Indian Stock Market: ಪುಟಿದೆದ್ದ ಮಾರುಕಟ್ಟೆ; Sensex 789 ಅಂಕ ಏರಿಕೆ, 5 ಲಕ್ಷ ಕೋಟಿ ರೂ ಲಾಭ

ಗುರುವಾರ ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
Indian Stock Market
ಭಾರತೀಯ ಷೇರು ಮಾರುಕಟ್ಟೆ
Updated on

ಮುಂಬೈ: ಮಧ್ಯಪ್ರಾಚ್ಯ ಸಂಘರ್ಷದಿಂದ ಮಂಕಾಗಿದ್ದ ಭಾರತೀಯ ಷೇರುಮಾರುಕಟ್ಟೆ ಇಂದು ಪುಟಿದೆದ್ದಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳು ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಗುರುವಾರ ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.1.06ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.1.18ರಷ್ಟು ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್ ಇಂದು ಬರೊಬ್ಬರಿ 789.74ಅಂಕಗಳ ಏರಿಕೆಯೊಂದಿಗೆ 75,398.72 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 277 ಅಂಕಗಳ ಏರಿಕೆಯೊಂದಿಗೆ 23,689.60 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.

ಅಮೆರಿಕದ ಅಧಿಕಾರಿಗಳು, ಬೀಜಿಂಗ್ ತನ್ನ ಇರಾನ್ ನೊಂದಿಗೆ ಇರುವ ಆಪ್ತ ಆರ್ಥಿಕ ಸಂಬಂಧಗಳನ್ನು ಬಳಸಿಕೊಂಡು ಇರಾನ್ ಮೇಲೆ ಒತ್ತಡ ಹೇರಿ ಹೋರ್ಮುಜ್ ಜಲಸಂಧಿಯನ್ನು ಮರುತೆರೆಯುವಂತೆ ಮಾಡಬಹುದು ಎಂದು ಹೇಳಿದ ಬಳಿಕ, ಷೇರುಮಾರುಕ್ಟೆಯಲ್ಲಿ ಚೇತೋಹಾರಿ ವಹಿವಾಟುಗಳು ನಡೆಯುತ್ತಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ತಮ್ಮ ಏರಿಕೆಯನ್ನು ಮುಂದುವರಿಸಿವೆ.

ಗುರುವಾರ ಮಾನದಂಡ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರೀ ಏರಿಕೆ ಕಂಡವು. ಮೌಲ್ಯ ಆಧಾರಿತ ಖರೀದಿ, ಅಸ್ಥಿರತೆ ಕಡಿಮೆಯಾಗಿರುವುದು ಹಾಗೂ ಅಮೆರಿಕಾ-ಚೀನಾ ಮಾತುಕತೆಗಳ ಬಗ್ಗೆ ಮೂಡಿರುವ ಆಶಾವಾದದ ನಡುವೆ ಜಾಗತಿಕ ಮಾರುಕಟ್ಟೆಗಳ ಸಕಾರಾತ್ಮಕ ಪ್ರವೃತ್ತಿ ಈ ಏರಿಕೆಗೆ ಬೆಂಬಲ ನೀಡಿತು.

ಇಂದಿನ ವಹಿವಾಟಿನಲ್ಲಿ ಟೆಲಿಕಾಮ್ ಮತ್ತು ಬ್ಯಾಕಿಂಗ್ ವಲಯಗಳ ಷೇರುಗಳು ಉತ್ತಮ ವಹಿವಾಟು ನಡೆಸಿ ಲಾಭಾಂಶ ಗಳಿಸಿವೆ.

Indian Stock Market
ಪಶ್ಚಿಮ ಏಷ್ಯಾ ಯುದ್ಧ ಮುಂದುವರಿದರೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಅನಿವಾರ್ಯವಾಗಬಹುದು: RBI ಗವರ್ನರ್

ಯಾರಿಗೆ ಲಾಭ? ಯಾರಿಗೆ ನಷ್ಟ?

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ, ಭಾರ್ತಿ ಏರ್ಟೆಲ್(Bharti Airtel) ಅತಿ ದೊಡ್ಡ ಏರಿಕೆ ಕಂಡ ಕಂಪನಿಯಾಗಿ ಹೊರಹೊಮ್ಮಿದ್ದು, ಟೆಲಿಕಾಂ ಸಂಸ್ಥೆಯ ವಾರ್ಷಿಕ ಆದಾಯ ಮೊದಲ ಬಾರಿಗೆ 2 ಲಕ್ಷ ಕೋಟಿ ರೂಪಾಯಿ ಗಡಿ ದಾಟಿದ ಹಿನ್ನೆಲೆ, ಕಂಪನಿಯ ಷೇರುಗಳು 5 ಶೇಕಡಕ್ಕಿಂತ ಹೆಚ್ಚು ಏರಿಕೆ ಕಂಡವು.

ಅಂತೆಯೇ ಎಟರ್ನೆಲ್ (Eternal) ಸಂಸ್ಥೆಯ ಷೇರುಗಳು ಶೇಕಡಾ 3.32ರಷ್ಟು ಏರಿಕೆ ಕಂಡರೆ, HDFC Bank ಶೇಕಡಾ 2.67 ರಷ್ಟು ಏರಿಕೆ ಕಂಡು, ಸೆನ್ಸೆಕ್ಸ್ ಏರಿಕೆಗೆ ಪ್ರಮುಖ ಕೊಡುಗೆ ನೀಡಿದ ಕಂಪನಿಗಳಾಗಿ ಹೊರಹೊಮ್ಮಿದವು.

ಉಳಿದಂತೆ ಅದಾನಿ ಪೋರ್ಟ್ಸ್, ಸನ್ ಫಾರ್ಮಾಸ್ಯುಟಿಕಲ್ಸ್, ಬಜಾಜ್ ಫೈನಾನ್ಸ್, ಮಹೀಂದ್ರಾ & ಮಹೀಂದ್ರಾ, NTPC, ಕೋಟಕ್ ಮಹೀಂದ್ರಾ ಬ್ಯಾಂಕ್, ಟೈಟಾನ್, ಟ್ರೆಂಟ್, ಅಲ್ಟ್ರಾಟೆಕ್ ಸಿಮೆಂಟ್, ITC ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ಇನ್ಫೋಸಿಸ್, ಟೆಕ್ ಮಹೀಂದ್ರಾ, ಎಚ್‌ಸಿಎಲ್ ಟೆಕ್ನಾಲಜೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಹಿಂದೂಸ್ತಾನ್ ಯೂನಿಲಿವರ್, ಆಕ್ಸಿಸ್ ಬ್ಯಾಂಕ್ ಮತ್ತು ಮಾರುತಿ ಸುಜುಕಿ ಇಂಡಿಯಾ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.

5 ಲಕ್ಷ ಕೋಟಿ ರೂ ಲಾಭ

2026ರ ಮೇ 14ರ ಗುರುವಾರ, ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಮಾರುಕಟ್ಟೆ ಮೌಲ್ಯವು ಸುಮಾರು 463 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದ್ದು, ಭಾರತೀಯ ಹೂಡಿಕೆದಾರರಿಗೆ 5 ಲಕ್ಷ ಕೋಟಿ ರೂಪಾಯಿಗೂ ಅಧಿಕ ಲಾಭ ದೊರೆತಂತಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com