ಭೂಮಿಯ ಮೇಲ್ಮೈ ಉಬ್ಬಿ ಒಂದು ನಿರ್ದಿಷ್ಟ ಶಿಖರವಿರುವ ಪ್ರದೇಶ ಬೆಟ್ಟ.
ಭೂಮಿಯ ಮೇಲಿನ ಹಾಗೂ ಒಳಗಿನ ಅನೇಕ ಭೌಗೋಳಿಕ ಘಟನೆಗಳಿಂದ ಬೆಟ್ಟಗಳು ನಿರ್ಮಾಣಗೊಂಡಿವೆ.
ಬೆಟ್ಟಗಳು ಹಲವಾರು ನದಿಗಳ ಉಗಮಸ್ಥಾನಗಳಾಗಿವೆ. ಹಿಂದೆ ದೇವಸ್ಥಾನಗಳನ್ನು ಬೆಟ್ಟಗಳ ಮೇಲೆ ಕಟ್ಟುತ್ತಿದ್ದರು.
ರಾಜರುಗಳು ಬೆಟ್ಟಗಳ ಮೇಲೆ ಕೋಟೆಗಳನ್ನು ಕಟ್ಟಿ ಉತ್ತಮ ರಕ್ಷಣಾ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು.