ಬೆಂಗಳೂರಿನ ಸಂಸ್ಕೃತಿ ಸೇವಾ ವಾರಿಧಿ-ಸಂಸೇವಾ ಅವರು ಶ್ರೀ ಮುಮ್ಮುಡಿ ಕೃಷ್ಣರಾಜ ಒಡೆಯರ್ ಅವರ ಮೈಸೂರು ಸಿಂಹಾಸನ ಪಟ್ಟಾಭಿಷೇಕದ ಸವಿನೆನಪಿಗಾಗಿ 29 ರಂದು ಸಂಜೆ 4ಕ್ಕೆ ಸನಾತನ ಸಂಸ್ಕೃತಿ ಪುನರುತ್ಥಾನ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. 30-06-1799 ರಲ್ಲಿ ಜರುಗಿದ ಸಿಂಹಾಸನ ಪಟ್ಟಾಭಿಷೇಕದ ಸವಿನೆನಪಿಗಾಗಿ ಈ ಕಾರ್ಯಕ್ರಮ. ಮುಖ್ಯ ಅತಿಥಿಗಳಾಗಿ ಬಿ.ಜೆ.ಪಿ.ಯ ರಾಷ್ಟ್ರೀಯ ಸಹ ಸಂಚಾಲಕರಾದ ಅಮ್ರೇಶ್. ಕೆ. ಎಂ, ಎಸ್. ಎಲ್. ಬೈರಪ್ಪನವರ ಕೃತಿಗಳ ಇಂಗ್ಲೀಷ್ ಅನುವಾದಕರಾದ ಸಂದೀಪ್ ಬಾಲಕೃಷ್ಣ ಅವರು ಹಾಗೂ ಪ್ರಾಧ್ಯಾಪಕರಾದ ವಿ. ರಾಜು ಅವರು ಆಗಮಿಸಿಲಿದ್ದಾರೆ. ಸ್ಥಳ- ಧರ್ಮಶ್ರೀ, ನಂ. 91, 1ನೇ ಅಡ್ಡರಸ್ತೆ ಶಂಕರಪುರಂ, ಬೆಂಗಳೂರು.
'ಮರ್ಯಾದೆ ಪ್ರಶ್ನೆ' ನಾಟಕ
ರಂಗಶಂಕರದಲ್ಲಿ ಜೂನ್ 28 ಮತ್ತು 29 ರಂದು ಮಧ್ಯಾಹ್ನ 3-30 ಮತ್ತು ಸಂಜೆ 7-30ಕ್ಕೆ ನಾಟಕ 'ಮರ್ಯಾದೆ ಪ್ರಶ್ನೆ'. ಜರ್ಮನ್ ಮೂಲ ಲೂಟ್ಸ್ ಹ್ಯೂಬ್ನರ್ ಅವರದು. ಸುರೇಂದ್ರನಾಥ್. ಎಸ್. ಅವರು ಕನ್ನಡಕ್ಕೆ ತಂದದ್ದಲ್ಲದೆ ಅವರೇ ನಿರ್ದೇಶಿಸುತ್ತಿರುವ ಈ ನಾಟಕವನ್ನು ರಂಗಶಂಕರ ಹಾಗೂ ಮ್ಯಾಕ್ಸ್ ಮುಲ್ಲರ್ ಭವನದವರು ಜಂಟಿಯಾಗಿ ಮಾಡುತ್ತಿದ್ದಾರೆ.