2016 ರ ನವೆಂಬರ್ ನಲ್ಲಿ ಕಪ್ಪು ಹಣವನ್ನು ತಡೆಯುವ ನಿಟ್ಟಿನಲ್ಲಿ ಭಾರೀ ಮೌಲ್ಯದ ನೋಟುಗಳಾದ 500 ಹಾಗೂ 1,000 ಮುಖಬೆಲೆಯ ನೋಟುಗಳನ್ನು ಸರ್ಕಾರ ನಿಷೇಧಿಸಿತ್ತು. ಇದಾದ ನಂತರದಲ್ಲಿ ದೇಶದ ಅತಿ ದೊಡ್ಡ ಪರೋಕ್ಷ ತೆರಿಗೆ ಸುಧಾರಣೆ ಆಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಅನ್ನು ಜಾರಿಗೆ ತಂದಿತು. ಈ ಎರಡೂ ಕ್ರಮಗಳು ದೇಶದ ಆರ್ಥಿಕ ಚಟುವಟಿಕೆ ಮೇಲೆ ಅತ್ಯಂತ ಕಡಿಮೆ ಅವಧಿಯಲ್ಲಿ ಗಾಢ ಪರಿನಾಮ ಬೀರಿದ್ದವು.