ಬೈಟುಕಾಫಿ

ತಾಯ್ತನ

ಬೀದಿ ನಾಯಿಗಳೆಂದರೆ ಭಯ. ಅವುಗಳನ್ನು ನಾಶ ಮಾಡುವುದು ಹೇಗೆ ಎಂಬುದೇ ಪಟ್ಟಣಿಗರ ಚಿಂತೆ...

ಬೀದಿ ನಾಯಿಗಳೆಂದರೆ ಭಯ. ಅವುಗಳನ್ನು ನಾಶ ಮಾಡುವುದು ಹೇಗೆ ಎಂಬುದೇ ಪಟ್ಟಣಿಗರ ಚಿಂತೆ. ಅಂತಹುದರಲ್ಲಿ, ವಿದೇಶಿ ಮಹಿಳೆಯರಿಬ್ಬರು ಅವುಗಳನ್ನು ತಮ್ಮ ಮನೆಗೆ ತಂದು ಸಾಕಿ ಸಲಹುವ ಕೆಲಸ ಮಾಡುತ್ತಿದ್ದಾರೆ.
ಕುಶಾಲನಗರ ಸಮೀಪದ ಕೂಡ್ಲೂರು ಗ್ರಾಮದಲ್ಲಿ ಇವರ ವಾಸ. 2006ರಲ್ಲಿ ಭಾರತಕ್ಕೆ ಆಗಮಿಸಿದ ಫ್ರಾನ್ಸ್ ಮಹಿಳೆ ಬ್ರಿಗೆಟ್ ಹಂಪಾನ್ ಹಾಗೂ ಆಕೆಯ ಮಗಳು ಡಿ. ಹಿಂಪನ್ ಸಬಾಟಿಯರ್, ಮಡಿಕೇರಿ ಸಮೀಪ ಹಟ್ಟಿಹೊಳೆ- ಹಮ್ಯಾಲ ವ್ಯಾಪ್ತಿಯಲ್ಲಿ ನೆಲೆಯೂರಿದರು. 8 ಎಕರೆ ತೋಟ ಖರೀದಿಸಿ, ತೋಟದಲ್ಲಿ ವೆನಿಲ್ಲಾ ಮುಂತಾದ ಕೃಷಿ ಚಟುವಟಿಕೆಯಲ್ಲಿ ತೊಡಗಿದರು. ಕಳೆದ ಕೆಲವು ಸಮಯದಿಂದ ಕೂಡ್ಲೂರು ಗ್ರಾಮದಲ್ಲಿ ಮನೆ ಬಾಡಿಗೆಗೆ ಪಡೆದು ಇಲ್ಲಿ ಬೀದಿನಾಯಿಗಳಿಗೆ ಆಶ್ರಯ ನೀಡಿದ್ದಾರೆ.
ಮಾರಣ ಹೋಮ ಪ್ರೇರಣೆ
ಮೊದಲ ಬಾರಿಗೆ ಮೈಸೂರು ದಸರಾಗೆ ಭೇಟಿ ನೀಡಿದ ಅವಧಿಯಲ್ಲಿ ಅಲ್ಲಿನ ಕಾರ್ಪೊರೇಷನ್ ನಡೆಸಿದ ಬೀದಿ ನಾಯಿಗಳ ಹತ್ಯೆ ಕಾರ್ಯಾಚರಣೆ ವೀಕ್ಷಿಸಿದರು. ಆಗ ಒಂದು ನಾಯಿಯನ್ನು ಅವರ ಕೈಯಿಂದ ರಕ್ಷಿಸಿಕೊಂಡರು. 2008ರಲ್ಲಿ ಮಡಿಕೇರಿಯಲ್ಲೂ ಇಂಥದೇ ಕಾರ್ಯಾಚರಣೆ ವೇಳೆ ತರಲಾದ ನಾಯಿಗಳು ಸೇರಿ 9 ನಾಯಿಗಳು ಈಗ ಇವರ ಕುಟುಂಬ ಸದಸ್ಯರಂತೆ ಮನೆಯಲ್ಲಿ ಎಲ್ಲೆಡೆ ಓಡಾಡುತ್ತ ಹಾಯಾಗಿವೆ.
ಪ್ರತಿ ತಿಂಗಳು ನಾಯಿ ಪೋಷಣೆಗೆ ರು. 10 ಸಾವಿರಕ್ಕೂ ಅಧಿಕ ವ್ಯಯಿಸುತ್ತಾರೆ. ಪೋಷಣೆಗೆ ಓರ್ವ ಸಹಾಯಕಿಯಿದ್ದಾಳೆ. ಅವರಿಗೆ ರು. 5 ಸಾವಿರ ಸಂಬಳ. ನಾಯಿಗಳಿಗೆ ರೂಬಿ, ಟ್ಸುಗಾ, ಲ್ವೂ, ಸೂರ್ಯ, ಲೂಹುಸ್ ಎಂಬಿತ್ಯಾದಿ ನಾಮಕರಣ. ಕಾಲು ಮುರಿದಿದ್ದ ನಾಯಿಯೊಂದಕ್ಕೆ ಶಸ್ತ್ರಚಿಕಿತ್ಸೆ ನಡೆಸಿ ಇದೀಗ ಚೇತರಿಸಿಕೊಂಡಿದೆ. ಕೆಲವು ಪ್ರಮುಖರನ್ನು ಭೇಟಿ ಮಾಡಿ ಕೊಡಗು ಹಾಗು ಮೈಸೂರು ಜಿಲ್ಲೆಗಳ ಪ್ರಮುಖ ಪಟ್ಟಣಗಳಲ್ಲಿ ನಡೆಯುತ್ತಿದ್ದ ಬೀದಿನಾಯಿಗಳ ಹತ್ಯೆಗೆ ವಿರಾಮ ಹಾಕಿಸಿದ್ದಾರೆ.

ಪ್ರತಿ ಜೀವಿಯಲ್ಲೂ ಭಗವಂತನನ್ನು ಕಾಣುವುದು ಭಾರತೀಯ ಸಂಸ್ಕೃತಿಯ ಹಿರಿಮೆ. ನಾಯಿಗಳು ದತ್ತಾತ್ರೇಯ, ಮುತ್ತಪ್ಪ ದೇವರ ವಾಹನವೆಂದು ನಂಬಿಕೆ ಹೊಂದಿರುವ ಮಾನವರು ಅವುಗಳನ್ನು ಅಮಾನವೀಯವಾಗಿ ಕೊಲ್ಲುವುದು ಸರಿಯಲ್ಲ. ನಾಯಿಗಳಿಗೆ ಲಸಿಕೆ, ಸಂತಾನಹರಣ ಶಸ್ತ್ರಚಿಕಿತ್ಸೆ ತಗಲುವ ವೆಚ್ಚ ಕಡಿಮೆ. ಅವುಗಳ ಬಗ್ಗೆ ಗಮನಹರಿಸಬೇಕು.
- ಡಿ. ಹಿಂಪನ್ ಸಬಾಟಿಯರ್

- ಕೀರ್ತನಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ.. ನಿಮ್ಮನ್ನು ಈ ರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ': Kichcha Sudeepಗೆ ಪತ್ರ