ಅಮಿತಾಬ್‌ ಬಚ್ಚನ್ ಮತ್ತು ನವ್ಯ ನವೇಲಿ ನಂದಾ
ಅಮಿತಾಬ್‌ ಬಚ್ಚನ್ ಮತ್ತು ನವ್ಯ ನವೇಲಿ ನಂದಾ

ನನ್ನ ಮೊಮ್ಮಗಳದ್ದು ಟ್ವಿಟ್ಟರ್ ಖಾತೆಯಿಲ್ಲ, ಅದು ಫೇಕ್ ಅಕೌಂಟ್: ಅಮಿತಾಬ್ ವಾರ್ನಿಂಗ್

ನನ್ನ ಮೊಮ್ಮಗಳು ನವ್ಯಾಗೆ ಟ್ವಿಟ್ಟರ್ ಅಕೌಂಟ್ ಇಲ್ಲ. ನವ್ಯ ಹೆಸರಿನಲ್ಲಿ ಬರುತ್ತಿರುವ ಟ್ವೀಟ್‌ಗಳು ಫೇಕ್ ಎಂದು ಅಮಿತಾಬ್‌ ಟ್ವೀಟ್‌ ಮಾಡಿದ್ದಾರೆ...

ನವದೆಹಲಿ: ನನ್ನ ಮೊಮ್ಮಗಳು ನವ್ಯಾಗೆ ಟ್ವಿಟ್ಟರ್ ಅಕೌಂಟ್ ಇಲ್ಲ. ನವ್ಯ ಹೆಸರಿನಲ್ಲಿ ಬರುತ್ತಿರುವ ಟ್ವೀಟ್‌ಗಳು ಫೇಕ್ ಎಂದು ಅಮಿತಾಬ್‌ ಟ್ವೀಟ್‌ ಮಾಡಿದ್ದಾರೆ.

ಈವರೆಗೆ ಮೋಜು, ಮಸ್ತಿ, ಬೀಚ್‌ಗಳಲ್ಲಿ ಬಿಕಿನಿ ಪೋಟೋಗಳ ಮೂಲಕ ಸುದ್ದಿಯಾಗುತ್ತಿದ್ದ ನವ್ ನವೇಲಿ ನಂದ ಈಗ ಕ್ರಿಕೆಟ್‌ಗೆ ಸಂಬಂಧಿಸಿದಂತೆ  ಟ್ವೀಟ್‌ ಮಾಡುವ ಮೂಲಕ ಸೀರಿಯಸ್‌ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಹೀಗಾಗಿ ಅಮಿತಾಬ್ ಬಚ್ಚನ್ ಮೊಮ್ಮಗಳ ರಕ್ಷಣೆಗೆ ಮುಂದಾಗಿದ್ದಾರೆ.

ಈ ಹಿಂದೆ ಅಮಿತಾಬ್‌ ಬಚ್ಚನ್‌ ಮೊಮ್ಮಗಳು ನವ್ಯ ನವೇಲಿ ತನ್ನ ಹಸಿ ಬಿಸಿ ಫೋಟೋ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಳು.
ಭಾರತ- ನ್ಯೂಜಿಲ್ಯಾಂಡ್ ಮ್ಯಾಚ್‌ ಸಂಬಂಧಿಸಿದಂತೆ ನವ್ಯಾ ಮಾಡಿದ್ದಾಳೆ ಎನ್ನಲಾದ ಟ್ವೀಟ್‌ವೊಂದು ವಿವಾದ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ  ಅಮಿತಾಬ್ ಮೊಮ್ಮಗಳ ಪರವಾಗಿ ದನಿ ಎತ್ತಿದ್ದಾರೆ. ಮೊಮ್ಮಗಳ ಕುರಿತು ಇಲ್ಲ ಸಲ್ಲದ ನ್ಯೂಸ್‌ ಹಬ್ಬಿಸದಿರಿ ಎಂದು ಎಚ್ಚರಿಕೆ  ನೀಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com