ಬೈಟುಕಾಫಿ

ರಾಕ್ಷಸರ ಬಲಹೀನತೆಗಳು

ಕೋಪ ಪ್ರಕೃತಿ, ಪ್ರದರ್ಶನ ವಿಕೃತಿ, ನಕ್ಕುಬಿಡುವುದು ಸಂಸ್ಕೃತಿ
ಕೆಂಪುದೀಪ ಬೀಳುವ ಮೊದಲೇ ಜಂಕ್ಷನ್ ದಾಟುವ ಪ್ರಯತ್ನದಲ್ಲಿ ನಮ್ಮ ವಾಹನದ ವೇಗವನ್ನು ಹೆಚ್ಚಿಸುತ್ತೇವೆ. ಅಷ್ಟರಲ್ಲಿ ಆರೆಂಜ್ ಸಿಗ್ನಲ್ ನೋಡಿ ಮುಂದಿರುವ ಡ್ರೈವರ್ ಟಕ್ಕನೆ ಕಾರು ನಿಲ್ಲಿಸುತ್ತಾನೆ. ಅದಕ್ಕೆ ಡಿಕ್ಕಿ ಹೊಡೆಯುವುದನ್ನು ಅತಿ ಕಷ್ಟದಿಂದ ತಡೆಯುತ್ತೇವೆ. ಅವನ ಟ್ರಾಫಿಕ್ ಸೆನ್ಸ್ಅನ್ನು ಮೆಚ್ಚಿಕೊಳ್ಳಲಾಗದೇ ಬೈದುಕೊಳ್ಳುತ್ತೇವೆ. ಅವನು ಕಾರು ನಿಲ್ಲಿಸಿದ್ದಕ್ಕಲ್ಲ. ನಮ್ಮ ಗೆಲುವಿಗೆ ಅಡ್ಡ ಬಂದಿದ್ದಕ್ಕೆ. ಆ ರೀತಿಯಲ್ಲಿ ಬಹಳ ಸಂದರ್ಭಗಳಲ್ಲಿ ನಮ್ಮ ಬಾಧೆಯನ್ನು ಕೋಪವಾಗಿ ಪ್ರದಶರ್ಿಸುತ್ತಾ ಇರುತ್ತೇವೆ.
ಹುಡುಗ ಮೆಟ್ಟಿಲುಗಳ ಮೇಲಿನಿಂದ ಜಾರಿ ಬಿದ್ದರೆ, ಸಮಾಧಾನ ಮಾಡುವ ಬದಲು ಬೈಯುತ್ತಾಳೆ ತಾಯಿ. ದು:ಖ 'ನಿಜ'. ವ್ಯಕ್ತೀಕರಣ 'ತಪ್ಪು'. ಒಬ್ಬ ಯುವತಿ ಹಿರಿಯರಿಗೆ ಇಷ್ಟವಿಲ್ಲದ ಮದುವೆ ಮಾಡಿಕೊಳ್ಳುತ್ತಾಳೆ. ತಂದೆ ಕೋಪದಿಂದ ಮನೆಯಿಂದ ಹೊರಗಟ್ಟುತ್ತಾನೆ. ತಾಯಿ ದು:ಖದಿಂದ ಆತ್ಮಹತ್ಯಾಪ್ರಯತ್ನ ಮಾಡುತ್ತಾಳೆ. ಇಬ್ಬರ ಫೀಲಿಂಗ್ ಒಂದೇ. ರಿಯಾಕ್ಷನ್ ಬೇರೆ.

