ಬೈಟುಕಾಫಿ

ಫೇಸ್‌ಬುಕ್ ಲೈಕೆಲ್ಲ ಲೀಕಾದಾಗ

ಯಾರೋ ಫೇಸ್‌ಬುಕ್‌ನಲ್ಲಿ 'ಹುಡುಗಿಯರು ಅಷ್ಟೊಂದು ಪ್ರಚೋದನಕಾರಿಯಾಗಿ ಬಟ್ಟೆ ಹಾಕ್ಕೋತಾರೆ. ಅದಕ್ಕೇ ರೇಪ್‌ಗಳಾಗೋದು' ಅಂತ ಪೋಸ್ಟಿಸಿರುತ್ತಾನೆ. ತಗೊಳ್ಳಿ, ಅಲ್ಲೇ ಕ್ಯಾಕರಿಸಿ ಉಗೀತೀರಿ. ಇನ್ಯಾರೋ 'ಮೋದಿ ಬಂದು ಒಂದು ತಿಂಗ್ಳಾಯ್ತಲ್ವಾ, ಇನೂ ಏನೂ ಮಾಡಿಲ್ಲ?' ಅಂತಾನೆ. ಅವನಿಗೆ ಮತ್ಯಾರೋ ಉಗಿದು ಉಪ್ಪು ಹಾಕಿರ್ತಾರೆ. ಇನ್ಯಾವನೋ ತಲೆ ಗುಂಡು ಹೊಡೆಸಿಕೊಂಡು ಬಂದು ಪೋಸ್ ಕೊಟ್ಟಿರುತ್ತಾನೆ. ದಬದಬಾ ಮುನೂರ ಹನೆರಡು ಲೈಕುಗಳು.
ಹುಷಾರು. ನಿಮ್ಮ ಭಾವನೆಗಳು ಹಾಗೆಲ್ಲ ಇರಬೇಕಾದ್ದೇ. ಆದರೆ ಆದನು ಪಬ್ಲಿಕ್ಕಲ್ಲಿ ತೋರಿಸಿಕೊಳ್ತಾ ನೀವೂ ಇನ್ಯಾರದೋ ಅಧ್ಯಯನದ ವಸ್ತು ಆಗಿಬಿಟ್ಟೀರಿ!
ಆಧುನಿಕ ನೆಟ್ ಜಗತ್ತು ಎಷ್ಟು ಸಂಕೀರ್ಣವಾಗಿಬಿಟ್ಟಿದೆ ಅಂದರೆ, ನೀವು ಎಲ್ಲೋ ಹಾಕಿದ ಕಾಮೆಂಟ್ ಇನೆಲ್ಲೊ ಯಾರದೋ ನರಗಳನು ಮೀಟಿರುತ್ತೆ. ನಿಮ್ಮ ಯಾವುದೋ ಎಮೋಷನ್ ಇನ್ಯಾರದೋ ಸರ್ವೆಗೆ ತುತ್ತಾಗಿಬಿಟ್ಟಿರುತ್ತೆ. ಇದಕ್ಕೆ ಲೇಟೆಸ್ಟ್ ಉದಾಹರಣೆ ಫೇಸ್‌ಬುಕ್ಕು. ಇತ್ತೀಚೆಗೆ ಅದು ಅಧ್ಯಯನವೊಂದಕ್ಕೆ ತನ 7 ಲಕ್ಷ ಸದಸ್ಯರ ಡಾಟಾ ಕದ್ದು ಒದಗಿಸಿ ಸಿಕ್ಕಿಬಿದ್ದಿದೆ. ನೀವು ಫೇಸ್‌ಬುಕ್‌ನಲ್ಲಿ ಕೂಡ ಸೇಫ್ ಅಲ್ಲ.
ಅದಕ್ಕೆ ಹೆಸ್ರು ಸೈಂಟಿಫಿಕ್ ಸ್ಟಡಿ ಅರ್ಥಾತ್ ವೈಜ್ಞಾನಿಕ ಅಧ್ಯಯನ. ಡಾಟಾ ತೆಗೆದುಕೊಂಡವರು ಕಾರ್ನೆಲ್ ಮತ್ತು ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ಪ್ರೊಫೆಸರುಗಳು. ಅಧ್ಯಯನದ ವಸ್ತು: ಜಾಲತಾಣಗಳಲ್ಲಿ ನೀವು ಅಭಿವ್ಯಕ್ತಿಪಡಿಸುವ ಭಾವನೆಗಳು ನಿಜಕ್ಕೂ ನಿಮ್ಮದೇ ಆಗಿರುತ್ತವೋ ಅಥವಾ ಅದೂ ಇನೊಬ್ಬರ ಪ್ರಭಾವದಿಂದ ಮ್ಯಾನಿಪ್ಯುಲೇಟ್ ಆಗಿರ್ತವೋ?
