ಬೆರಳ ತುದಿಯಲ್ಲಿ ಹೂಡಿಕೆ ಸೌಲಭ್ಯ: ಗ್ರೋ ಸಂಸ್ಥೆಯಿಂದ ವಿನೂತನ ಪ್ರಯತ್ನಪ್ರಸಿದ್ದ ಹೂಡಿಕೆ ವೇದಿಕೆಯಾದ ಗ್ರೋ ಸಂಸ್ಥೆಯು ಗ್ರಾಹಕರ ಬೆರಳ ತುದಿಯಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಸೌಲಭ್ಯವನ್ನು ಕಲ್ಪಿಸಿದೆ.
ಆರ್ಥಿಕತೆ ಬಗ್ಗೆ ಕ್ರೆಡಿಟ್ ರೇಟಿಂಗ್ ಸಂಸ್ಥೆಗಳಿಂದ ಅಭಿಪ್ರಾಯ ಸಂಗ್ರಹಿಸಿದ ಆರ್ ಬಿಐಆರ್ ಬಿಐ ಗೌರ್ನರ್ ಶಕ್ತಿಕಾಂತ್ ದಾಸ್ ಕ್ರೆಡಿಟ್ ರೇಟಿಂಗ್ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದು, ಮೈಕ್ರೋ ಎಕಾನಾಮಿಕ್ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದ್ದಾರೆ.
ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ, ಸತತ 5ನೇ ದಿನವೂ ಗ್ರಾಹಕರಿಗೆ ತಪ್ಪದ ಬರೆ!ದೇಶದಲ್ಲಿ ಕೊರೋನಾ ಪ್ರಕರಣ ಹೆಚ್ಚುತ್ತಿರುವಂತೆ ಪೆಟ್ರೋಲ್ ಹಾಗೂ ಡೀಸೆಲ್ ತೈಲ ಬೆಲೆ ಏರಿಕೆ ಗುರುವಾರವೂ ಮುಂದುವರೆದಿದ್ದು, ಗ್ರಾಹಕರಿಗೆ ಬರೆ ಹಾಕುತ್ತಿವೆ.
ಲಾಕ್ಡೌನ್ ಅವಧಿಯಲ್ಲಿ ನೌಕರರ ಭವಿಷ್ಯನಿಧಿ ಸಂಸ್ಥೆಯಿಂದ 36.02 ಲಕ್ಷ ಅರ್ಜಿಗಳು ಇತ್ಯರ್ಥಇಪಿಎಫ್ಒ ಈ ವರ್ಷದ ಏಪ್ರಿಲ್ ಮತ್ತು ಮೇ ಕೊನೆಯವರೆಗೆ ಎರಡು ತಿಂಗಳಲ್ಲಿ 36.02 ಲಕ್ಷ ಅರ್ಜಿಗಳನ್ನು ಇತ್ಯರ್ಥಪಡಿಸಿ ತನ್ನ ಸದಸ್ಯರಿಗೆ 11,540 ಕೋಟಿ ರೂ ವಿತರಿಸಿದೆ.
ಭಾರತದ 21-22 ನೇ ಸಾಲಿನ ಜಿಡಿಪಿ ಶೇ.9.5 ಕ್ಕೆ ಪುಟಿದೇಳಲಿದೆ: ಫಿಚ್20-21 ನೇ ಸಾಲಿನ ಆರ್ಥಿಕ ವರ್ಷದ ಕುಸಿತದ ನಡುವೆಯೇ ಭಾರತೀಯರಿಗೆ ಸಂತಸ ವಿಷಯವೊಂದು ಬಹಿರಂಗಗೊಂಡಿದ್ದು, 21-22 ನೇ ಆರ್ಥಿಕ ವರ್ಷದಲ್ಲಿ ಜಿಡಿಪಿ ಶೇ.9.5 ಕ್ಕೆ ಪುಟಿದೇಳಲಿದೆ ಎಂದು ಫಿಚ್ ರೇಟಿಂಗ್ಸ್ ಹೇಳಿದೆ.
ಎಟಿಎಂ ಸೇವಾ ಶುಲ್ಕದ ಮೂಲಕ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕಲೆಹಾಕಿದ ಮೊತ್ತ ಎಷ್ಟು ಗೊತ್ತಾ?ನೀರವ್ ಮೋದಿ ಪ್ರಕರಣ ಮತ್ತು ಆಡಿ ಕಾರು ಖರೀದಿ ಮೂಲಕ ಸುದ್ದಿಗೆ ಗ್ರಾಸವಾಗಿದ್ದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಟಿಎಂ ಸೇವಾ ಶುಲ್ಕದ ಮೂಲಕ ಸುಮಾರು ನೂರಾರು ಕೋಟಿ ರೂಗಳನ್ನು ಸಂಗ್ರಹಿಸಿದೆ.
ಸತತ ನಾಲ್ಕನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಇಂದಿನ ಬೆಲೆ ವಿವರ ಇಲ್ಲಿದೆ...ಕಳೆದ ಮೂರು ದಿನಗಳಿಂದ ತಲಾ 60 ಪೈಸೆ ಏರಿಕೆಯಾಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಸತತ ನಾಲ್ಕನೇ ದಿನವೂ ಏರಿಕೆಯ ಮಾಡಲಾಗಿದೆ. ಬುಧವಾರ ಲೀಟರ್ ಪೆಟ್ರೋಲ್ ದರವು 40 ಪೈಸೆ ಹಾಗೂ ಡೀಸೆಲ್ ಬೆಲೆ 45 ಪೈಸೆ ಏರಿಕೆ ಮಾಡಲಾಗಿದೆ.
ಲಾಕ್ ಡೌನ್ ನಷ್ಟದ ನಡುವೆಯೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಉನ್ನತ ಅಧಿಕಾರಿಗಳಿಗೆ ದುಬಾರಿ ಆಡಿ ಕಾರು!ಇಡೀ ದೇಶ ಕೊರೋನಾ ವೈರಸ್ ಸಾಂಕ್ರಾಮಿಕ ಲಾಕ್ಡೌನ್ ನಿಂದಾಗಿ ಆರ್ಥಿಕ ಕುಸಿತದಿಂದ ಭಾರಿ ನಷ್ಟ ಅನುಭವಿಸುತ್ತಿರುವ ನಡುವೆಯೇ ನೀರವ್ ಮೋದಿ ವಂಚನೆ ಪ್ರಕರಣದ ಮೂಲಕ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಇದೀಗ ತನ್ನ ಉನ್ನತ ಅಧಿಕಾರಿಗಳಿಗೆ ದುಬಾರಿ ಆಡಿ ಕಾರುಗಳ ನೀಡುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದೆ.
ಪೆಟ್ರೋಲ್, ಡೀಸೆಲ್ ಬೆಲೆ ಮೂರನೇ ದಿನವೂ ಏರಿಕೆಸತತ ಮೂರನೇ ದಿನವೂ ತೈಲೋತ್ಪನ್ನ ಕಂಪನಿಗಳು ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದ್ದು, ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ದರವನ್ನು ಕ್ರಮವಾಗಿ 54 ಪೈಸೆ ಮತ್ತು 58 ಪೈಸೆ ಹೆಚ್ಚಿಸಲಾಗಿದೆ.
ಲಾಕ್ಡೌನ್ ಟೈಮಲ್ಲಿ 8 ದಶಕಗಳ ಗರಿಷ್ಠ ಮಾರಾಟ ಕಂಡ ಪಾರ್ಲೆ ಜಿ!ಸಾಮಾನ್ಯ ಜನರ ಪಾಲಿಗೆ ಅತ್ಯಂತ ಪ್ರಿಯವಾದ ಪಾರ್ಲೆ ಜಿ ಬಿಸ್ಕೆಟ್ ಈ ಲಾಕ್ ಡೌನ್ ವೇಳೆ ತನ್ನ ಎಂಬತ್ತು ವರ್ಷಗಳ ದಾಖಲೆಯನ್ನು ಮುರಿದಿದೆ. ಲಾಕ್ಡೌನ್ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಬಿಸ್ಕತ್ತುಗಳ ಮಾರಾಟ ಕಂಡು ಸಂಸ್ಥೆ ವಿಶಿಷ್ಟ ಸಾಧನೆ ಮಾಡಿದೆ.