ಐದು ಜ್ಞಾನೇಂದ್ರಿಯಗಳಿಂದ ನಾವು ಗ್ರಹಿಸುವುದು 'ವಾಸ್ತವ'. ಅದು ದೃಶ್ಯ, ಪರಿಮಳ, ಶಬ್ದ ಏನಾದರೂ ಆಗಿರಬಹುದು. ಹಾಗೆ ಗ್ರಹಿಸದಿದ್ದುದನ್ನು ನಾವು ಯಾವ ವಿಧವಾಗಿ ಅನ್ವಯಿಸಿಕೊಳ್ಳುತ್ತೇವೆಂಬುದು ನಮ್ಮ 'ಫೀಲಿಂಗ್'. ಅದರ ಪ್ರತಿಸ್ಪಂದನವನ್ನು ರಿಯಾಕ್ಷನ್ ಅನ್ನುತ್ತಾರೆ. ಕೆಲವು ಜನರಿಗೆ ಕೆಲವು ರುಚಿಗಳು ಸಹಿಸದಿರಲು, ಕೆಲವು ದೃಶ್ಯಗಳನ್ನು ನೋಡಲಾಗದೇ ಇರಲು, ಕೆಲವು ವಾಸನೆಗಳನ್ನು ಭರಿಸಲಾಗದೇ ಇರಲು ಈ ಪ್ರತಿಕ್ರಿಯಾ ಭಾವನೆಗಳೇ ಕಾರಣ.
ಮಗನ ಪ್ರೊಗ್ರೆಸ್ ರಿಪೋಟರ್್ ನೋಡಿ ಕೆನ್ನೆಯ ಮೇಲೆ ಫಳೀರ್ ಎಂದು ಬಾರಿಸಿ, 'ಚೆನ್ನಾಗಿ ಓದು, ಇಲ್ಲದಿದ್ದರೆ ಕೊಂದುಬಿಡುತ್ತೇನೆ' ಎನ್ನುತ್ತಾನೆ ತಂದೆ. ಇದರಲ್ಲಿ : ಮಗ ಓದಲಿಲ್ಲವೆಂಬ ದು:ಖ, ಶಿಕ್ಷಿಸಿದರೆ ಚೆನ್ನಾಗಾಗುತ್ತಾನೆ - ಎನ್ನುವ ಎರಡು ಅಂಶಗಳಿವೆ. ಆದರೆ ಈ ಎರಡಕ್ಕೆ ಮಾತ್ರ ಯಾವುದೇ ರೀತಿಯ ಸಂಬಂಧವಿಲ್ಲವೆಂದು ಮನೋವಿಶ್ಲೇಷಕರು ಹೇಳುತ್ತಾರೆ. ಒಳ್ಳೆಯ ಮಾಕರ್ುಗಳು ಬರಬೇಕೆಂದರೆ ತಂದೆ ಅವನೊಂದಿಗೆ ಕೂತುಕೊಳ್ಳಬೇಕು. ಅರ್ಥವಾಗದ ವಿಷಯಗಳನ್ನು ಬೋಧಿಸಬೇಕು. ಕ್ರಮಶಿಕ್ಷಣ ಬೇರೆ. ಶಿಕ್ಷೆ ಬೇರೆ ಎಂಬುದನ್ನು ತಿಳಿದುಕೊಳ್ಳಬೇಕು. ಇವೆಲ್ಲವನ್ನೂ ಮಾಡಲಾಗದೇ ತಂದೆ ಒಂದು ಸುಲಭವಾದ ದಾರಿ ಆರಿಸಿಕೊಂಡ... ಶಿಕ್ಷಿಸುವುದು! ವಿಚಿತ್ರವೆಂದರೆ - ತಂದೆಯ ಕೋಪ ಸರಿಯಾದದ್ದೇ ಎಂದು ಬಹಳ ಜನ ಸಮಥರ್ಿಸುತ್ತಾರೆ.

ಕುದಿಯುತ್ತಿರುವ ನೀರಿನಲ್ಲಿ ನೆರಳು ಕಾಣಿಸದು. ಉರಿಯುತ್ತಿರುವ ಕೋಪದಲ್ಲಿ ನಿಜ ಕಂಡುಬರದು. ಒಬ್ಬ ವ್ಯಕ್ತಿಯಿಂದಾಗಿ ನಾವು 'ಸಂತೋಷದಿಂದಿಲ್ಲ' ಎಂದು ಪ್ರದಶರ್ಿಸುವುದೇ ಕೋಪ. ಈ ಮುಜುಗರದ ಎಮೋಷನ್ ಮೂರು ರೀತಿಯಲ್ಲಿ ಹೊರಬೀಳುತ್ತದೆ. ಮೌನ, ಆವೇಶ, ದು:ಖ.
ದಂಪತಿ ಜಗಳವಾಡಿದಾಗ ಒಬ್ಬ ಹೆಂಡತಿ ಊಟ ಬಿಟ್ಟು ದುಃಖಿಸಬಹುದು. ಮತ್ತೊಬ್ಬಳು ನಿಶ್ಶಬ್ದದಿಂದ ತನ್ನ ಗುಹೆಯೊಳಗೆ ಹೋಗಿಬಿಡಬಹುದು. ಒಬ್ಬ ಗಂಡ ಕೆನ್ನೆಯ ಮೇಲೆ ಬಾರಿಸಬಹುದು. ಇಲ್ಲವೇ ಒಳ್ಳೆಯ ರೊಮ್ಯಾನ್ಸ್ ಮೂಲಕ ಇಬ್ಬರೂ ಕ್ಷಣಗಳಲ್ಲಿ ರಾಜೀ ಮಾಡಿಕೊಳ್ಳಬಹುದು.

