ಇರಾನ್ ಪರಮಾಣು ಘಟಕ 
ವಿದೇಶ

Israel war: 'ನಾಪತ್ತೆಯಾದ 400 ಕೆಜಿ Uranium ನಿಂದ Iran 10 ಅಣ್ವಸ್ತ್ರ ತಯಾರಿಸಬಹುದು'; ಅಮೆರಿಕ ಕಳವಳ!

ಇರಾನ್‌ ಪರಮಾಣು ಸ್ಥಾವರಗಳಿಂದ 400 ಕೆಜಿ ಯುರೇನಿಯಂ ಕಾಣೆಯಾಗಿದೆ ಎಂಬ ಭಯ ನಿಜವೇ ಆಗಿದ್ದರೆ ಅದರಿಂದ 10 ಪರಮಾಣು ಬಾಂಬ್‌ಗಳನ್ನು ತಯಾರಿಸಬಹುದು ಎಂದು ಅಮೆರಿಕ ಹೇಳಿದೆ.

ವಾಷಿಂಗ್ಟನ್: ಅಮೆರಿಕ ಸೇನೆಯ ದಾಳಿಗೂ ಮುನ್ನವೇ ಇರಾನ್ ತನ್ನ ಪರಮಾಣು ಘಟಕಗಳಿಂದ ಅಣು ಸಾಮಾಗ್ರಿಗಳನ್ನು ಗೌಪ್ಯ ಸ್ಥಳಕ್ಕೆ ರವಾನಿಸಿದೆ ಎಂಬ ಸುದ್ದಿಗಳ ನಡುವೆಯೇ ಈ ಕುರಿತು ಅಮೆರಿಕ ತೀವ್ರ ಕಳವಳ ವ್ಯಕ್ತಪಡಿಸಿದೆ.

ಇರಾನ್‌ ಪರಮಾಣು ಸ್ಥಾವರಗಳಿಂದ 400 ಕೆಜಿ ಯುರೇನಿಯಂ ಕಾಣೆಯಾಗಿದೆ ಎಂಬ ಭಯ ನಿಜವೇ ಆಗಿದ್ದರೆ ಅದರಿಂದ 10 ಪರಮಾಣು ಬಾಂಬ್‌ಗಳನ್ನು ತಯಾರಿಸಬಹುದು ಎಂದು ಅಮೆರಿಕ ಹೇಳಿದೆ. ಈ ಬಗ್ಗೆ ಮಾತನಾಡಿರುವ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್, '400 ಕೆಜಿ ಯುರೇನಿಯಂ ದಾಸ್ತಾನು 10 ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸಲು ಸಾಕು ಎಂದು ಹೇಳಿದ್ದಾರೆ.

ಕಳೆದ ವಾರ ಅಮೆರಿಕ ಸೇನೆ ಮೂರು ಇರಾನಿನ ಪರಮಾಣು ಸೌಲಭ್ಯಗಳ ಮೇಲೆ ತನ್ನ ಬಿ 2 ಸ್ಪಿರಿಟ್ ಯುದ್ಧ ವಿಮಾನದಿಂದ ಆರು 'ಬಂಕರ್ ಬಸ್ಟರ್‌ ಬಾಂಬ್ ಗಳನ್ನು' ಹಾಕಿತ್ತು. ಈ ವೇಳೆ ಇರಾನ್ ನ ಪರಮಾಣು ಸೌಲಭ್ಯ ಹಾನಿಗೊಳಗಾಗಿದೆ ಎಂದು ಹೇಳಲಾಗಿತ್ತು. ಆದರೆ ಈ ದಾಳಿಗೂ ಮೊದಲೇ ಇರಾನ್ ತನ್ನ ಪರಮಾಣು ಸಾಮಗ್ರಿಗಳನ್ನು ಸುರಕ್ಷಿತ ಪ್ರದೇಶಕ್ಕ ರವಾನೆ ಮಾಡಿದೆ ಎಂದು ಹೇಳಲಾಗಿದೆ.

ಈ ಕುರಿತ ಸ್ಯಾಟಲೈಟ್ ಇಮೇಜ್ ಗಳು ವೈರಲ್ ಆಗಿದ್ದವು. ಈ ಇಮೇಜ್ ನಲ್ಲಿ ಇರಾನ್ ಫೋರ್ಡೋ ಪರಮಾಣು ಘಟಕದ ಬಳಿ ಸುಮಾರು 14ಕ್ಕೂ ಹೆಚ್ಚು ದೊಡ್ಡ ಟ್ರಕ್ ಗಳು ನಿಂತಿರುವುದು ಪತ್ತೆಯಾಗಿದೆ. ಇದೇ ಟ್ರಕ್ ಗಳಲ್ಲಿ ಇರಾನ್ ತನ್ನ ಪರಮಾಣು ಸಾಮಗ್ರಿಗಳನ್ನು ರವಾನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಶೇ.60 ಪುಷ್ಟೀಕರಿಸಿದ ಯುರೇನಿಯಂ

ಇನ್ನು ಪ್ರಸ್ತುತ ಇರಾನ್ ಬಳಿ ಸುಮಾರು 400 ಕೆಜಿ ಯುರೇನಿಯಂ ಇರಬಹುದು ಎಂದು ಶಂಕಿಸಲಾಗಿದೆ. ಇದು ಶೇ.ಶೇ.60 ಪುಷ್ಟೀಕರಿಸಿದ ಯುರೇನಿಯಂ ಆಗಿದ್ದು, ಪರಮಾಣು ಬಾಂಬ್ ಗಳನ್ನು ತಯಾರಿಸಲು ಶೇ.90ರಷ್ಟು ಪುಷ್ಟೀಕರಿಸಿದ ಯುರೇನಿಯಂ ಬೇಕು ಎಂದು ತಜ್ಞರು ಹೇಳಿದ್ದಾರೆ. ಇರಾನ್ ಅದೇ ಹಾದಿಯಲ್ಲಿರುವಾಗಲೇ ಇಸ್ರೇಲ್ ಮತ್ತು ಅಮೆರಿಕ ದಾಳಿ ನಡೆಸಿವೆ ಎಂದು ಹೇಳಲಾಗಿದೆ.

