ಬೇಕಾಗುವ ಸಾಮಗ್ರಿಗಳು
ಸಬ್ಬಕ್ಕಿ 1 ಕಪ್
ಸಕ್ಕರೆ 1-2 ಕಪ್
ತುಪ್ಪ 4 ಚಮಚ
ಎಂಟರಿಂದ ಹತ್ತು ಗೋಡಂಬಿ,
ಘಮ ಹೆಚ್ಚಿಸಲು ಬೇಕಾಗುವಷ್ಟು ಏಲಕ್ಕಿ ಪೌಡರ್,
ಅಳತೆಗೆ ಸಾಕಾಗುವಷ್ಟು ಬಾದಾಮಿ
ಮಾಡುವ ವಿಧಾನ
ಮೊದಲು ಸಬ್ಬಕ್ಕಿಯನ್ನು ಚೆನ್ನಾಗಿ ಹುರಿಯಬೇಕು. ಆ ನಂತರ ಮಿಕ್ಸಿಯೊಳಗೆ ಹದವಾಗಿ ಪುಡಿ ಮಾಡಿಕೊಳ್ಳಬೇಕು. ಜೊತೆಗೆ ಸಕ್ಕರೆಯನ್ನೂ ನೈಸ್ ಆಗುವಂತೆ ಪುಡಿಮಾಡಿಕೊಳ್ಳಬೇಕು. ಈಗ ಸಕ್ಕರೆ ಪುಡಿಯನ್ನು ಸಬ್ಬಕ್ಕಿಯ ಪುಡಿಗೆ ಬೆರೆಸಿ. ಅದಕ್ಕೆ ಏಲಕ್ಕಿ ಪುಡಿ ಹಾಕಿ ಮಿಶ್ರಣ ಮಾಡಿ.ಬಾದಾಮಿ ಮತ್ತು ಗೋಡಂಬಿಯನ್ನು ಅದಕ್ಕೆ ಸೇರಿಸಿ ಸ್ವಲ್ಪ ಸ್ವಲ್ಪವೇ ತುಪ್ಪವನ್ನು ಸೇರಿಸುತ್ತಾ ಉಂಡೆಗಳನ್ನು ಮಾಡಿ. ಅಲ್ಲಿಗೆ ಸಬ್ಬಕ್ಕಿ ಲಾಡು ತಯಾರಾಗುತ್ತದೆ.
ಇದು ಕೇವಲ ರುಚಿಕರ ಮಾತ್ರವಲ್ಲ. ಪೌಷ್ಟಿಕವೂ ಹೌದು. ಸಬ್ಬಕ್ಕಿಯ ತಿನಿಸುಗಳು ಆರೋಗ್ಯಕ್ಕೆ ಒಳ್ಳೆಯದು
ಮಧುಮೇಹಿಗಳು ಮತ್ತು ಕೊಲೆಸ್ಟರಾಲ್ ಸಮಸ್ಯೆ ಇರುವವರು ಈ ತಿನಿಸಿನಿಂದ ದೂರ ಇರುವುದು ಉತ್ತಮ.