ಬೈಟುಕಾಫಿ

ಹೇಳಿ ಹೋಗು ಕಾರಣ

ಧಾರಾವಾಹಿಗಳಲ್ಲಿ ಪಾತ್ರಗಳ ಬದಲಾವಣೆ ಹಾಗು ಪಾತ್ರಗಳು ದಿಢೀರನೆ ಕಣ್ಮರೆಯಾಗುವುದು...

ಧಾರಾವಾಹಿಗಳಲ್ಲಿ ಪಾತ್ರಗಳ ಬದಲಾವಣೆ ಹಾಗು ಪಾತ್ರಗಳು ದಿಢೀರನೆ ಕಣ್ಮರೆಯಾಗುವುದು ಅನಂತರ ಆ ಪಾತ್ರಕ್ಕೆ ಇನ್ನೊಬ್ಬ ವ್ಯಕ್ತಿ ಜೀವ ತುಂಬುವುದು ಮಾಮೂಲಿ. ಅಲ್ಲಿಯವರಗೆ ನಿರ್ದಿಷ್ಟ ಪಾತ್ರದ ನಿರ್ವಹಣೆ ಮಾಡುತ್ತಿದ್ದ ವ್ಯಕ್ತಿಯ ಬದಲಿಗೆ ಇನ್ನೊಬ್ಬ ಪಾತ್ರಧಾರಿಯನ್ನು ಸ್ವೀಕರಿಸುವುದು ಕೊಂಚ ಕಷ್ಟವಾದರೂ ಕ್ರಮೇಣ ವೀಕ್ಷಕರು ಕೂಡಾ ಈ ಬದಲಾವಣೆಯನ್ನು ಒಪ್ಪಿಕೊಳ್ಳುತ್ತಾ ಹೋಗುತ್ತಾರೆ. ಇತ್ತೀಚೆಗೆ ಕಿರುತೆರೆಯಲ್ಲಿ ಇಂಥಾ ಬದಲಾವಣೆಗಳು ಜಾಸ್ತಿಯಾಗುತ್ತಲೇ ಇವೆ. ಕೆಲವೊಂದು ಬದಲಾವಣೆಗಳು ಸದ್ದಿಲ್ಲದೇ ನಡೆದರೂ ಕೆಲವೊಂದು ವಿವಾದ ಸೃಷ್ಟಿಸಿ ಸುದ್ದಿಯಾಗಿವೆ. ಹೀಗೆ ಇಂಥಾ ಕಿರುತೆರೆ ಕಾರ್ಯಕ್ರಮಗಳಿಂದ ಕಾರಣ ಹೇಳಿ ಹೋದವರು ಮತ್ತು ಹೇಳದೇ ಹೋದವರು ಯಾರು? ನೋಡೋಣ ಬನ್ನಿ.

ದ್ರಾಷ್ಟಿ ಧಾಮಿ
ಕಲರ್ಸ್ ವಾಹಿನಿಯ ಫೇವರಿಟ್ ಡ್ಯಾನ್ಸ್ ಶೋ ಝಲಕ್ ದಿಖ್‌ಲಾಜಾ ನಿರೂಪಕಿಯಾಗಿರುವ ದ್ರಾಷ್ಟಿ ಇದೀಗ ಝಲಕ್ ವೇದಿಕೆಯಿಂದ ಹೊರ ನಡೆದಿದ್ದಾರೆ. ಕಳೆದ ಬಾರಿ ವಿಜಯಿಯಾಗಿದ್ದ ದ್ರಾಷ್ಟಿ ಈ ಬಾರಿ ನಿರೂಪಕಿಯಾಗಿ ಅವಕಾಶ ಗಿಟ್ಟಿಸಿಕೊಂಡಿದ್ದಳು. ಆದರೆ ನಿರೂಪಣೆಯಲ್ಲಿ ಧಮ್ ಇಲ್ಲ ಎಂಬ ಮಾತು ಕೇಳಿ ಬಂದ ಕಾರಣ ಆಯೋಜಕರು ಗೇಟ್‌ಪಾಸ್ ನೀಡಲು ತೀರ್ಮಾನಿಸಿದ್ದಾರೆ. ಮಧುಬಾಲಾ ಧಾರಾವಾಹಿಯಲ್ಲಿ  ಮಧು ಕಥಾಪಾತ್ರದ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಳು.