ಕೋಪ ಬಂದಾಗ ಅಂಕೆಗಳನ್ನು ಎಣಿಸಿ ಕೋಪವನ್ನು ಕಡಿಮೆ ಮಾಡಿಕೊಳ್ಳಬೇಕು. ಕಷ್ಟ ಬಂದಾಗ ಅಂಕೆಗಳನ್ನು ಲೆಕ್ಕ ಮಾಡುತ್ತಾ ಕುಳಿತುಕೊಳ್ಳದೇ ಪರಿಹಾರವನ್ನು ಆಲೋಚಿಸಬೇಕು.

ಅಧಿಕಾರದಿಂದ, ಹಣದಿಂದ ಬಂದ ಪವರ್ನಿಂದ ಬಲವಾದವರು, ತಮಗಿಂತ ಬಲಹೀನರ ಮೇಲೆ ಕೋಪ ತೋರಿಸಿದಾಗ, ಆ ಇನ್ನೊಬ್ಬ ವ್ಯಕ್ತಿ ಮೌನವಾಗಿ ಆ ಬೈಗುಳವನ್ನು ಸಹಿಸಬೇಕಾಗಿ ಬರುತ್ತದೆ. ಹಾಗೆ ಸಹಿಸಿದ ವ್ಯಕ್ತಿ ತನಗಿಂತ ಅಲ್ಪಪ್ರಾಣಿ ಸಿಕ್ಕಿದಾಗ ಅಲ್ಲಿ ಎಗರಿಬೀಳುತ್ತಾನೆ. ಇದನ್ನೇ 'ಸೂಟ್ಕೇಸ್ ಟ್ರಾನ್ಸ್ಫರ್' ಎನ್ನುತ್ತಾರೆ. ಈ ಕಾನ್ಸೆಪ್ಟ್ ಬಗ್ಗೆ 'ವಿಜಯಕ್ಕೆ ಐದು ಮೆಟ್ಟಿಲು' ಎನ್ನುವ ಪುಸ್ತಕದಲ್ಲಿ ವಿವರವಾಗಿ ಚಚರ್ಿಸುವುದು ನಡೆದಿದೆ.
ಕೋಪ ಎರಡು ರೀತಿಯವು. ತಾತ್ಕಾಲಿಕ ಕೋಪ, ಶಾಶ್ವತ ಕೋಪ..! ನಮಗಿಷ್ಟವಾದವರ ಮೇಲೆ ಬರುವುದು ತಾತ್ಕಾಲಿಕ ಕೋಪ. ಇದು ಮಕ್ಕಳ ಮೇಲೆ ತಾಯ್ತಂದೆಯರಿಗೆ ಬರುವುದು. ವಿದ್ಯಾಥರ್ಿಗಳ ಮೇಲೆ ಟೀಚರುಗಳು ಪ್ರದಶರ್ಿಸುವುದು. ಉದ್ಯೋಗಿಗಳ ಮೇಲೆ ಮಾಲೀಕರು ತೋರಿಸುವುದು.
ಎರಡನೆಯ ರೀತಿಯದು ಶಾಶ್ವತಕೋಪ. ಅವಿಭಕ್ತ ಕುಟುಂಬದಲ್ಲಿ ಅಣ್ಣತಮ್ಮಂದಿರೂ, ಓರಗಿತ್ತಿಯರೂ, ಬಿಜಿನೆಸ್ ಭಾಗಸ್ವಾಮಿಗಳೂ,  ಸಿನಿಮಾ ವ್ಯಾಪಾರದಲ್ಲಿ ನಿಮರ್ಾಪಕರೂ, ಕೊನೆಗೆ ಗಂಡಹೆಂಡಿರೂ ವಿಧಿಯಿಲ್ಲದ ಪರಿಸ್ಥಿತಿಗಳಲ್ಲಿ ಅಯಿಷ್ಟವಾಗಿ 'ಸೇರಿ ಇರಬೇಕಾಗಿ' ಬಂದಾಗ, ಅವರ ನಡುವೆ ಒಂದು ನಿಶ್ಶಬ್ದ ಯುದ್ಧ ನಡೆಯುತ್ತಾ ಇರುತ್ತದೆ. ಒಂದು ದಿನ ಅಗ್ನಿಪರ್ವತದಂತೆ ಸ್ಫೋಟಗೊಂಡು, ಒಬ್ಬರ ಮೇಲೆ ಒಬ್ಬರಿಗೆ ಇರುವ ಕೋಪವನ್ನೆಲ್ಲಾ ಕಕ್ಕಿ, 'ಛೀ...! ಆ ದಿನ ನೀನು ಹೀಗೆ ವತರ್ಿಸಿದೆ' ಎಂದರೆ, 'ಛೀ.. ಛೀ.. ಆ ದಿನ ನೀನು ಹೀಗೆ ಮಾಡಲಿಲ್ಲವೇ?' ಎಂದು ಬೈದುಕೊಳ್ಳುತ್ತಾರೆ. ಅದು ಇಬ್ಬರ ನಡುವಿನ ಭಯಂಕರ ನಿಶ್ಶಬ್ದಕ್ಕೋ, ಶಾಶ್ವತ ವಿದಾಯಕ್ಕೋ ದಾರಿ ಮಾಡುತ್ತದೆ.

