ಪ್ರತಿದಿನ ತಲೆಗೆ ಮಸಾಜ್ ಮಾಡಿಕೊಳ್ಳುವುದರ ಲಾಭಾಂಶಗಳು ನಿಮಗೆ ಗೊತ್ತಿವೆಯೇ? ಇದಕ್ಕಾಗಿ ನೀವೇನು ಪಾರ್ಲರ್‌ಗೇ ಹೋಗಬೇಕಿಲ್ಲ. ಮನೆಯಲ್ಲೇ ಟಿವಿ ನೋಡುತ್ತಾ ತಲೆಯ ಎಲ್ಲ ಭಾಗಗಳಿಗೆ ಕೈಯಿಂದ ಮಸಾಜ್ ಮಾಡಿಕೊಳ್ಳಿ.
-ಮಸಾಜ್ ಮಾಡುವುದರಿಂದ ಸಣ್ಣ ಸಣ್ಣ ನರನಾಡಿಗಳಲ್ಲೂ ರಕ್ತಸಂಚಾರ ಚೆನ್ನಾಗಿ ಆಗಿ ದೇಹ ರಿಲ್ಯಾಕ್ಸ್ ಆಗುತ್ತದೆ.
- ತಲೆಗೆ ನಿಯಮಿತವಾಗಿ ಮಸಾಜ್ ಮಾಡುವುದರಿಂದ ಸೆರೆಟೋನಿನ್, ಡೋಪಮೈನ್ ಹಾರ್ಮೋನ್‌ಗಳು ಬಿಡುಗಡೆಯಾಗುತ್ತವೆ. ಇವು ನಮ್ಮನ್ನು ಒಳ್ಳೆಯ ಮೂಡ್‌ನಲ್ಲಿಡುತ್ತವೆ. ಖಿನ್ನತೆಯಿಂದ ಬಳಲುತ್ತಿರುವವವರಿಗೆ ತಲೆ ಮಸಾಜ್ ದಿವ್ಯೌಷಧ.