ಬೈಟುಕಾಫಿ

ಯಜ್ಞವೇದಿಕೆಯಂತೆ

ಆತನೊಬ್ಬ ಬ್ರಾಹ್ಮಣ ವಟು, ಪುರೋಹಿತ ಪುತ್ರ. ಅಪ್ಪ ಚಿಕ್ಕಪ್ಪಂದಿರೊಡನೆ ಯಜ್ಞಗಳಿಗೆ ಹೋಗಿ, ಯಜ್ಞದಲ್ಲಿ...

ಆತನೊಬ್ಬ ಬ್ರಾಹ್ಮಣ ವಟು, ಪುರೋಹಿತ ಪುತ್ರ. ಅಪ್ಪ ಚಿಕ್ಕಪ್ಪಂದಿರೊಡನೆ ಯಜ್ಞಗಳಿಗೆ ಹೋಗಿ, ಯಜ್ಞದಲ್ಲಿ ಪಾಲ್ಗೊಂಡು ನೋಡಿದ್ದೆಲ್ಲವೂ ಯಜ್ಞಮಯವಾಗಿಯೇ ಕಾಣಿಸುವ ಕಾಲ. ಇಂಥವನಿಗೂ ಮದುವೆಯಾಯಿತು. ಪ್ರಸ್ತವೂ ಆಯ್ತೆಂದು ಬೇರೆ ಹೇಳಬೇಕೆ? ಪ್ರಸ್ತದ ಮರುದಿನ, ಪ್ರಥಮ ರಾತ್ರಿ ಹೇಗಿತ್ತೆಂದು ಹೇಳುವಂತೆ ಆತನ ಗೆಳೆಯರು ಆತನನ್ನು ಒತ್ತಾಯಿಸಿದರು. ಆತ ಬಾಯಿಬಿಟ್ಟ:

ಅದ್ಯಾಪಿ ತಾಂ ನಿಜವಪುಃ ಕೃಶವೇದಿಮಧ್ಯಾಂ
ಉತ್ತುಂಗಸಂಭೃತಸುಧಾಸ್ತನಕುಂಭಯುಗ್ಮಾಮ್
ನಾನಾವಿಚಿತ್ರಕೃತಮಂಡನಮಂಡಿತಾಂಗೀಂ
ಸುಪ್ತೋತ್ಥಿತಾಂ ನಿಶಿ ದಿವಾ ನ ಹಿ ವಿಸ್ಮರಾಮಿ

ಮಧ್ಯರಾತ್ರಿಯಲ್ಲಿ ನಿದ್ರೆ ತಿಳಿದೆದ್ದು ನೋಡಿದೆ: ಆಕೆಯ ಶರೀರ ಜನಿವಾರದಂತೆ ತೆಳ್ಳಗಾಗಿ ಮಿರುಗುತ್ತಿತ್ತು. ಅವಳ ಸೊಂಟವು, ಯಜ್ಞಕುಂಡವನ್ನು ಗರ್ಭದಲ್ಲಿಟ್ಟುಕೊಂಡ ಯಜ್ಞವೇದಿಕೆಯಂತೆ ತೆಳ್ಳಗೆ ಬೆಳ್ಳಗೆ ಸುಂದರವಾಗಿ ಆಹ್ವಾನಿಸುತ್ತಿತ್ತು. ಇನ್ನು ಎದೆಯ ಮೇಲಿದ್ದ ಆ ಜೋಡಿ! ಅವು ಯಜ್ಞವೇದಿಕೆಯ ಮೇಲೆ ಸನ್ನದ್ಧಪಡಿಸಿದ್ದ ತುಂಬಿದ ಕಲಶಗಳೇ ಸೈ! ಆಕೆ ಧರಿಸಿದ ಚಿತ್ರವಿಚಿತ್ರವಾದ ಆಭರಣಗಳು ವೇದಿಕೆಯ ಮಾವಿನ ತಳಿರು ತೋರಣಗಳಂತೆ, ಪ್ರಸಾಧನ ಲೇಪನಗಳು ಗಂಧಚಂದನಾದಿಗಳಂತೆ ಕಂಗೊಳಿಸಿದವು.
ಗೆಳೆಯರಿಗೆ ಸುಸ್ತು. ಯಾಜ್ಞಿಕರ ಮಗನಿಗೆ ಅಲ್ಲೂ ಯಜ್ಞವೇ ಕಾಣಿಸಬೇಕೆ? ಪುಣ್ಯಾತ್ಮನಿಗೆ ಅವಳು ಯಜ್ಞವೇದಿಕೆಯಂತೆ ಕಾಣಿಸಿದ್ದೇನೋ ಸಮ, ಈತ ಹೋಮ ನೆರವೇರಿಸಿ ಪೂರ್ಣಾಹುತಿ ಕೊಟ್ಟನೋ ಇಲ್ಲವೋ ಆತ ಹೇಳಲಿಲ್ಲ.ಟಿ

- ಹರಿಹರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