ಬೈಟುಕಾಫಿ

ಸರ್ವವ್ಯಾಪಿ ಎಂಎಸ್‌ಜಿ

ಗ್ಲುಕೊಮೇಟ್ ಕುರಿತು ಚರ್ಚಿಸುತ್ತಿದ್ದೆವು. ಅದನ್ನು 'ಮೆಸೆಂಜರ್ ಮಾಲೆಕ್ಯೂಲ್‌'  ಎಂದೇ ಗುರುತಿಸಲಾಗುತ್ತದೆ. ಹೈಪೊಗ್ಲೈಸಿಮಿಯಾ ಗ್ಲುಕೊಮೇಟ್ ಅನ್ನು ಸ್ರವಿಸುವಂತೆ ಮೆದುಳನ್ನು ಪ್ರೇರೇಪಿಸುತ್ತದೆ. ಗ್ಲುಕೊಮೇಟ್ ಅತಿಯಾದರೆ ಮೆದುಳು ಮತ್ತು ನರವ್ಯೂಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅದರಿಂದ ಈಗಾಗಲೇ ತಿಳಿದಿರುವಂತೆ ಖಿನ್ನತೆ, ಆತಂಕ, ಸಿಟ್ಟು ಇತ್ಯಾದಿ ಮಾನಸಿಕ ಸಂಬಂಧಿ ಅಡ್ಡಪರಿಣಾಮಗಳು ಮಾತ್ರವಲ್ಲ, ದೈಹಿಕ ಆರೋಗ್ಯದ ಮೇಲೆಯೂ ಹಲವಾರು ಅಡ್ಡಪರಿಣಾಮಗಳು ಉಂಟಾಗುತ್ತವೆ. ತೀವ್ರ ಸ್ವರೂಪದ ಹೃದಯಾಘಾತ ಸಹ ಅವುಗಳಲ್ಲಿ ಒಂದು. ಅದರಲ್ಲೂ ಮೊನೊಸೋಡಿಯಂ ಗ್ಲುಕೊಮೇಟ್ (ಎಂಎಸ್ಜಿ) ಬಹಳ ಅಪಾಯಕಾರಿ. ಇವು ಆಧುನಿಕ ಆಹಾರ ಮಾರುಕಟ್ಟೆಯ ಅವಿಭಾಜ್ಯ ಅಂಗವೇ ಆಗಿಬಿಟ್ಟಿರುವುದರಿಂದ ಇಂಥದ್ದೇ ಪದಾರ್ಥದಲ್ಲಿ ಗ್ಲುಕೊಮೇಟ್ ಅಥವಾ ಎಂಎಸ್ಜಿ ಇದೆ ಎಂದು ನಿಖರವಾಗಿ ಹೇಳುವುದು ಕಷ್ಟ. ಆಹಾರೋದ್ಯಮಿಗಳಿಗೆ ತಮ್ಮ ಗ್ರಾಹಕರ ಆರೋಗ್ಯದ ಕುರಿತು ಕಿಂಚಿತ್ತಾದರೂ ಕಾಳಜಿ ಇದ್ದರೆ ಗ್ಲುಕೊಮೇಟ್ ಪ್ರಮಾಣ ತುಸು ಕಡಿಮೆ ಆಗಬಹುದು. ಗ್ರಾಹಕರ ದೃಷ್ಟಿಯಿಂದ ಹೇಳುವುದಾದರೆ ಇನ್‌ಗ್ರೀಡಿಯಂಟ್‌ಗಳ ಪಟ್ಟಿ ನೋಡಿದರೂ ಗ್ಲುಕೊಮೇಟ್‌ಗಳನ್ನು ಗುರುತಿಸಲಾಗದು. ಏಕೆಂದರೆ ಇವು ಕೃತಕ ಫ್ಲೇವರ್‌ಗಳು, ಬಣ್ಣ ಇತ್ಯಾದಿಗಳಲ್ಲಿ ಅಡಗಿಕೊಂಡಿರುತ್ತವೆ.
ಗ್ಲುಕೊಮೇಟ್, ಎಂಎಸ್ಜಿಗಳನ್ನು ಗುರುತಿಸುವುದು ಕಷ್ಟ ಅಂತಾದರೆ ಆ ಕುರಿತು ಇಲ್ಲಿ ಬರೆಯುವ ಅಗತ್ಯವಾದರೂ ಏನು ಎಂದು ಕೇಳಬಹುದು. ಗುಟ್ಟು ಇರುವುದು ಇಲ್ಲಿ. ಇವು ಹೇರಳವಾಗಿರುವುದು ಸಂಸ್ಕರಿತ ಆಹಾರ ಅಥವಾ ಪ್ರೊಸೆಸ್ಡ್ ಫುಡ್‌ಗಳಲ್ಲಿ. ಇವತ್ತಿನ ಜಮಾನ ನಿಂತಿರುವುದೇ ಪ್ರೊಸೆಯ್ಡ್ ಫುಡ್‌ಗಳ ಮೇಲಲ್ಲವೆ? ಯಾವುದೇ ಫುಡ್ ಬಜಾರ್, ಸೂಪರ್ ಮಾರ್ಕೆಟ್, ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳಿಗೆ ಹೋದರೂ ಇವುಗಳದ್ದೇ ಪ್ರಾಬಲ್ಯ. ಸಮೀಕ್ಷೆಯೊಂದರ ಪ್ರಕಾರ ಅಮೆರಿಕದ ಮಂದಿ ಆಹಾರಕ್ಕಾಗಿ ವ್ಯಯಿಸುವ ಹಣದಲ್ಲಿ ಶೇ90ರಷ್ಟನ್ನು ಸಂಸ್ಕರಿತ ಆಹಾರಕ್ಕಾಗಿ ವ್ಯಯಿಸುತ್ತಾರೆ. ನೆನಪಿರಲಿ, ಇಂದಿನ ಭಾರತೀಯ ಯುವಪೀಳಿಗೆಗೆ ಅಮೆರಿಕ, ಬ್ರಿಟನ್‌ಗಳಲ್ಲಿ ಉದ್ಯೋಗಾವಕಾಶ ಹೆಚ್ಚು. ನಮ್ಮ ಮಕ್ಕಳು, ಸಂಬಂಧಿಗಳು ಅಥವಾ ಪರಿಚಿತರ ಮಕ್ಕಳು ಆ ದೇಶಗಳಲ್ಲಿ ಕೆಲಸ ಮಾಡುತ್ತಿರಬಹುದು ತಾನೆ? ಅವರಿಗೆ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ಸಂಸ್ಕರಿತ ಆಹಾರಗಳ ಮೊರೆ ಹೋಗದಂತೆ ಆಗಾಗ ಎಚ್ಚರಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಅಲ್ಲವೆ? ಇನ್ನು ಹಳ್ಳಿ ತೊರೆದು ಶಹರ ಸೇರಿರುವ ನಮ್ಮ ಹೈದರೂ ಇಂಥ ಆಹಾರಗಳ ಮೇಲೆಯೇ ಹೆಚ್ಚು ಅವಲಂಬಿತರಾಗುತ್ತಿದ್ದಾರೆ ಎನ್ನುವುದೂ ಸತ್ಯ ತಾನೆ? ಸಂಸ್ಕರಿತ ಆಹಾರಗಳ ಆಕರ್ಷಣೆಗೆ ಮಾರು ಹೋಗದೆ ಸಾಧ್ಯವಾದಷ್ಟು ಸಹಜ ಆಹಾರಗಳನ್ನೇ ಸೇವಿಸಬೇಕು ಎನ್ನುವುದು ನನ್ನ ಆಶಯ.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