ಪ್ರವಾಸೋದ್ಯಮ ಭಾರತವನ್ನು ಹೇಗೆ ಮರುರೂಪಿಸುತ್ತಿದೆ?

ಪ್ರಯಾಣ ಮತ್ತು ವಸತಿ ಸೌಕರ್ಯ ಉದ್ಯಮವು ಬಹುಶಃ ಭಾರತದಲ್ಲಿನ ಪ್ರಮುಖ ಮತ್ತು ಫಲಪ್ರದ ಕೈಗಾರಿಕೆಗಳಲ್ಲಿ ಒಂದಾಗಿದೆ.
ಪ್ರವಾಸೋದ್ಯಮ ಭಾರತವನ್ನು ಹೇಗೆ ಮರುರೂಪಿಸುತ್ತಿದೆ?
Updated on

ಪ್ರಯಾಣ ಮತ್ತು ವಸತಿ ಸೌಕರ್ಯ ಉದ್ಯಮವು ಬಹುಶಃ ಭಾರತದಲ್ಲಿನ ಪ್ರಮುಖ ಮತ್ತು ಫಲಪ್ರದ ಕೈಗಾರಿಕೆಗಳಲ್ಲಿ ಒಂದಾಗಿದೆ. ಪ್ರವಾಸೋದ್ಯಮಕ್ಕೆ ಧನ್ಯವಾದಗಳು, ದೇಶಕ್ಕೆ ವೇಗದ ಮತ್ತು ಯಶಸ್ವಿ ಅಭಿವೃದ್ಧಿ ತಿಳಿದಿದೆ. 2012 ರಲ್ಲಿ, ಪ್ರವಾಸೋದ್ಯಮವು ರಾಷ್ಟ್ರೀಯ ಜಿಡಿಪಿಯಲ್ಲಿ ಸುಮಾರು 7% ರಷ್ಟನ್ನು ಉತ್ಪಾದಿಸಿತು. ರಾಷ್ಟ್ರೀಯ ಮಟ್ಟದ ಒಟ್ಟು ಉದ್ಯೋಗಿಗಳಲ್ಲಿ ಸುಮಾರು 8% ರಷ್ಟು ಮಂದಿ, ಪ್ರವಾಸ ಮತ್ತು ವಸತಿ ಸೌಕರ್ಯ ಉದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ಉದ್ಯಮಕ್ಕ ಖಂಡಿತವಾಗಿಯೂ ಅಪಾರವಾಗಿ ಬೆಳೆಯುವ ಅವಕಾಶವಿದೆ. ಪ್ರವಾಸೋದ್ಯಮವು ಕೇವಲ ಆರ್ಥಿಕ ಅಭಿವೃದ್ಧಿಗೆ ಮಾತ್ರವಲ್ಲದೇ, ಇದು ಭಾರತೀಯ ಸಮಾಜವನ್ನು ಮರುರೂಪಿಸುತ್ತಿದೆ. ವಿವಿಧ ದೃಷ್ಟಿಕೋನಗಳಿಂದ ನೋಡಿದಾಗ, ಪ್ರವಾಸೋದ್ಯಮವು ಭಾರತವನ್ನು ಮರುರೂಪಿಸುತ್ತಿರುವ ಕೆಲವು ವಿಧಾನಗಳನ್ನು ಇಲ್ಲಿ ಕೊಡಲಾಗಿದೆ.