ಡಿಪ್ರೆಷನ್ ಹುಣ್ಣಿನಂತಿದ್ದರೆ, ಕೋಪ ನವೆಯಂತೆ. ಮತ್ತೆ ಸಿನಿಮಾ ಡೈಲಾಗಿನ ಹಾಗಿದೆಯಾ? ಆದರೆ ನಿಜವೇ ಅಲ್ಲವೇ? ಹುಣ್ಣು ವಾಸಿಯಾಗಬೇಕಾದರೆ, ಅದನ್ನು ಕೆರೆಯಬಾರದು. ಆದರೆ ನಾವು ಕೆರೆದಷ್ಟೂ ನವೆ ನೀಡುವ ತಾತ್ಕಾಲಿಕ ಉಪಶಮನವನ್ನು ಆನಂದಿಸುತ್ತಾ, ಅದು ಶಾಶ್ವತವಾದ ಗಾಯವನ್ನು ಮಾಡುತ್ತದೆಂಬ ವಿಷಯವನ್ನು ಮರೆತುಬಿಡುತ್ತೇವೆ.
ಒಂದೊಂದು ಸಲ ಇತರರು ಮಾತಿನ ಭರದಲ್ಲಿ ಹೇಳಿದ ಚಿಕ್ಕ ಮಾತನ್ನು ಕೂಡ ಹಿಡಿದುಕೊಂಡು ಬಹಳ ಜನ ನೊಂದುಕೊಳ್ಳುತ್ತಾ ಇರುತ್ತಾರೆ. ಕೋಪ ತರಿಸಿಕೊಳ್ಳುತ್ತಾರೆ. 'ಈ ಪ್ರಪಂಚದಲ್ಲಿ ಯಾರೂ ಬೇಕೆಂದು ನಮ್ಮನ್ನು ನೋಯಿಸುವುದಿಲ್ಲ. ಕೇವಲ ತಮ್ಮ ಎಮೋಷನ್ಗಳಿಂದ ಹೊರಬೀಳಲು ಆಗದೇ, ಅದನ್ನು ನಮ್ಮ ಮೇಲಿನ ಕೋಪದ ರೂಪದಲ್ಲಿ  ಪ್ರದಶರ್ಿಸುತ್ತಾರೆ' ಎನ್ನುವ ಚಿಕ್ಕ ಸಂಗತಿಯನ್ನು ತಿಳಿದುಕೊಂಡರೆ, ನಮಗೆ ಅವರ ಮೇಲೆ ಕೋಪ ಬರುವುದಿಲ್ಲ. ಕರುಣೆ ಉಂಟಾಗುತ್ತದೆ. ನಿಮ್ಮ ಬಾಲ್ಯವನ್ನು ನೆನೆಸಿಕೊಳ್ಳಿ. ಚಿಕ್ಕಂದಿನಲ್ಲಿ ಯಾವುದೋ ವಿಷಯವಾಗಿ ನಿಮ್ಮನ್ನು ಯಾರೋ ಸಿಕ್ಕಾಪಟ್ಟೆ ಬೈದಿರುತ್ತಾರೆ. ಆ ವಿಷಯವನ್ನು ಅವರು ಯಾವಾಗಲೋ ಮರೆತುಬಿಟ್ಟಿರುತ್ತಾರೆ. ನಿಮಗೆ ಆ ಮೂದಲಿಕೆ, ಅದರ ಹಿಂದಿರುವ ಕಾರಣಗಳು ಈಗಲೂ ನೆನಪಿವೆಯೆಂದರೆ ನಿಮ್ಮ ಗಾಯ ಇನ್ನೂ ಹಸಿಯಾಗಿದೆ ಎಂದೇ ಅರ್ಥ.

