ಜನುಮ ದಿನ
ಕೇಶವ ಬಲಿರಾಮ್ ಹೆಡ್ಗೆವಾರ್
- 1889.
- ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪಕ ಮತ್ತು ಮೊದಲ ಸರಸಂಘಚಾಲಕ.
- ವೃತ್ತಿಯಲ್ಲಿ ವೈದ್ಯ. ಪ್ರಖರ ಹಿಂದುತ್ವವಾದಿ.
- ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷ್ ಸರ್ಕಾರದ ಆದೇಶ ಧಿಕ್ಕರಿಸಿ 'ವಂದೆ ಮಾತರಂ' ಹಾಡಿದ್ದರು.
ಪುಣ್ಯತಿಥಿ
ಎನ್.ಕೆ.ಪಿ. ಸಾಳ್ವೆ
- 1921-2012.
- ಕೇಂದ್ರದ ಮಾಜಿ ಸಚಿವ, ಕ್ರಿಕೆಟ್ ಆಡಳಿತಗಾರ.
- ಬಿಸಿಸಿಐ ಅಧ್ಯಕ್ಷರಾಗಿದ್ದರು.
- ಪ್ರತ್ಯೇಕ ವಿದರ್ಭ ರಾಜ್ಯಕ್ಕಾಗಿ ಹೋರಾಡಿದ್ದರು.
ದಿನಚರಿತೆ
- 1887- ಮುಂಬೈ ಫೈರ್ ಬ್ರಿಗೇಡ್ ಸ್ಥಾಪನೆ.
- 1935- ಭಾರತದ ಕೇಂದ್ರ ಬ್ಯಾಂಕ್ ಆಗಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆ.
- 1973- ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ಸಂರಕ್ಷಣೆಯ 'ಪ್ರಾಜೆಕ್ಟ್ ಟೈಗರ್'ಗೆ ಚಾಲನೆ.
ಟ್ವೀಟ್‌ಸ್ಟಾಲ್
ನಿಜವಾಗಿ ಭಾರತದ ಮೊದಲ ಗ್ಲೋಬಲ್ ಬ್ರಾಂಡ್ ಎಂದರೆ ಐಪಿಎಲ್. ಅದು ಕಳೆದ ಕೆಲವರ್ಷಗಳಲ್ಲಿ ವಿವಾದದ ಕೇಂದ್ರವಾದದ್ದು ದುರದೃಷ್ಟಕರ. ಈ ವರ್ಷವಾದರೂ ಐಪಿಎಲ್ ಪಂದ್ಯಾವಳಿ ವಿವಾದಾತೀತವಾಗಿ ನಡೆಯಲಿ.
- ಲಲಿತ್ ಮೋದಿ