ಮುಕ್ತವಾಗಿರಿ, ತಾಳ್ಮೆಯಿಂದಿರಿ, ಭರವಸೆಯಿಡಿ: 2020ರ ಪದವೀಧರರಿಗೆ ಸುಂದರ್ ಪಿಚೈ ಕಿವಿ ಮಾತುಮುಕ್ತವಾಗಿರಿ, ಭರವಸೆ ಮತ್ತು ತಾಳ್ಮೆಯಿಂದಿರಿ ಎಂದು 2020ನೇ ಸಾಲಿನ ಪದವೀಧರರಿಗೆ ಸಲಹೆ ನೀಡಿರುವ ಗೂಗಲ್ ಸಿಇಒ ಸುಂದರ್ ಪಿಚೈ ಅವರು, "ನಿಮಗೆ ಎಲ್ಲವನ್ನೂ ಬದಲಾಯಿಸುವ ಅವಕಾಶ" ಇದೆ ಎಂಬ ವಿಶ್ವಾಸ ತುಂಬಿದ್ದಾರೆ.
2020-21 ನೇ ಸಾಲಿನ ವಿತ್ತೀಯ ಕೊರತೆ ಶೇ.5.1ಕ್ಕೆ ಏರಿಕೆ ಸಾಧ್ಯತೆ2020-21ನೇ ಆರ್ಥಿಕ ವರ್ಷದ ವಿತ್ತೀಯ ಕೊರತೆ ಈ ಹಿಂದೆ ಇದ್ದ ಅಂದಾಜಿಗಿಂತಲೂ ಹೆಚ್ಚಾಗಲಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣಿಯಂ ಹೇಳಿದ್ದಾರೆ.
ಮತ್ತೆ ಇಂಧನ ದರ ಏರಿಸಿದ ತೈಲ ಕಂಪನಿ: ಪೆಟ್ರೋಲ್, ಡೀಸೆಲ್ ಬೆಲೆ 60 ಪೈಸೆ ಏರಿಕೆಜೂ.7 ರಂದಷ್ಟೇ ಇಂಧನ ದರವನ್ನು ಏರಿಕೆ ಮಾಡಿದ್ದ ತೈಲ ಕಂಪನಿಗಳು ಇದೀಗ ಮತ್ತೆ ಸೋಮವಾರ ಪೆಟ್ರೋಲ್ ಮತ್ತು ಡೀಲೆಸ್ ಬೆಲೆಯನ್ನು ಲೀಟರ್'ಗೆ 60 ಪೈಸೆಯಷ್ಟು ಏರಿಕೆ ಮಾಡಿದೆ.
83 ದಿನಗಳ ಬಳಿಕ ಇಂಧನ ದರ ಪರಿಷ್ಕರಣೆ ಆರಂಭ; ಪೆಟ್ರೋಲ್, ಡೀಸೆಲ್ ದರ ಏರಿಕೆ!ಕೊರೋನಾ ವೈರಸ್ ಲಾಕ್ ಡೌನ್ ಸೇರಿದಂತೆ ಸತತ 83 ದಿನಗಳ ವಿರಾಮದ ಬಳಿಕ ದೇಶಾದ್ಯಂತ ಇಂಧನ ದರ ಪರಿಷ್ಕರಣೆ ಪುನಾರಂಭಗೊಂಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಏರಿಕೆ ಕಂಡುಬಂದಿದೆ.
ಜಿಯೋದ ಶೇ 1.16 ಷೇರನ್ನು 5,683 ಕೋಟಿಗೆ ಖರೀದಿಸಿದ ಅಬುಧಾಬಿ ಮೂಲದ ಮತ್ತೊಂದು ಸಂಸ್ಥೆಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿ ಮಾಡಿದ್ದ ಜಿಯೋ ಸಂಸ್ಥೆಯಲ್ಲಿ ಮುಬದಲಾ ಬಳಿಕ ಇದೀಗ ಅಬುದಾಬಿ ಮೂಲದ ಮತ್ತೊಂದು ಸಂಸ್ಥೆ ಬಂಡವಾಳ ಹೂಡಿಕೆ ಮಾಡಿದ್ದು, ಸುಮಾರು 5,683 ಕೋಟಿ ರೂಗಳಿಗೆ ಜಿಯೋದ ಶೇ.1.16ರಷ್ಟು ಷೇರುಗಳನ್ನು ಖರೀದಿ ಮಾಡಿದೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!