ಬೈಟುಕಾಫಿ

ಇಟಾಲಿಯನ್ ಫುಡ್ ಎಂಬ ಸೋಜಿಗ

ಮರಿನಾರ ಪಾಸ್ತಾ
ಬೇಕಾಗುವ ಸಾಮಗ್ರಿ:

1 ದೊಡ್ಡ ಚಮಚೆ ಆಲಿವ್ ಎಣ್ಣೆ, ಅರ್ಧ ಚಮಚೆ ಬೆಳ್ಳುಳ್ಳಿ ಪೇಸ್ಟ್, 1 ಟೊಮೆಟೊ ಪ್ಯೂರಿ, ಪಾರ್ಸ್ಲಿ ಎಲೆ, ಅರ್ಧ ಚಮಚೆ ಕೆಂಪು ಮೆಣಸಿನಪುಡಿ, 1 ಚಮಚೆ ಒಣಗಿದ ಒರೆಗಾನ್ ಎಲೆ, 1 ಬಟ್ಟಲು ಬೇಯಿಸಿದ ಪಾಸ್ತಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:
ಒಂದು ಬಾಣಲೆಯಲ್ಲಿ ಆಲಿವ್ ಎಣ್ಣೆ ಹಾಕಿ ಬಿಸಿ ಆದ ನಂತರ ಬೆಳ್ಳುಳ್ಳಿ ಪೇಸ್ಟ್‌ಹಾಕಿ ಕಂದು ಬಣ್ಣ ಬರುವರೆಗೂ ಮಂದ ಉರಿಯಲ್ಲಿ ಫ್ರೈ ಮಾಡಿ. ಟೊಮೆಟೊ ಪ್ಯೂರಿ ಹಾಕಿ ನಂತರ ಬೇಸಿಲ್, ಪಾರ್ಸ್ಲಿ, ಒರೆಗಾನ್ ಎಲೆಗಳನ್ನು ಸೇರಿಸಿ. ಕೆಂಪು ಮೆಣಸಿನಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ 20 ನಿಮಿಷ ಬೇಯಲು ಬಿಡಿ. ನಂತರ ಬೇಯಿಸಿದ ಪಾಸ್ತಾದೊಂದಿಗೆ ಸವಿಯಿರಿ.

ಪಾಸ್ತಾ ಕನೇಲಿನ್ ಬೀನ್ಸ್ ಸೂಪ್
ಬೇಕಾಗುವ ಸಾಮಗ್ರಿ:

300 ಗ್ರಾಂ ಕನೇಲಿನ್ ಬೀನ್ಸ್, 1 ಬೆಳ್ಳುಳ್ಳಿ, 4 ಚಮಚೆ ಆಲಿವ್ ಎಣ್ಣೆ, 50 ಗ್ರಾಂ ಟೊಮೆಟೊ ಪ್ಯೂರಿ, 200 ಗ್ರಾಂ ಚಿಕ್ಕ ಗಾತ್ರದ ಪಾಸ್ತಾ, 400 ಮಿ.ಲೀ. ನೀರು, ಮೆಣಸಿನಪುಡಿ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಆಲಿವ್ ಎಣ್ಣೆ ಬಿಸಿ ಮಾಡಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ. ನಂತರ ಹಿಂದಿನ ರಾತ್ರಿ ನೆನಸಿದ ಕನೇಲಿನ್ ಬೀನ್ಸ್ ಹಾಕಿ ಕೆಲವು ನಿಮಿಷ ಬೇಯಿಸಿ. ನಂತರ ಟೊಮೆಟೊ ಪ್ಯೂರಿ, ಮೆಣಸಿನಪುಡಿ, ರುಚಿಗೆ ತಕ್ಕಷ್ಟು ಉಪ್ಪು, ನೀರು ಹಾಕಿ 10 ರಿಂದ 15 ನಿಮಿಷ ಬೇಯಿಸಿ. ನೀರಿನ ಪ್ರಮಾಣ ಕಡಿಮೆ ಆದ ನಂತರ ಪಾಸ್ತಾ ಸೇರಿಸಿ 8ರಿಂದ 10 ನಿಮಿಷ ಬೇಯಿಸಿದರೆ ಪಾಸ್ತಾ ಕನೇಲಿನ್ ಬೀನ್ಸ್ ಸೂಪ್ ಸವಿಯಲು ಸಿದ್ಧ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಕೊನೆಯ ಓವರ್ ನಲ್ಲಿ ಭರ್ಜರಿ ಜಯ, ಪ್ಲೇಆಫ್ ಗೆ RCB ಲಗ್ಗೆ, ರೇಸ್ ನಿಂದ PBKS ಔಟ್, CSK ಆಸೆ ಜೀವಂತ!

IPL 2026: RCB vs PBKS ಪಂದ್ಯದಲ್ಲಿ ಎರಡು ಭಾರೀ ದಾಖಲೆ ನಿರ್ಮಿಸಿದ Virat Kohli

ಜನರಲ್ ದ್ವಿವೇದಿ ಹೇಳಿಕೆ 'ಪ್ರಚೋದನಕಾರಿ'; ಇದು ವಿನಾಶಕ್ಕೆ ಕಾರಣವಾಗಬಹುದು: ಭಾರತಕ್ಕೆ ಪಾಕ್ ಸೇನೆ ಎಚ್ಚರಿಕೆ

ಬೆಂಗಳೂರು- ಮುಂಬೈ ನಡುವಿನ ಹೊಸ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ: ಶೀಘ್ರದಲ್ಲೇ ವಂದೇ ಭಾರತ್ ರೈಲು ಸೇವೆ ಆರಂಭ- ಅಶ್ವಿನಿ ವೈಷ್ಣವ್

ಕೋಲಾರ: ಕೃಷಿ ಹೊಂಡದಲ್ಲಿ ಮಕ್ಕಳಿಗೆ ಈಜು ಕಲಿಸುವಾಗ ದುರಂತ; ತಂದೆ ಸೇರಿ ಇಬ್ಬರು ಮಕ್ಕಳು ಜಲಸಮಾಧಿ

SCROLL FOR NEXT