ಕೋಪದ ತಮ್ಮ ಡಿಪ್ರೆಷನ್. ಎದುರಿನವರ ಸಿಟ್ಟಿಗೆ, ಅದರಿಂದ ನಮಗೆ ನಡೆದ ಅಪಮಾನಕ್ಕೆ, ನಾವು ಪ್ರತಿಸ್ಪಂದಿಸಿದಾಗ, ಆ ಸ್ಪಂದನದಲ್ಲಿ ಆವೇಶಗಳು, ದು:ಖಗಳನ್ನು ಬಿಟ್ಟುಬಿಡುವುದು ದೊಡ್ಡ ಕಷ್ಟವೇನಲ್ಲ. ಒಂದು ಚಿಕ್ಕ ಪ್ರಯತ್ನ ಮಾಡಿ ನೋಡಿ. ಯಾರ ಮೇಲೂ ಕೋಪ, ಹಗೆ, ಸಿಟ್ಟು, ಆವೇಶ ಇಲ್ಲದೇ 24 ಗಂಟೆಗಳ ಬಾಧೆಯನ್ನೂ, ದು:ಖವನ್ನೂ, ಅವಮಾನವನ್ನೂ ಸಹಿಸಿರಿ. ಹಿಂದಕ್ಕೆ ತಿರುಗಿ ನೋಡಿದರೆ ಆ ದಿನ ನಿಮಗೇ ಬಹಳ ಆಶ್ಚರ್ಯವಾಗಿಯೂ, ರಿಲೀಫ್ ಆಗಿಯೂ ಅನ್ನಿಸುತ್ತದೆ. ಶರೀರದೊಂದಿಗೆ ಮನಸ್ಸಿಗೂ ಬಹಳವೇ ಹಗುರವಾದ ಅನುಭೂತಿ ಉಂಟಾಗುತ್ತದೆ. ಅಕಸ್ಮಾತ್ತಾಗಿ ಯಾವುದೋ ಹೊಸ ಶಕ್ತಿ ಪ್ರವೇಶಿಸಿದ ಫೀಲಿಂಗ್ ಉಂಟಾಗುತ್ತದೆ. ಕೆಲವು ದಿನಗಳ ಕಾಲ ಸಾಧನೆ ಮಾಡಿದರೆ ಇದು ಅಭ್ಯಾಸವಾಗಿಬಿಡುತ್ತದೆ.
'ನಿನ್ನ ಹೊರತು ನಿನ್ನನ್ನು ಯಾರೂ ನೋಯಿಸಲಾರರು. ನಿನ್ನನ್ನು ಬಿಟ್ಟು ನಿನ್ನನ್ನು ಬೇರೆ ಯಾರೂ ಕಾಪಾಡರು. ನೀನು ಜುದಾಸ್ ಆಗಬೇಕಾ? ಜೀಸಸ್ ಆಗಬೇಕಾ? ಎನ್ನುವುದು ನಿನ್ನ ಮೇಲೇ ಅವಲಂಬಿತವಾಗಿರುತ್ತದೆ' ಎನ್ನುತ್ತಾನೊಬ್ಬ ಫಿಲಾಸಫರ್.

