ಬೈಟುಕಾಫಿ

ಜೂನಿಯರ್ ಮೋದಿ ನಮ್ಮ ಡಾ. ನಾ.ಸೋಮೇಶ್ವರ್

ಚಂದನ ವಾಹಿನಿಯಲ್ಲಿ ಸೋಮವಾರದಿಂದ ಗುರುವಾರದವರೆಗೆ ಪ್ರಸಾರವಾಗುವ ಹಾಗೂ ಶುಕ್ರವಾರದಂದು ಪ್ರಸಾರವಾಗುವ...

ಚಂದನ ವಾಹಿನಿಯಲ್ಲಿ ಸೋಮವಾರದಿಂದ ಗುರುವಾರದವರೆಗೆ ಪ್ರಸಾರವಾಗುವ ಹಾಗೂ ಶುಕ್ರವಾರದಂದು ಪ್ರಸಾರವಾಗುವ ಕನ್ನಡ ನಾಡು ನುಡಿಗೆ ವಿಶೇಷ ಸೇವೆ ಸಲ್ಲಿಸಿದವರ 'ಥಟ್ ಅಂತ ಹೇಳಿ' ಕಾರ್ಯಕ್ರಮವನ್ನು ನೋಡುವುದು ನಮ್ಮ ಪೂರ್ವಜನ್ಮದ ಪುಣ್ಯ ಎಂದೇ ಭಾವಿಸಿದ್ದೇವೆ. ನಾವು ಈ ಕಾರ್ಯಕ್ರಮದ ಹಾಗೂ ನಿರೂಪಕರ ಅಭಿಮಾನಿ. ನರೇಂದ್ರ ಮೋದಿಯಂತೆ ಅಚ್ಚುಕಟ್ಟಾದ ದಿರಿಸು ಧರಿಸಿ ಗ್ರಂಥಗಳನ್ನು ಜೋಡಿಸುವ ಹಂಸದ ಗರಿಯಷ್ಟೇ ಬಿಳುಪಾದ ಥಳಥಳ ಹೊಳೆವ ಸುಂದರಹಲ್ಲುಗಳ ನಗುಮೊಗದ ಸರದಾರ ನಾ. ಸೋಮೇಶ್ವರ್ ಅವರನ್ನು ನೋಡುವುದೇ ಒಂದು ಸೊಗಸು. ಅಭ್ಯರ್ಥಿಗಳು ಉತ್ತರಿಸಲು ತಡವರಿಸಿದಾಗ 'ಹಾಟ್‌ಸೀಟಲ್ಲಿ ಕೂತಾಗ ಹೀಗೆ ಆಗುತ್ತದೆ' ಎಂಬುದಾಗಿ  ಅಭ್ಯರ್ಥಿಗಳನ್ನು ಸಂತೈಸುವ ರೀತಿ, ಆಯ್ಕೆಗೆ ಅವಸರದಿಂದಲೇ ಬಟನ್ ಒತ್ತಿ ಒದ್ದಾಡುವ ಸ್ಪರ್ಧಿಗಳಿಗೆ ನಯವಾಗಿಯೇ ಚುರುಕು ಮುಟ್ಟಿಸುವುದು, ಸ್ಪರ್ಧ್ಥಿಗಳ ಚಿಕ್ಕ ಸಾಧನೆಗಳನ್ನೂ ಹೊಗಳಿ ಪ್ರೋತ್ಸಾಹಿಸುವ , ಸ್ಪರ್ಧಿಗಳ ಅತಿ ಸಾಮಾನ್ಯವಾದ ಕವನಗಳನ್ನೂ ಅದ್ಭುತ ಎಂದು ಹೇಳಿ ಇನ್ನಷ್ಟು ಬರೆಯಲು ಪ್ರೇರೇಪಿಸುವ ಗುಣ ಸರ್ವರಿಗೂ ಮಾದರಿ. ಒಟ್ಟಿನಲ್ಲಿ ಮಕ್ಕಳಾದಿಯಾಗಿ ವೃದ್ಧರತನಕ ಎಲ್ಲರೂ ಕೂತು ನೋಡುವ 'ಥಟ್ ಅಂತ ಹೇಳಿ' ಕಾರ್ಯಕ್ರಮದ ರೂವಾರಿ ಸೋಮೇಶ್ವರ್ ಮತ್ತು ಸಿಬ್ಬಂದಿವರ್ಗಕ್ಕೆ ಹ್ಯಾಟ್ಸಾಫ್!  
- ಜಯಶ್ರೀ ಕೆ. ಮೈಸೂರು