ಅತ್ಯಂತ ಸುರಕ್ಷಿತ ಪ್ರದೇಶ

ಇನ್ನು ಇರಾನ್ ತನ್ನ ಪರಮಾಣು ಸಾಮಗ್ರಿಗಳನ್ನು ಅತ್ಯಂತ ಸುರಕ್ಷಿತ ಪ್ರದೇಶದಲ್ಲಿ ನಿರ್ಮಿಸಿದ್ದು, ಇದು ಪರ್ವತದೊಳಗೆ ನಿರ್ಮಿಸಲ್ಪಟ್ಟಿದೆ ಮತ್ತು ಹೆಚ್ಚಿನ ಕ್ಷಿಪಣಿ ದಾಳಿಗಳಿಗೆ ನಿರೋಧಕವಾಗಿದೆ ಎಂದು ಪರಿಗಣಿಸಲಾಗಿದೆ. ಇದೇ ಕಾರಣಕ್ಕಾಗಿ ಅಮೆರಿಕ ಸೇನೆ ತನ್ನ B-2 'ಸ್ಪಿರಿಟ್' ಬಾಂಬರ್‌ ಯುದ್ಧ ವಿಮಾನ ಮತ್ತು GBU-37 'ಬಂಕರ್ ಬಸ್ಟರ್ಸ್' ಬಾಂಬ್‌ಗಳನ್ನು ನಿಯೋಜಿಸಿತ್ತು ಎನ್ನಲಾಗಿದೆ. ಈ ಯುದ್ಧ ವಿಮಾನ ಇರಾನ್ ನ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಪರಮಾಣು ಸೌಲಭ್ಯಗಳ ಮೇಲೆ ಬಾಂಬ್‌ಗಳನ್ನು ಬೀಳಿಸಿತ್ತು.

ಪರಿಣಾಮ ಇಲ್ಲ

ಆದರೆ ಅಮೆರಿಕ ಸೇನೆ ಇರಾನ್ ನ ಪರಮಾಣು ಘಟಕಗಳ ಮೇಲೆ ಬಾಂಬ್ ದಾಳಿ ನಡೆಸಿತಾದರೂ ಅಲ್ಲಿ ಯಾವುದೇ ಗಮನಾರ್ಹ ಪರಿಣಾಮವಾಗಿಲ್ಲ ಎಂದು ಹೇಳಲಾಗಿದೆ. ಬಾಂಬ್ ದಾಳಿಯಲ್ಲಿ ಅಲ್ಲಿನ ಭೂಮಿ ಮೇಲೆ ಪರಿಣಾಮವಾಗಿದೆಯಾದರೂ ಅಲ್ಲಿ ಯಾವುದೇ ರೀತಿಯ ಪರಮಾಣು ಸೋರಿಕೆಯಾಗಿಲ್ಲ. ಹೀಗಾಗಿ ಅಮೆರಿಕ ಸೇನೆ ದಾಳಿ ನಡೆಸಿದ ಪ್ರದೇಶಗಳಲ್ಲಿ ಪರಮಾಣು ಸಾಮಾಗ್ರಿಗಳೇ ಇರಲಿಲ್ಲ ಎಂದೂ ಹೇಳಲಾಗುತ್ತಿದೆ.

ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಪರಿಶೀಲನೆ

ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ, ಜಾಗತಿಕ ಪರಮಾಣು ಕಾವಲು ಸಂಸ್ಥೆ - IAEA ಯ ಮುಖ್ಯಸ್ಥ ರಾಫೆಲ್ ಗ್ರೊಸಿ ಈ ಬಗ್ಗೆ ಮಾತನಾಡಿದ್ದು, 'ಇರಾನ್ ಮೇಲೆ ಇಸ್ರೇಲ್‌ನ ಮೊದಲ ದಾಳಿಗೆ ಒಂದು ವಾರ ಮೊದಲು ಇದನ್ನು ಕೊನೆಯದಾಗಿ ಪರಿಶೀಲಿಸಲಾಗಿತ್ತು. ಕಳೆದ ವಾರ ಗ್ರೊಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತೆ ತಪಾಸಣೆ ಮಾಡುವ ಅಗತ್ಯ ಇದೆ. IAEA ಸಾಧ್ಯವಾದಷ್ಟು ಬೇಗ ತಪಾಸಣೆಗಳನ್ನು ಪುನರಾರಂಭಿಸುತ್ತದೆ ಎಂದು ಹೇಳಿದರು.

ಅಂತೆಯೇ ನಿರಂತರ ಮಿಲಿಟರಿ ಏರಿಕೆಯು ಈ "ಅನಿವಾರ್ಯ ಕೆಲಸ"ವನ್ನು ವಿಳಂಬಗೊಳಿಸುತ್ತದೆ ಮತ್ತು ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯುವುದನ್ನು ತಡೆಯಲು ರಾಜತಾಂತ್ರಿಕ ಪರಿಹಾರದ ಸಾಧ್ಯತೆಗಳನ್ನು ಕುಗ್ಗಿಸುತ್ತದೆ ಎಂದು ಅವರು ಎಚ್ಚರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT