ಬೈಟುಕಾಫಿ

ಗರಿಗರಿಯಾದ ಹಲಸಿನ ಚಿಪ್ಸ್...

ಉಪ್ಪಿನಲ್ಲಿ ಹಾಕಿಟ್ಟ ಹಲಸಿನ ತೊಳೆಯ ಒಂದೆರಡು ಅಡುಗೆಯ ಬಗ್ಗೆ ಹೇಳದೇ ಇದ್ದರೆ ಹೇಗೆ? ಅದರ ರುಚಿ ಅಷ್ಟೊಂದು ಸ್ವಾದಿಷ್ಟ. ಜರ್ರೋ ಎಂದು ಒಂದೇ ಸಮನೆ ಮಳೆ ಬೀಳುವ ಜುಲೈ ತಿಂಗಳಿನಲ್ಲಿ ಮಲೆನಾಡಿನ ಭಾಗಗಳಲ್ಲಿ ಹಿತ್ತಲ ತರಕಾರಿ ಸಿಗುವುದು ಸ್ವಲ್ಪ ಕಡಿಮೆ. ಅಂತಹ ಸಂದರ್ಭಕ್ಕೆಂತಲೇ ಈ ಉಪ್ಪಿನ ಹಲಸಿನ ತೊಳೆ ಹಾಕಿಟ್ಟುಕೊಳ್ಳುವುದು.
ಹಲಸಿನ ತೊಳೆಯ ಪಳದ್ಯ ಮಳೆಗಾಲಕ್ಕೆ ಹೇಳಿಮಾಡಿಸಿದಂತಹ ಅಡುಗೆ. ಪಳದ್ಯ ಮಾಡುವ ಮೊದಲು ತೊಳೆಯನ್ನು ಚೆನ್ನಾಗಿ ನೀರಿನಲ್ಲಿ ತೊಳೆಯಬೇಕು. ನಂತರ ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಉದ್ದಿನಬೇಳೆ ಹಾಕಿ, ಸಾಸಿವೆ ಚಟಪಟ ಸಿಡಿದಾಗ ತೊಳೆದಿಟ್ಟ ಹಲಸಿನ ತೊಳೆಯನ್ನು ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿಯಬೇಕು. ಗರಿಗರಿಯಾಗಿ ಹುರಿದ ತೊಳೆಯನ್ನು ಹಾಗೆಯೇ ತಿನ್ನಲೂ ರುಚಿಯಾಗಿರುತ್ತದೆ. ನಂತರ ರುಬ್ಬಿದ ಪಳದ್ಯ ಮಸಾಲೆ ಸೇರಿಸಿ ಕುದಿಸಿದರಾಯಿತು. ಈ ಹುರಿದ ತೊಳೆಯಿಂದ ಹಸಿ ಕೂಡ ಮಾಡಬಹುದು.
ಉಪ್ಪಿನ ತೊಳೆಯ ಜತೆ ಕೆಸುವಿನ ಎಲೆ ಸೇರಿಸಿ ಮಾಡುವ ಪಲ್ಯ(ಸೊಳೆ ಪಲ್ಯ)ವಂತೂ ಸೊಗಸಾಗಿರುತ್ತದೆ. ಇದರ ಸಿಹಿ ಪಲ್ಯವೂ ತುಂಬಾ ರುಚಿ.
ಹಸಿ ತೊಳೆಯಿಂದ ದೋಸೆ ಕೂಡ ಮಾಡುತ್ತಾರೆ. ಹಲಸಿನ ತೊಳೆಯ ಚಿಪ್ಸ್ ಬಹುಶಃ ಎಲ್ಲ ಭಾಗದ ಜನರೂ ಸವಿದಿರುತ್ತಾರೆ. ಹಲಸಿನ ಉತ್ಪನ್ನಗಳಲ್ಲಿ ಅತಿ ಹೆಚ್ಚು ಬೇಡಿಕೆಯ ಉತ್ಪನ್ನವೆಂದರೆ ಹಲಸಿನ ಚಿಪ್ಸ್. ಹಲಸಿನ ಉತ್ಪನ್ನಗಳ ಒಂದು ದೊಡ್ಡ ಉದ್ಯಮವೇ ಈಗ ಆರಂಭವಾಗಿದೆ. ಹಲಸಿನ ಎಲ್ಲ ಬಗೆಯ ಉತ್ಪನ್ನಗಳನ್ನೂ ಬೇರೆ ಬೇರೆ ರಾಜ್ಯಗಳಿಗಷ್ಟೇ ಅಲ್ಲ, ಬೇರೆ ದೇಶಗಳಿಗೂ ರಫ್ತು ಮಾಡುವ ಮಟ್ಟಕ್ಕೆ ಈ ಉದ್ಯಮ ಬೆಳೆಯುತ್ತಿದೆ. ಹಾಗಾಗಿ ಕೊಳ್ಳುವವರಿಗೆ ನಗರಗಳ ದೊಡ್ಡ ದೊಡ್ಡ ಮಾಲ್‌ಗಳಲ್ಲೂ ಸಿಗುವಂತಾಗಿದೆ. ಹಲಸಿನ ಕಾಯಿ ಚಿಪ್ಸ್, ಹಪ್ಪಳ, ಒಣಗಿಸಿದ ಇಡೀ ತೊಳೆ ಕೂಡ ಸಿಗುತ್ತಿದೆ. ಹಲಸಿನ ಇನ್ನೊಂದು ಪ್ರಮುಖ ತಿಂಡಿ, ಎಲ್ಲರಿಗೂ ಇಷ್ಟವಾಗುವಂಥದ್ದು, ಹಲಸಿನ ಕಾಯಿ ಬೋಂಡಾ. ತೆಂಗಿನಕಾಯಿ ಚಟ್ನಿಯೊಂದಿಗೆ ಈ ಬೋಂಡಾ ಸವಿಯಲು ಬಲು ರುಚಿ.
ಹಲಸಿನ ಎಲೆ ಹಾಗೂ ಮರದ ಚಕ್ಕೆ ಹೋಮ ಹವನಗಳಿಗೆ ಶ್ರೇಷ್ಠವೆಂದು ಉಪಯೋಗಿಸುವ ಪದ್ಧತಿ ಲಾಗಾಯ್ತಿನಿಂದಲೂ ನಡೆದುಕೊಂಡು ಬಂದಿದೆ. ಗಣಹೋಮ, ಗಣಹವನಗಳಲ್ಲಿ ಹೋಮಕ್ಕೆ ಹಲಸಿನ ಚಕ್ಕೆಯನ್ನೇ ಬಳಸುತ್ತಾರೆ. ಅಲ್ಲದೇ ಮದುವೆ ಹಾಗೂ ಉಪನಯನದ ಹೋಮಗಳಲ್ಲೂ ಹಲಸಿನ ಚಕ್ಕೆ ಬಳಸುತ್ತಾರೆ. ಹಲಸಿನ ಎಲೆಯಿಂದಲೇ ಹೋಮಕ್ಕೆ ತುಪ್ಪ ಹಾಕುವ ಪದ್ಧತಿ ಇಂದಿಗೂ ಇದೆ. ಹಲಸಿನ ಎಲೆಯೆಂದರೆ ಆನೆಗಳಿಗೆ ಪಂಚಪ್ರಾಣ. ತಿನ್ನಲು ಹಲಸಿನ ಎಲೆ ಸಿಕ್ಕಿಬಿಟ್ಟರೆ ಅವಕ್ಕೆ ಬೇರೇನೂ ಬೇಡ. ಆನೆಗಳು ಆರೋಗ್ಯದಿಂದಿರಲು ಪ್ರತಿದಿನ ಹಲಸಿನ ಎಲೆ ಕೊಡುವುದು ಅವಶ್ಯಕ ಎಂಬುದು ಮಾವುತರ ಅಭಿಪ್ರಾಯ. <

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!

SIR ವಿರುದ್ಧ ಪ್ರತಿಭಟನೆ ಮುಂದುವರೆಸುತ್ತೆವೆ: ರಾಜಕೀಯ, ಜನಸಾಮಾನ್ಯರ ಪ್ರತಿರೋಧಕ್ಕೇ ಜಯ': ರಾಹುಲ್ ಗಾಂಧಿ

‘ಸಿದ್ದರಾಮಯ್ಯಗೆ CD ತೋರಿಸಿ ರಾಜೀನಾಮೆ ಪಡೆದಿದ್ದಾರೆ’: ಯತ್ನಾಳ್​ ಸ್ಫೋಟಕ ಆರೋಪ

ಹನಿಟ್ರ್ಯಾಪ್ ಭೀತಿಯಲ್ಲಿದ್ದ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮಾಧ್ಯಮಗಳಿಗೆ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!