ಸಚಿವಾಲಯ ಹೊರಡಿಸಿರುವ ಪ್ರಕಟಣೆಯಲ್ಲಿ ಒಂದು ಬೇನಾಮಿ ಕಂಪನಿ 2,134 ಬ್ಯಾಂಕ್ ಖಾತೆಗಳನ್ನು ಹೊಂದಿತ್ತು ಎಂಬ ಅಂಶ ಬೆಳಕಿಗೆ ಬಂದಿದ್ದು, ಆರಂಭದಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲದೆ ತೆರೆಯಲಾದ ಈ ಕಂಪನಿಗೆ ಸಂಬಂಧಿತ ಖಾತೆಯಲ್ಲಿ ನೋಟು ನಿಷೇಧ ಬಳಿಕ ನಿಷೇಧಿತ 500 ಮತ್ತು 1000 ನೋಟುಗಳ ಸುಮಾರು 2,484 ಕೋಟಿ ರು. ವಹಿವಾಟು ನಡೆದಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಪ್ರಸ್ತುತ ಈ ಶಂಕಿತ ಬೇನಾಮಿ ಕಂಪನಿಗಳಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳನ್ನು ಕೇಂದ್ರ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದ್ದು, ಈ ಸಂಬಂಧ ವಿಚಾರಣೆ ಮುಂದುವರೆಸಿದೆ.