ವಿದೇಶಿ ಮಾಧ್ಯಮಗಳಿಗೆ ದೀಪಿಕಾ ಗುರುತು ಸಿಗಲಿಲ್ವಂತೆ!

ಉದ್ದೇಶ ಪೂರ್ವಕವಾಗಿಯೇ ಬ್ರಿಟನ್ ಮಾಧ್ಯಮಗಳು ದೀಪಿಕಾ ಪಡುಕೋಣೆಯನ್ನು ನಿರ್ಲಕ್ಷ್ಯಿಸಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಲಾಸ್ ಏಂಜಲೀಸ್ ...
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ

ಮುಂಬಯಿ: ಉದ್ದೇಶ ಪೂರ್ವಕವಾಗಿಯೇ ಬ್ರಿಟನ್ ಮಾಧ್ಯಮಗಳು ದೀಪಿಕಾ ಪಡುಕೋಣೆಯನ್ನು ನಿರ್ಲಕ್ಷ್ಯಿಸಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಲಾಸ್ ಏಂಜಲೀಸ್ ನಲ್ಲಿ ನೊವಾಕ್ ಜೊಕೊವಿಚ್ ಜೊತೆ ದೀಪಿಕಾ ಪಡುಕೋಣೆ ಕಾಣಿಸಿಕೊಂಡಾಗ ವಿದೇಶಿ ಮಾಧ್ಯಮಗಳಿಗೆ ಈಕೆಯ ಗುರುತು ಸಿಗಲಿಲ್ಲವಂತೆ.

ಇತ್ತೀಚೆಗೆ xxx ಸಿನಿಮಾದಲ್ಲಿ  ವಿನ್ ಡಿಸೇಲ್ ಜೊತೆ ದೀಪಿಕಾ ಪಡುಕೋಣೆ ಅಭಿನಯಿಸುತ್ತಿದ್ದಾರೆ ಎಂಬುದು ಹಾಲಿವುಡ್ ನಲ್ಲಿ ಪ್ರಚಾರ ಪಡೆದಿತ್ತು. ಈ ಸಂಬಂಧ ಡೈಲಿಮೇಲ್ ಪತ್ರಿಕೆ ಕೂಡ ಸಿನಿಮಾ ವಿಭಾಗದಲ್ಲಿ ಹಲವು ಸಲ ಹೇಳಿಕೊಂಡಿತ್ತು,. ಜೊತೆಗೆ ನಾಯಿಕ ದೀಪಿಕಾ ಪಡುಕೋಣೆ ಬಗ್ಗೆ ಕೂಡ ಪ್ರಸ್ತಾಪಿಸಿತ್ತು,.

ಹೀಗಿದ್ದರೂ ಲಾಸ್ ಏಂಜಲೀಸ್ ನಲ್ಲಿ ಜೊಕೊವಿಚ್ ಜೊತೆ ಬಾರ್ ಎದುರು ದೀಪಿಕಾ ಕಾಣಿಸಿಕೊಂಡಾಗ ವಿದೇಶಿ ಮಾಧ್ಯಮಗಳಿಗೆ ದೀಪಿಕಾ ಗುರುತು ಸಿಗಲಿಲ್ವಂತೆ. ಜೊಕೊವಿಚ್ ಜೊತೆ ಫೀಮೇಲ್ ಕಂಪ್ಯಾನಿಯನ್ ಎಂದು ಮಾಧ್ಯಮಗಳು ಸಂಭೋಧಿಸಿವೆ.

ಇದೀಗ ಈ ವಿಷಶಯವನ್ನು ಟ್ವಿಟ್ಟರ್ ನಲ್ಲಿ ಜನಾಂಗಿಯ ನಿಂದನೆ ಎಂದು ಆರೋಪಿಸಿ ಚರ್ಚಿಸಲಾಗುತ್ತಿದೆ. ವಿನ್ ಡೀಸೆಲ್ ಚಿತ್ರದಲ್ಲಿ ದೀಪಿಕಾ ಅಭನಯಿಸುತ್ತಿದ್ದಾಳೆ ಎಂಬುದು ಅಷ್ಟು ದೊಡ್ಡ ಸುದ್ದಿ ಆದ ಮೇಲೂ ಬೇಕಂತಲೇ ಹಾಲಿವುಡ್ ಈ ರೀತಿ ಅವಮಾನಿಸಿದೆ ಭಾರತೀಯ ನಟಿಯರನ್ನು ಕಾಣುವ ರೀತಿಗೆ ಇದೊಂದು ಸ್ಯಾಂಪಲ್ ಅಷ್ಟೇ ಎಂದು ಟೀಕಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com