2018ರಲ್ಲಿ ಪ್ರಯಾಣ ಮತ್ತು ಪ್ರವಾಸೋದ್ಯಮಕ್ಕೆ ತೆರಿಗೆಗಳು ಕಡಿಮೆ ಇದೆ
2018 ರಲ್ಲಿ, ಭಾರತ ಸರ್ಕಾರವು ಪ್ರಯಾಣ ಮತ್ತು ಪ್ರವಾಸೋದ್ಯಮ ವಲಯದಲ್ಲಿನ ಸ್ಥಾಪನೆಗಳಿಗೆ ಕೆಲವು ತೆರಿಗೆಗಳನ್ನು ಕಡಿತಗೊಳಿಸುವ ಕುರಿತು ಪ್ರಸ್ತಾಪ ಮಾಡಿದೆ. ಅಲ್ಲದೆ, ಇವುಗಳಿಗೆ ಫೆಡರಲ್ ನಿಧಿಯಿಂದ ಸ್ವಲ್ಪ ಹಣಕಾಸು ನೆರವು ತರಲು ನಿರೀಕ್ಷಿಸಲಾಗಿದೆ. ಇದರಿಂದ, ಭಾರತೀಯ ಪ್ರವಾಸೋದ್ಯಮ ಕ್ಷೇತ್ರವು ಇನ್ನೂ ಹೆಚ್ಚು ಬೆಳೆಯುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ. ಆದರೆ, ಇದರಿಂದಾಗಿ ಹಣದುಬ್ಬರವು ಇನ್ನಷ್ಟು ಕಡಿಮೆಯಾಗುತ್ತದೆ ಮತ್ತು ಅನೇಕ ನಾಗರಿಕರ ಜೀವನಮಟ್ಟವನ್ನು ಉತ್ಕೃಷ್ಟಗೊಳಿಸುತ್ತದೆ. 2017 ರಲ್ಲಿ ಪ್ರವಾಸೋದ್ಯಮವು 10% ರಷ್ಟು ಬೆಳೆದಿದೆ. 2016 ರಲ್ಲಿ ಪ್ರವಾಸೋದ್ಯಮದ ಬೆಳವಣಿಗೆಯು 6% -7% ರಷ್ಟಿತ್ತು. ಇನ್ನೂ ಒಳ್ಳೆಯ ವಿಷಯಗಳು ಬರಲಿವೆ, ಈ ಕ್ಷೇತ್ರದಲ್ಲಿನ ವ್ಯಾಪಾರ ಸಂಸ್ಥೆಗಳಿಗೆ ಹೆಚ್ಚು ಅನುಕೂಲಗಳನ್ನು ಕಲ್ಪಿಸುವ ಇತ್ತೀಚಿನ ಶಾಸಕಾಂಗ ಮಾರ್ಪಾಡುಗಳಿಗೆ ಧನ್ಯವಾದಗಳು.

ಇನ್ಮುಂದೆ ಅಗ್ಗದ ದರದಲ್ಲಿ ವಿಮಾನ ಪ್ರಯಾಣ ಸಾಧ್ಯ
ಹೆಚ್ಚು ಹೆಚ್ಚು ಕಂಪನಿಗಳು ಇಂಡಿಯಾ ವೀಸಾ ಆನ್ ಲೈನ್ ಸಲಹಾ ಸೇವೆಗಳನ್ನು ಒದಗಿಸುತ್ತವೆ, ವಿಮಾನ ಪ್ರಯಾಣ ಕಂಪನಿಗಳು ಹೆಚ್ಚು ಸ್ಪರ್ಧಾತ್ಮಕ ವಾತಾವರಣವನ್ನು ಸೃಷ್ಟಿಸಲು ತಮ್ಮ ಬೆಲೆಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಆಸಕ್ತಿ ತೋರುತ್ತಿದ್ದಾರೆ. ಅಲ್ಲದೆ, ಸದ್ಯ ಇರುವ ಮೂಲಸೌಕರ್ಯವನ್ನು ವಿಸ್ತರಿಸಬೇಕಾಗಿದೆ, ಏಕೆಂದರೆ ದೇಶವು ಒಂದು ಹಂತದ ಮೇಲ್ಮಟ್ಟ ತಲುಪಿದೆ. ವಿದೇಶಿ ಪ್ರವಾಸಿಗರ ಹೆಚ್ಚಿನ ಬೇಡಿಕೆಯು ಅವುಗಳನ್ನು ಹೆಚ್ಚು ಸ್ಪರ್ಧಾತ್ಮಕವನ್ನಾಗಿ ಮಾಡಲು, ಬೆಲೆಗಳ ವ್ಯಾಪಕ ಹೊಂದಾಣಿಕೆಯನ್ನು ಉತ್ಪಾದಿಸುವಂತೆ ತೋರುತ್ತದೆ. ಅಲ್ಲದೆ, ಪ್ರಧಾನಿಯವರು ಇತ್ತೀಚೆಗೆ ದೂರದ ಉತ್ತರ ಮತ್ತು ಈಶಾನ್ಯ ರಾಜ್ಯಗಳ ಅಭಿವೃದ್ಧಿ ಈ ವರ್ಷದ ಪ್ರಮುಖ ಗುರಿಯಾಗಿದೆ ಎಂದು ಹೇಳಿದ್ದಾರೆ. 2008 ರಿಂದೀಚೆಗೆ, ಭಾರತದ ಹೊಟೇಲ್ ಗಳಲ್ಲಿನ ಆಕ್ಯುಪೆನ್ಸೀ ಮಟ್ಟಗಳು ದಶಕಗಳಿಗೆ ಹೋಲಿಸಿದರೆ ಈಗ ಅತಿ ಹೆಚ್ಚಿನ ಮಟ್ಟಕ್ಕೆ ಏರಿದೆ ಮತ್ತು ಹೊಸ ನಿರ್ಮಾಣಗಳಿಗೆ ಬೇಡಿಕೆ ಕೂಡಾ ಹೆಚ್ಚಾಗಿದೆ. ಈ ಗುರಿ ಸಾಧಿಸುವತ್ತ ಕೆಲಸ ಮಾಡಲು ಅಪಾರ ಸಾಮರ್ಥ್ಯ ಮತ್ತು ಸಾಕಷ್ಟು ಸಿದ್ಧರಿರುವ ಜನರನ್ನು ಹೊಂದಿರುವ ದೇಶ ಭಾರತ.

