ವಿದೇಶ

ಅಂತರಿಕ್ಷದಲ್ಲಿ 200 ದಿನಗಳ ವಾಸ್ತವ್ಯದ ನಂತರ ಸ್ಪೇಸ್ ಎಕ್ಸ್ ಗಗನಯಾನಿಗಳು ಭೂಮಿಗೆ ವಾಪಸ್

Harshavardhan M

ಕೇಪ್ ಕೆನೆವೆರಾಲ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಿಂಗಳುಗಳಿಂದ ತಂಗಿದ್ದ ನಾಲ್ವರು ಸ್ಪೇಸ್ ಎಕ್ಸ್ ಗಗನಯಾನಿಗಳು ಭೂಮಿಗೆ ಸುರಕ್ಷಿತವಾಗಿ ಹಿಂದಿರುಗಿದ್ದಾರೆ. ನಾಲ್ವರು ಗಗನಯಾನಿಗಳು 200 ದಿನಗಳನ್ನು ಅಂತರಿಕ್ಷದಲ್ಲಿ ಕಳೆದಿದ್ದರು ಎನ್ನುವುದು ವಿಶೇಷ. 

ಗಗನಯಾನಿಗಳಿದ್ದ ಕ್ಯಾಪ್ಸೂಲ್ ಗಲ್ಫ್ ಆಫ್ ಮೆಕ್ಸಿಕೊ ಪ್ರಾಂತ್ಯದಲ್ಲಿ ಭೂಮಿಯನ್ನು ಪ್ರವೇಶಿಸಿದೆ. ಪ್ರಖ್ಯಾತ ಎಲೆಕ್ಟ್ರಿಕ್ ಕಾರು ತಯಾರಿಕಾ ಸಂಸ್ಥೆ ಟೆಸ್ಲಾದ ಸ್ಥಾಪಕ ಎಲಾನ್ ಮಸ್ಕ್ ಒಡೆತನದ ಸಂಸ್ಥೆ ಸ್ಪೇಸ್ ಎಕ್ಸ್. 

ನಾಲ್ವರು ಗಗನಯಾನಿಗಳು ಅಲ್ಲಿ ವಾಸ್ತವ್ಯ ಹೂಡಿದ್ದಾಗಲೇ ರಷ್ಯಾದ ಸಿನಿಮಾ ತಂಡ ಅಂತರಿಕ್ಷದಲ್ಲೇ ಸಿನಿಮಾ ಚಿತ್ರೀಕರಣ ನಡೆಸಲು ಬಾಹ್ಯಾಕಾಶ ನಿಲ್ದಾಣಕ್ಕೆ ಬಂದಿತ್ತು. ಅವರು 6 ತಿಂಗಳ ಕಾಲ ಅಲ್ಲಿ ತಂಗಲಿದ್ದಾರೆ. 

ರಷ್ಯಾ ಸಿನಿಮಾ ತಂಡವನ್ನು ಬಾಹ್ಯಾಕಾಶ ನಿಲ್ದಾಣದಲ್ಲಿ ಹಿಂದೆ ಬಿಟ್ಟು ತಮ್ಮ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಾಲ್ವರು ಸ್ಪೇಸ್ ಎಕ್ಸ್ ಗಗನಯಾನಿಗಳು ವಾಪಸಾಗಿದ್ದಾರೆ.  

ಹಿಂದಿರುಗುವ ವೇಳೆ ಅವರಿದ್ದ ನೌಕೆಯಲ್ಲಿ ಟಾಯ್ಲೆಟ್ ಕೆಟ್ಟು ಹೋಗಿತ್ತು. ಅದರಿಂದಾಗಿ ಶೌಚಕ್ಕೆ ಡಯಪರ್ ಬಳಸಬೇಕಾಗಿ ಬಂದಿತ್ತು. ಅಂತಾರಾಷ್ಟ್ರೀಯ  ಬಾಹ್ಯಾಕಾಶ ನಿಲ್ದಾಣದಿಂದ 8 ಗಂಟೆಗಳ ಸುದೀರ್ಘ ಪಯಣದ ನಂತರ ಸುರಕ್ಷಿತವಾಗಿ ವಾಪಸಾಗಿದ್ದಾರೆ. 

SCROLL FOR NEXT