ಸಮೀಕ್ಷೆಯ ಫಲಿತಾಂಶ ಹೀಗಿತ್ತು: ನೀವು ಯಾವುದಕ್ಕೆ ರಿಯಾಕ್ಟ್ ಮಾಡುತ್ತೀರೋ ಆ ಸಂಗತಿ ಎಷ್ಟು ಗಡುತರವಾಗಿದೆ ಅದರ ಮೇಲೆ ನಿಮ್ಮ ಪ್ರತಿಕ್ರಿಯೆಯ ಪ್ರಮಾಣ, ವೈವಿಧ್ಯ ನಿರ್ಧಾರಿತವಾಗುತ್ತೆ. ಅಂದರೆ, ಇಲ್ಲಿ ಕೆಟ್ಟಾಕೊಳಕು ಸಂಗತಿಯೊಂದು ಚರ್ಚಿತವಾಗುತ್ತಿದ್ದರೆ, ನಿಮ್ಮ ಪ್ರತಿಕ್ರಿಯೆಯೂ ಅದೇ ರೀತಿಯಲ್ಲಿರುವ ಸಾಧ್ಯತೆ ಅಧಿಕ. ಕಠಿಣ ಕಾಮೆಂಟ್‌ಗಳಿಗೆ ಒಡ್ಡಿಕೊಂಡರೆ ನೀವೂ ಕೂಲ್‌ನೆಸ್ ಕಳೆದುಕೊಂಡು ಯಕ್ಕಾಮಕ್ಕಾ ಎಗರಾಡುವುದು ಗ್ಯಾರಂಟಿ. ಅಂದರೆ ನಿಮ್ಮ ನಿಜವಾದ ವ್ಯಕ್ತಿತ್ವಕ್ಕೆ ಆಲ್ಲಿ ಜಾಗವೇ ಇಲ್ಲ. ಚರ್ಚಿತವಾಗುತ್ತಿರುವ ಕಂಟೆಂಟ್‌ಗೆ ಸಂಬಂಧಿಸಿದಂತೆ ನಿಮ್ಮ ಭಾಷೆ, ಪ್ರತಿಕ್ರಿಯೆ ಅಪ್‌ಡೇಟ್ ಆಗಿರಬೇಕಷ್ಟೇ. ಜತೆಗೆ ಹಾರ್ಡ್‌ಕೋರ್ ಕೂಡ ಆಗಿರಬೇಕು. ಇದು ಕೂಡ ನಮ್ಮ ಅರಿವಿಗೇ ಬರದೆ ಘಟಿಸುವ ಸಂಗತಿ. ಇದೊಂಥರಾ ಗುಂಪುಗಲಾಟೆಯಲ್ಲಿ ಸಭ್ಯರು ಕೂಡ ಭಾಗವಹಿಸುತ್ತಾರಲ್ಲ, ಪಿಕ್‌ಪಾಕೆಟ್‌ನೋನು ಸಿಕ್ಕಿಬಿದ್ದಾಗ ನಾವು ಕೂಡ ಒಂದೇಟು ಹಾಕಿ ನಮ್ಮ ದಾರಿ ಹಿಡಿದು ಹೋಗುತ್ತೀವಲ್ಲ, ಅಂಥದು.
ಅಧ್ಯಯನ ಚೆನಾಗಿದೆ, ಫಲಿತಾಶವೂ ಚೆನಾಗಿಯೇ ಇದೆ. ಅದನು ಮಾಡಲು ನಮ್ಮ ಪೋಸ್ಟ್, ಕಾಮೆಂಟ್‌ಗಳನು ಬಳಸಿಕೊಂಡದ್ದೇಕೆ ಎಂಬುದೀಗ ಫೇಸ್‌ಬುಕ್ ಯೂಸರ್‌ಗಳ ತಕರಾರು. ನಮಗರಿಯದೇ ನಾವೇ ಬಲಿಪಶುಗಳಾಗಿಬಿಟ್ಟೆವಲ್ಲ ಎಂದು ಹಲ್ಲು ಕಡಿಯುತ್ತಿರುವ ಅವರೆಲ್ಲ, ಯೂಸರ್‌ಗಳೆಲ್ಲ ಲೂಸರ್‌ಗಳಾಗಿಬಿಡುವ ಮುನ ಎಚ್ಚೆತ್ತುಕೋಬೇಕು ಅನುತ್ತಿದ್ದಾರೆ.


- ವನಮಾಲಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿ.ಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ; ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!