ಬೈಟುಕಾಫಿ

ಜಗುಲಿ

ಮಕ್ಕಳಿಗಲ್ಲ ಮೊಬೈಲು
ಬೇಡ ಪೋಷಕರೇ ಬೇಡ
ಮಕ್ಕಳಿಗೆ ಮೊಬೈಲ್ ಕೊಡಬೇಡ
ಕೈಯಲ್ಲಿ ಹಿಡಿಯುತ್ತಾರೆ ಮೊಬೈಲು
ಮಾಡುತ್ತಾರೆ ತುಂಬಾ ಸ್ಟೈಲು
ಸದಾ ಮೊಬೈಲಿನದೇ ಒಡನಾಟ
ಇದರಲೇ ಆಡುತ್ತಿರುತ್ತಾರೆ ಆಟ
ಇವರಿಗೆ ಮೆಸೇಜ್ ಕಳಿಸುವ ಚಟ
ಫೋಟೋ ಕ್ಲಿಕ್ಕಿಸುವ ಹಠ
ಓದಲು ಇವರಿಗಿಲ್ಲ ಆಸಕ್ತಿ
ಹಿರಿಯರಲ್ಲಿಲ್ಲ ಇವರಿಗೆ ಭಕ್ತಿ
ಮಕ್ಕಳಿಗೆ ಮೊಬೈಲ್ ಬೇಡ ಜೋಕೆ
ವ್ಯಾಸಂಗ ಮುಗಿದ ಮೇಲೆ ಓಕೆ
= ರಮ್ಯಾ ಆರ್ ನಾಯಕ್, ಕಾರ್ಕಳ

ಜವಾಬ್ದಾರಿ ಇದ್ದವರಿಗೆ ನೀಡಿ
ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಿಂದ ಹಿಡಿದು ಎಲ್ಲರ ಕೈಯಲ್ಲೂ ಮೊಬೈಲ್ ಸಾಮಾನ್ಯ. ಆದರೆ ಮಕ್ಕಳ ಕೈಗೆ ಕೊಡೋ ಮುಂಚೆ ಕೊಂಚ ಯೋಚಿಸಿ ನೀಡುವುದು ತುಂಬಾನೆ ಮುಖ್ಯ. ಕೆಲಮೊಮ್ಮೆ ಮೊಬೈಲ್‌ನಿಂದಲೇ ಅವರ ಭವಿಷ್ಯವನ್ನು ಹೆತ್ತವರೇ ಹಾಳು ಮಾಡಿದಂತಾಗುವುದು. ತುಂಬಾನೆ ಬುದ್ಧಿ ಹೇಳಿ ಸಣ್ಣ ವಯಸ್ಸಿನಲ್ಲಿ ಕೊಟ್ಟರೆ ಪಠ್ಯ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಬದಲು ಮೊಬೈಲ್ ಆಟಕ್ಕೆ ಹತ್ತಿರವಾಗುತ್ತಿದ್ದಾರೆ. ಆದ್ದರಿಂದ ಪದವಿಗೆ ಸೇರುವ ಸೇರುವ ಮುನ್ನ ಸೂಕ್ತ. ಸ್ವಲ್ಪ ಪ್ರಬುದ್ಧರಾದ ಮೇಲೆ ಹೇಗೆ ಉಪಯೋಗಿಸಬೇಕೆಂದು ಹಾಗೂ ಅತಿಯಾದ ಬಳಕೆಯಿಂದ ಯಾವ ಪರಿಣಾಮ ಬೀರುತ್ತದೆ ಎಂದೂ ತಿಳಿದಿರುತ್ತದೆ. ಟಿ
= ಅಶ್ವಿತಾ, ಪತ್ರಿಕೋದ್ಯಮ ವಿದ್ಯಾರ್ಥಿನಿ, ಉಜಿರೆ

ಮೊಬೈಲ್ ಸಂಕ್ರಾಮಿಕ ರೋಗವಿದ್ದಂತೆ
ಮೊಬೈಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳ ಮುಂದುವರಿದಿದ್ದು ಮಕ್ಕಳಿಗೆ ಆಟದ ವಸ್ತುವಿನಂತಿದೆ. ವಯಸ್ಸಿನ ಮಿತಿಯು ಇಲ್ಲ ಎಂಬಂತೆ ಎಲ್ಲಾ ವಯಸ್ಸಿನವರ ಕೈಯಲ್ಲಿ ಆಡುತ್ತಿದೆ. ಮಕ್ಕಳಿಗೆ ಕೊಡಿಸುವ ಮುನ್ನ ಅವರ ಆಲೋಚನ ಶಕ್ತಿಯ ಮಟ್ಟ ತಿಳಿದು ಕೊಡಿಸಬೇಕು. ಮೊಬೈಲ್‌ಗಾಗಿ ಮಕ್ಕಳ ಜೀವನವನ್ನೇ ಬಲಿ ತೆಗೆದುಕೊಂಡ ನಿದರ್ಶನಗಳಿವೆ. ಓದುವ ಸಮಯದಲ್ಲಿ ಪುಸ್ತಕವೇ ಮೇಲು. ಇಲ್ಲದಿದ್ದರೆ 'ನಾ ಬಿಟ್ಟನೆಂದರೂ ಬಿಡದೀ ಮಾಯೇ' ಹಾಗೆ ಮೊಬೈಲ್ ಬಳಕೆಯು ಅಭ್ಯಾಸವಾಗಿ ಸಂಕ್ರಾಮಿಕ ರೋಗದಂತಾಗುತ್ತದೆ. ಇನ್ನೊಬ್ಬರ ಕೈಯಲ್ಲಿ ಕುಣಿಯುವ ಮೊಬೈಲ್‌ನ ಆಕರ್ಷಣೆಗೆ ಒಳಗಾಗುವುದು ಉಚಿತವಲ್ಲ. ಆದ್ದರಿಂದ ಪೋಷಕರು ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದೇ ಸೂಕ್ತ.
= ಲತಾ. ಎ, ಪತ್ರಿಕೋದ್ಯಮ ವಿದ್ಯಾರ್ಥಿನಿ, ಉಜಿರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!