ಮಕ್ಕಳಿಗೆ ಪಾಲಕರು ಮೊಬ್ಯೆಲ್ ಬಳಕೆಯ ಲಾಭ-ನಷ್ಟಗಳನ್ನು ತಿಳಿಸಿ ಹೇಳಬೇಕು. ಮೊಬ್ಯೆಲ್ ಬಳಸಲು ಸೂಕ್ತ ವಯಸ್ಸು 18ರ ನಂತರವೇ. ಈ ವಯಸ್ಸಿನಲ್ಲಿ ಸೂಕ್ತವಾದ ಆಲೋಚನೆ ಮಾಡುವ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಮೊಬ್ಯೆಲ್ ಬಳಕೆಯ ಒಳಿತು ಕೆಡುಕಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಸರ್ಕಾರ ಮೊಬ್ಯೆಲ್ ಬಳಕೆಯ ಬಗ್ಗೆ ಸೂಕ್ತ ನಿಯಮಾವಳಿಗಳನ್ನುಳ್ಳ ಶಾಸನ ತರಬೇಕು. ಇದಕ್ಕೆ ಪೋಷಕರ ಬೆಂಬಲ ಬೇಕು. ಶಾಲಾ-ಕಾಲೇಜುಗಳಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಬೇಕು.
- ಶ್ರೀಮಧು ಕೆ, ಮಾಕನೂರು, ರಾಣೇಬೆನ್ನೂರು
ಜಾಗೃತಿ ಮೂಡಿಸುವ ಪ್ರಯತ್ನವಾಗಲಿ
ನಮ್ಮ ದೇಶದಲ್ಲಿರುವ ಜನಸಂಖ್ಯೆಗೆ ಹೋಲಿಸಿಕೊಂಡಾಗ ಶೇ.70ರಷ್ಟು ಜನರ ಕೈಯಲ್ಲಿ ಮೊಬ್ಯೆಲ್ ಹರಿದಾಡುತ್ತಿದೆ. ಅದರಲ್ಲಿ ವಿದ್ಯಾರ್ಥಿಗಳ ಪಾಲು ಹೆಚ್ಚು ದಶಕದ ಹಿಂದೆ ಈ ಮೊಬ್ಯೆಲ್ಗೆ ಅದರದೇ ಆದ ಗೌರವವಿತ್ತು. ಈಗ ಮರ್ಯಾದೆ ಬಿಟ್ಟು ಬೀದಿಗೆ ಬಂದಿರುವುದು ನೋವಿನ ಸಂಗತಿ. ಪ್ರಸ್ತುತ ದಿನಮಾನಗಳಲ್ಲಿ ಸಮಾಧಾನ, ಶ್ರದ್ಧ್ದೆ, ತಾಳ್ಮೆ, ಶಿಸ್ತು ಮಿತಿಮಿರಿ ಮರೆಯಾಗುತ್ತಿರುವುದಕ್ಕೆ ಇದು ಕೂಡ ಕಾರಣ. ಈ ಮೊಬ್ಯೆಲ್ ವಿದ್ಯಾರ್ಥಿಗಳಲ್ಲೂ ಆವರಿಸಿಬಿಟ್ಟಿದೆ ಇದರಿಂದ ಅನೇಕರು ದಾರಿ ತಪ್ಪಿದ್ದಾರೆ. ಹಾಗಾಗಿ ಮಕ್ಕಳಿಗೆ ಮೊಬೈಲ್ ಸಿಗದಂತೆ ನೋಡಿಕೊಳ್ಳಬೇಕು.
- ಡಿ. ಆರ್. ಸುರೇಂದ್ರನಾಥ್, ಹಂಪಿ
ಮಕ್ಕಳ ತಾಳಕ್ಕೆ ಕುಣಿಯದಿರಿ
ನಾನು ಕೂಡ ವಿದ್ಯಾಭ್ಯಾಸದಲ್ಲಿ ಮುಂದುವರಿದಿದ್ದೇನೆ. ನನ್ನಂತೆ ವಿದ್ಯಾಬ್ಯಾಸದಲ್ಲಿ ತೊಡಗಿರುವ ಎಲ್ಲರೂ ಅಭ್ಯಾಸದ ಸಮಯದಲ್ಲಿ ಈ ಮೊಬ್ಯೆಲ್ ಅನ್ನು ಕಣ್ಣಿಗೆ ಕಾಣಿಸದಂತೆ ದೂರವಿಡಿ. ಈ ಮೊಬ್ಯೆಲ್ಗಳಿಂದ ಸಮಯ ವ್ಯರ್ಥವಷ್ಟೆ, ವಾಯುವಿಹಾರದ ನೆಪ ಮಾಡಿಸ್ನೇಹಿತರನ್ನು ಭೇಟಿ ಮಾಡಿ ಹಲವಾರು ವಿಷಯಗಳ ಕುರಿತು ಚರ್ಚೆ ಮಾಡಿ, ಇದರಿಂದ ಆರೋಗ್ಯಕ್ಕೂ, ಮನಸ್ಸಿಗೂ ಒಳ್ಳೆಯ ಬೆಳವಣಿಗೆ. ಅದು ಬಿಟ್ಟು ಈ ಮೊಬ್ಯೆಲ್ನಲ್ಲಿ ಗಂಟೆಗಟ್ಟಲೆ ಮಾತಾಡಿದರೆ ಆರೋಗ್ಯಕ್ಕೂ ತೊಂದರೆ, ಸುಖಾಸುಮ್ಮನೆ ಖರ್ಚು ಕೂಡ. ಯಾವುದೇ ಕಾರಣಕ್ಕೂ ಈ ಮೊಬ್ಯೆಲ್ನಿಂದ ಪೋಷಕರನ್ನು ಬೀದಿಗೆ ತರುವುದು ತರವಲ್ಲ. ಮಕ್ಕಳ ತಾಳಕ್ಕೆ ಕುಣಿಯುವುದು ತರವಲ್ಲ.
-ಶ್ವೇತಾ ಡಿ. ಎಸ್. ತುರುವನೂರು