ಸುನೀಲ್ ಗ್ರೋವರ್
ಕಲರ್ಸ್ ವಾಹಿನಿಯ ಜನಪ್ರಿಯ ಶೋ ಕಾಮಿಡಿ ನೈಟ್ ವಿಥ್ ಕಪಿಲ್‌ನಿಂದ ಸುನೀಲ್ ಗ್ರೋವರ್ ಅಲಿಯಾಸ್ ಗುಟ್ಟಿ ಹೊರ ನಡೆದಿರುವುದು ಹೆಚ್ಚಿನ ಸುದ್ದಿ ಮಾಡಿತ್ತು. ಸುನೀಲ್ ಮತ್ತು ಕಾರ್ಯಕ್ರಮದ ನಿರ್ಮಾಪಕ, ನಿರೂಪಕ ಕಪಿಲ್ ಶರ್ಮಾ ನಡುವೆ ಸಂಬಂಧ ಚೆನ್ನಾಗಿಲ್ಲ. ಆದ್ದರಿಂದಲೇ ಸುನೀಲ್ ಹೊರನಡೆದಿದ್ದಾರೆ ಎಂದು ಸುದ್ದಿಯಾಗಿದ್ದರೂ ನಂತರ ಎಲ್ಲವೂ ಸರಿಯಿದೆ ಎಂದು ಹೇಳುವ ಮೂಲಕ ವಿವಾದಕ್ಕೆ ತೇಪೆ ಹಚ್ಚಲಾಯಿತು.

ಕರಣ್ ಸಿಂಗ್ ಗ್ರೋವರ್
ಝೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಬೂಲ್ ಹೈ ಧಾರಾವಾಹಿಯಲ್ಲಿ ಅಸಾದ್ ಅಹ್ಮದ್ ಖಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕರಣ್ ಸಿಂಗ್ ಗ್ರೋವರ್ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದರು. ಕಾರಣವೇನೆಂದು ಕೇಳಿದಾಗ  ಕರಣ್ ಅವರಿಗೆ ನಾವೇ ಗೇಟ್‌ಪಾಸ್ ನೀಡಿದ್ದೇವೆ ಎಂದು ನಿರ್ದೇಶಕರೂ ಇತ್ತ ನಾನೇ ಆ ಧಾರಾವಾಹಿಯಿಂದ ಹೊರಗೆ ಬಂದೆ ಎಂದು ಕರಣ್ ಹೇಳಿಕೆ ನೀಡಿದ್ದರು. ಪ್ರೇಕ್ಷಕರ ಮನಸ್ಸು ಗೆದ್ದಿದ್ದ ಈ ಧಾರಾವಾಹಿ ಕರಣ್ ನಾಪತ್ತೆ ಪ್ರಕರಣದಲ್ಲೂ ಪ್ರೇಕ್ಷಕರನ್ನು ಗೊಂದಲದಲ್ಲಿ ಸಿಲುಕಿಸಿತು.

ಪ್ರತ್ಯುಶಾ ಬ್ಯಾನರ್ಜಿ
ಕಳೆದ ವರ್ಷ ಬಾಲಿಕಾ ವಧು ಧಾರಾವಾಹಿಯಿಂದ ಪ್ರತ್ಯುಶಾ ಬ್ಯಾನರ್ಜಿ ಹೊರನಡೆಯುವ ಮೂಲಕ ಕಿರುತರೆಯಲ್ಲಿ ಸಂಚಲನ ಸೃಷ್ಟಿಸಿದ್ದಳು. ಬಾಲಿಕಾ ವಧು ಧಾರಾವಾಹಿಯಲ್ಲಿ ಪಾತ್ರ ಮಾಡಲ್ಲ ಎಂದು ಪ್ರತ್ಯುಶಾ ಹೇಳಿಕೆ ನೀಡಿದ್ದು, ಆ ಟೈಮಲ್ಲಿ ನಿರ್ಮಾಪಕರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ಕೆಲವು ದಿನ ನಂತರ ಪ್ರತ್ಯುಶಾಳ ಕಿತಾಪತಿ ಸಹಿಸಲು ಸಾಧ್ಯವಾಗದೆ ಆಕೆಯನ್ನು ಧಾರಾವಾಹಿಯಿಂದ ಹೊರಗಟ್ಟಲಾಯಿತು ಎಂಬ ಸುದ್ದಿ ಕೇಳಿ ಬಂದಿತ್ತು.

ಸೊನಾರಿಕಾ ಭಡೋರಿಯಾ
ದೇವೋಂಕಾ ದೇವ್ ಮಹಾದೇವ್ ಧಾರಾವಾಹಿಯಲ್ಲಿ ಪಾರ್ವತಿಯ ಪಾತ್ರ ವಹಿಸಿದ್ದ ಸೊನಾರಿಕಾ ಭಡೋರಿಯಾ ಸೆಟ್‌ನಲ್ಲಿ ಜಗಳ ಮಾಡಿ ಹೊರನಡೆದಿರುವುದು ಮಹಾದೇವ್‌ನ ಪೇಚಿಗೆ ಸಿಲುಕಿಸಿತ್ತು. ಪ್ರಸ್ತುತ ಧಾರಾವಾಹಿಯ ಸಹ ಕಲಾವಿದ ಶಿವನ ಪಾತ್ರ ನಿರ್ವಹಿಸುತ್ತಿರುವ ಮೋಹಿತ್ ರೈನಾ ಅವರಿಗೆ ನೀಡುವ ಗೌರವವನ್ನು ನನಗೂ ನೀಡಬೇಕೆಂದು ಸೊನಾರಿಕಾ ತಗಾದೆ ಎತ್ತಿದ್ದಳು. ಸಂಸ್ಥೆ ಆಕೆಯ ಬೇಡಿಕೆಗಳನ್ನು ತಕ್ಕ ಮಟ್ಟಿಗೆ ಪೂರೈಸಿದರೂ, ಆಕೆ ತೃಪ್ತಳಾಗಲಿಲ್ಲ. ಕೊನೆಗೆ ಸೊನಾರಿಕಾಳನ್ನು ಬದಲಿಸಲೇ ಬೇಕಾದ ಅನಿವಾರ್ಯತೆ ಎದುರಾಯಿತು.

ಕುಶಾಲ್ ಟಂಡನ್
ಬಿಗ್‌ಬಾಸ್-7ನ ಸ್ಪರ್ಧಿಯಾಗಿದ್ದ ಕಿರುತೆರೆ ನಟ ಕುಶಾಲ್ ಟಂಡನ್‌ನ ಎಲಿಮಿನೇಷನ್ ಸಾಕಷ್ಟು ಚರ್ಚೆಗೀಡಾಗಿತ್ತು. ಬಿಗ್‌ಬಾಸ್ ಮನೆಯಲ್ಲಿ ತನ್ನ ಪ್ರೇಯಸಿ ಗೌವಾಹರ್ ಖಾನ್ ಪ್ರಜ್ಞೆ ತಪ್ಪಿ ಬಿದ್ದಾಗ ಆಕೆಯನ್ನು ಎತ್ತಿಕೊಂಡು ಹೋಗಿ ಶುಶ್ರೂಷೆ ನೀಡುವ ಮೂಲಕ ಕುಶಾಲ್ ಮೊದಲ ಬಾರಿಗೆ ಸುದ್ದಿ ಮಾಡಿದ್ದರು. ತದನಂತರ ಪ್ರತಿಸ್ಪರ್ಧಿ ವೀಜೆ ಆಂಡಿ ಜತೆ ಜಗಳವಾಡಿ ಹೊರನಡೆಯುವಂತಾಯಿತು. ಅಲ್ಲಿ ಪ್ರತಿಸ್ಪರ್ಧಿಗಳೊಂದಿಗೆ ನಡೆದುಕೊಂಡ ರೀತಿ ಭಾರಿ ಚರ್ಚೆಗೀಡಾಗಿತ್ತು.


- ಕೆ.ರಜನಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ: ಕರ್ನಾಟಕಕ್ಕೂ ಗುಡುಗು, ಮಿಂಚಿನ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ!

ಚಲಿಸುವ ರೈಲಿನಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನ: ಕಳ್ಳನ ಕೈ ಹಿಡಿದ ಪ್ರಯಾಣಿಕರು, ಬಿಹಾರದಲ್ಲಿ ರೋಚಕ Video ವೈರಲ್‌

ಬಂಡೀಪುರದಲ್ಲಿ ದಂತವಿಲ್ಲದ ಆನೆಯ ಕಳೇಬರ ಪತ್ತೆ; ನಟೋರಿಯಸ್ ಬವಾರಿಯಾ ಗ್ಯಾಂಗ್‌ ನಂಟಿನ ಶಂಕೆ