ದೇಶೀಯ ಪ್ರವಾಸಿಗರು ಮತ್ತು ಆನ್ ಲೈನ್ ಪಾವತಿಗಳು
ದೇಶದ ಅಭಿವೃದ್ಧಿಯ ಮಟ್ಟವನ್ನು ಅಲ್ಲಿನ ಸಮಾಜವು ಆನ್ ಲೈನ್ ನಲ್ಲಿ ಪಾವತಿಸುವ ಮಟ್ಟದಿಂದ ಅಳೆಯಬಹುದು ಎಂದು ಇತ್ತೀಚಿನ ಸಮೀಕ್ಷೆಗಳು ಹೇಳುತ್ತವೆ. ಭಾರತದಲ್ಲಿ 80% ರಷ್ಟು ಪ್ರವಾಸಿಗರು ದೇಶೀಯ ಪ್ರವಾಸಿಗರಾಗಿದ್ದಾರೆ ಮತ್ತು ಈ ಜನರು ಪ್ರಯಾಣಿಸುವ ಸಂಖ್ಯೆ ಹೆಚ್ಚುತ್ತಿರುವುದರಿಂದ, ಕಳೆದ ಕೆಲವು ವರ್ಷಗಳಲ್ಲಿ ಆನ್ ಲೈನ್ ಪಾವತಿಯ ಹೆಚ್ಚಳವು ಕಂಡುಬಂದಿದೆ ಎನ್ನುವುದನ್ನು ಗಮನಿಸಬೇಕಾಗಿದೆ. ಇದರ ಅರ್ಥವೇನೆಂದರೆ ಭಾರತೀಯ ಆರ್ಥಿಕತೆಯ ಜೊತೆಗೆ ಜನಸಂಖ್ಯೆಯ ಅಭಿವೃದ್ಧಿ ಕೂಡಾ ಬೆಳೆಯುತ್ತಿದೆ. ಈಗ ಅಲ್ಪ ಸಮಯದಲ್ಲಿಯೇ ತಂತ್ರಜ್ಞಾನವನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಳ್ಳಬಹುದು.

ಭಾರತದ ಪ್ರವಾಸೋದ್ಯಮ ಉದ್ಯಮವು ಬೆಳೆಯುತ್ತಿರುವಂತೆಯೇ, ದೇಶವು ಅಪಾರ ಸಾಮಾಜಿಕ ಅಭಿವೃದ್ಧಿ ಮತ್ತು ಆರ್ಥಿಕ ಸಾಮರ್ಥ್ಯವನ್ನು ತಿಳಿದುಕೊಳ್ಳಲು ಪ್ರಾರಂಭಿಸುತ್ತದೆಂದು ನಿರೀಕ್ಷಿಸಲಾಗಿದೆ. ಸಾಕಷ್ಟು ಸಾಮರ್ಥ್ಯದೊಂದಿಗೆ ಹಲವಾರು ಪ್ರದೇಶಗಳನ್ನು ಹೊಂದಿರುವ ಭಾರತವು, ಏಷ್ಯಾದ ಮುಂದಿನ ದೊಡ್ಡ ಪ್ರವಾಸಿ ಕೇಂದ್ರವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com