ಆಪರೇಷನ್ ಮಾಡಿ ಬುಲೆಟ್ಟುಗಳನ್ನು ತೆಗೆದ ನಂತರ ಗಾಯದ ಗುರುತು ಮಾಸಿಹೋಗಬಹುದು. ಆದರೆ ಕೋಪದಲ್ಲಿ ಅನಾಲೋಚಿತವಾಗಿ ಹೇಳಿದ ಚಿಕ್ಕಮಾತು ಎದುರಿನವರ ಹೃದಯದ ಮೇಲೆ ಜೀವನಪೂತರ್ಿ ಮಚ್ಚೆಯಂತೆ ನಿಂತುಹೋಗುತ್ತದೆ. ಮುಖ್ಯವಾಗಿ  ಮದುವೆ ಆದ ಹೊಸತರಲ್ಲಿ.       

'ಏನೆಂದುಕೊಂಡಿದ್ದೀ ನನ್ನ ಬಗ್ಗೆ? ನೀನು ಸಾಲ ತೆಗೆದುಕೊಂಡು ಐದು ವರ್ಷಗಳಾಗಿವೆ. ನಾಳೆ ಐದು ಗಂಟೆಗೆಲ್ಲಾ ಕನಿಷ್ಠಪಕ್ಷ ಅರ್ಧ ಹಣವನ್ನಾದರೂ ಕೊಟ್ಟರೆ ಸರಿ! ಇಲ್ಲದಿದ್ದರೆ ನಿನ್ನವರೊಂದಿಗೆ ನೀನೂ ಉಳಿಯುವುದಿಲ್ಲ..' ಫೋನ್ ಇಟ್ಟುಬಿಟ್ಟ ಅವನು. ಮರುದಿನ ಸಾಲ ತೆಗೆದುಕೊಂಡವನು ಭಯ ಪಡುತ್ತಲೇ ಒಳಗೆ ಪ್ರವೇಶಿಸಿದ. 'ಹಣ ತಂದಿರುವೆಯಾ?' ಕರ್ಕಶವಾಗಿ ಕೇಳಿದ ಅವನು. ಹಣವನ್ನೇನೂ ತರಲಿಲ್ಲ.. ಆದರೆ..' ಎಂದು ಹೇಳುತ್ತಿದ್ದಂತೆ ಆ ಮಾತಿಗೆ ಕೋಪಗೊಂಡು ಉರಿದುಹೋಗಿ ಪಿಸ್ಟಲ್ ತೆಗೆದು ಢಮ್ ಢಮ್ ಎಂದು ಸುಟ್ಟುಬಿಟ್ಟ. ಗಾಯಗೊಂಡ ವ್ಯಕ್ತಿ ನೆಲದ ಮೇಲೆ ಕುಸಿಯುತ್ತಾ ಉಳಿದ ವಾಕ್ಯವನ್ನು ಪೂತರ್ಿ ಮಾಡಿದ. '.. ಬ್ಯಾಂಕ್ ಡ್ರಾಫ್ಟ್ ತಂದಿದ್ದೇನೆ'. (ಮುಂದುವರಿಯುವುದು)
-ಯಂಡಮೂರಿ ವಿರೇಂದ್ರನಾಥ್
ಕನ್ನಡಕ್ಕೆ: ಯತಿರಾಜ್ ವೀರಾಂಬುಧಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಕೇರಳಂ: ಮಿನಿ ಕೂಪರ್ ಕಾರು ಅಪಘಾತದಲ್ಲಿ ಮೂವರ ಸಾವು, ತಡರಾತ್ರಿಯಲ್ಲಿ ಹಿಂದೂ ಯುವತಿಯರು ಹೊರಗೆ ಹೋಗಿದ್ಯಾಕೆ? ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ

ಸ್ಟಿಂಗ್‌ ಆಪರೇಷನ್‌ ಬಗ್ಗೆ ಬೇರೆಯವರು ಮಾತನಾಡುವ ಆಗಿಲ್ಲ ಎನ್ನಲು ನೀವೇನು ಸರ್ವಾಧಿಕಾರಿಯೇ ಪ್ರಿಯಾಂಕ್‌ ಖರ್ಗೆ..?