CTV ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾಪರ್ವ ಧಾರಾವಾಹಿಯ ಪ್ರಾರಂಭದಲ್ಲೊಂದು ಸೂಚನೆಯಿದೆ.ಈ ಧಾರಾವಾಹಿಯಲ್ಲಿ ಬರುವ ಸನ್ನಿವೇಶಗಳೆಲ್ಲಾ ಕಾಲ್ಪನಿಕ ಎಂದು. ಆದರೆ ಇತ್ತೀಚಿನ ಬೆಳವಣಿಗೆ ನೋಡಿದರೆ ಇದು ಕಾಲ್ಪನಿಕವಲ್ಲ, ಉದ್ದೇಶಪೂರ್ವಕ ಎಂದು ಸಾಬೀತಾಗಿದೆ. ಖಳನಾಯಕ ಪಾಂಡುರಂಗ ದೇಸಾಯಿ ಕುಡಿದು ರೋಷದಿಂದ ಬಿಸಾಡಿದ್ದ ವಿಸ್ಕಿ ಬಾಟಲಿ ಚೂರುಗಳನ್ನು ಸ್ವಚ್ಛ ಮಾಡಲು ಕೆಲಸದಾಳಿನ ಕೈಯೊಂದು ಪೊರಕೆ ಹಿಡಿದು ಪ್ರವೇಶಿಸುತ್ತದೆ. ಮತ್ತೊಂದು ಕೈಯಲ್ಲಿ ಕನ್ನಡ ದಿನಪತ್ರಿಕೆ. ಆ ಪತ್ರಿಕೆಯಲ್ಲಿ ಭಾರತದ ಪ್ರಧಾನಿಯ ಭಾವಚಿತ್ರ ! ಒಡೆದ ವಿಸ್ಕಿ ಬಾಟಲಿನ ಚೂರುಗಳನ್ನು ಪೊರಕೆಯಿಂದ ಸ್ವಚ್ಛಗೊಳಿಸುವ ನೆಪದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಭಾವ ಚಿತ್ರಕ್ಕೆ ಉದ್ದೇಶಪೂರ್ವಕವಾಗಿ ಪೊರಕೆ ಸೋಕಿಸಿ ಅವಮಾನಿಸಲಾಗಿದೆ. ನಿರ್ದೇಶಕರಿಗೆ ನರೇಂದ್ರ ಮೋದಿಯವರ ಬಗ್ಗೆ ಇರುವ ದ್ವೇಷವನ್ನು ವ್ಯಕ್ತಪಡಿಸಲು ಈ ಧಾರಾವಾಹಿಯನ್ನು ಬಳಸಿಕೊಂಡದ್ದು ಖಂಡನೀಯ. ಈ ಧಾರಾವಾಹಿಯ ನಿರ್ದೇಶಕರಿಗೆ ಪ್ರಧಾನಿಯ ಬಗ್ಗೆ ಅಸಹನೆ ಇದ್ದುದರಿಂದಲೇ ಮೋದಿಯ ಭಾವಚಿತ್ರವಿರುವ ಪತ್ರಿಕೆಯ ಸಹಾಯದಿಂದ ವಿಸ್ಕಿ ಬಾಟಲಿಯ ಚೂರುಗಳನ್ನು ಸ್ವಚ್ಛಗೊಳಿಸುವ ನೆಪದಲ್ಲಿ ನರೇಂದ್ರ ಮೋದಿಯವರ ಭಾವಚಿತ್ರಕ್ಕೆ ಪೊರಕೆ ತೋರಿಸುವ ದೃಶ್ಯವನ್ನು ನಿಧಾನವಾಗಿ ಸ್ಲೋಮೋಷನ್ನಲ್ಲಿ ತೋರಿಸಿದ್ದಾರೆ. ಧಾರಾವಾಹಿಗಳಿಗೆ ಸೆನ್ಸಾರ್ ಮಂಡಳಿಯ ಅವಶ್ಯಕತೆಯಿದೆ.
-ಪಿ.ಜೆ.ರಾಘವೇಂದ್ರ, ಮೈಸೂರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!