ಪ್ರತಿ ವರ್ಷ ವಿಶ್ವಾದ್ಯಂತ 40ರಿಂದ 50 ಮಿಲಿಯನ್ ಅಬಾರ್ಶನ್ಗಳಾಗುತ್ತವೆ. ಅಂದರೆ ಪ್ರತಿದಿನ ಸುಮಾರು 125,000 ಗರ್ಭಪಾತ!! ಅಮೆರಿಕದಲ್ಲಿ ಶೇ.22 ಗರ್ಭಿಣಿಯರು ಮಗುವಿನ ಮುಖ ನೋಡುವುದೇ ಇಲ್ಲವಂತೆ. ಭಾರತದಲ್ಲಿ ವರ್ಷಕ್ಕೆ ಸುಮಾರು 7 ಮಿಲಿಯನ್ ಮಕ್ಕಳು ಹುಟ್ಟುವ ಮೊದಲೇ ಕೊಲೆಗೀಡಾಗುತ್ತವೆ. ಅದರಲ್ಲಿ 5.5 ಮಿಲಿಯನ್ನಷ್ಟು ಕಾನೂನಿಗೆ ವಿರುದ್ಧವಾಗಿ ನಡೆದಿರುತ್ತದೆ! ಇದಕ್ಕೆ ಹೆಣ್ಣುಮಗು, ಬೇಡದ ಗರ್ಭ, ವಿವಾಹಪೂರ್ವ ಗರ್ಭಧಾರಣೆ, ಅವೈಜ್ಞಾನಿಕ ಹೆರಿಗೆ ತಂತ್ರಗಳು ಪ್ರಮುಖ ಕಾರಣಗಳು.