಮಾಡೋದು ತಿಳೀತಿಲ್ಲ.
- ಕುಮಾರ, ಊರು ಬೇಡ
ನೀವು ಚೆನ್ನಾಗಿಯೇ ಇದ್ದೀರಿ. ನಿಮಗೇನೂ ಸಮಸ್ಯೆಯೇ ಇಲ್ಲ... ಈಗಿನ ಸಮಾಜದಲ್ಲಿ 'ಆರೋಗ್ಯ'ವಂತ ಮನುಷ್ಯ ಹೇಗಿರಬೇಕೆಂಬುದಕ್ಕೆ ನೀವು ಉದಾಹರಣೆ. ಆ ದೊಡ್ಡ ಕನಸುಗಳು ನಿಮ್ಮ ಈ ಒಳ್ಳೆಯ ವ್ಯಕ್ತಿತ್ವದ ಕಾರಣದಿಂದಲೇ ಈಡೇರುತ್ತವೆ. ನಿಮ್ಮಂತಹ ಆದರ್ಶವನ್ನಿಟ್ಟುಕೊಂಡ ವ್ಯಕ್ತಿಗೆ ಒಳ್ಳೆಯ ಹುಡುಗಿಯೂ ಸಿಗ್ತಾಳೆ. ನಿಮ್ಮ ಕನಸುಗಳೆಲ್ಲ ನನಸಾಗುತ್ತವೆ. ಒಳ್ಳೆಯದಾಗಲಿ...
ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...
ಡಾ. ಸ್ಯಾಟಲೈಟ್
anekaby2@gmail.com