ಮಣಿಕರ್ಣಿಕ ಚಿತ್ರದ ಶೂಟಿಂಗ್ ವೇಳೆ ಕಂಗನಾ ರಣಾವತ್‌ಗೆ ಗಾಯ

ಬಾಲಿವುಡ್ ನಟಿ ಕಂಗನಾ ರಣಾವತ್ ಮಣಿಕರ್ಣಿಕ ಚಿತ್ರದ ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ.
ಕಂಗನಾ ರಣಾವತ್
ಕಂಗನಾ ರಣಾವತ್
ಬಾಲಿವುಡ್ ನಟಿ ಕಂಗನಾ ರಣಾವತ್ ಮಣಿಕರ್ಣಿಕ ಚಿತ್ರದ ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ. 
ಹೈದರಾಬಾದ್ ನಲ್ಲಿ ಮಣಿಕರ್ಣಿಕ: ದಿ ಕ್ವೀನ್ ಆಫ್ ಝಾನ್ಸಿ ಚಿತ್ರದ ಚಿತ್ರೀಕರಣ ನಡೆಸುತ್ತಿತ್ತು. ಕಂಗನಾ ರಣಾವತ್ ಮತ್ತು ನಿಹಾರ್ ಪಾಂಡ್ಯ ನಡುವಿನ ಕತ್ತಿ ವರಸೆ ವೇಳೆ ಅಚಾನಕ್ ಆಗಿ ಕಂಗನಾ ರಣಾವತ್ ಅವರ ಹಣೆಗೆ ಗಾಯವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. 
ಕಂಗನಾ ಅವರ ಹಣೆಗೆ 15 ಸ್ಟಿಚ್ ಗಳನ್ನು ಹಾಕಲಾಗಿದ್ದು ಐದು ದಿನ ವಿಶಾಂತ್ರಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. 
ಚಿತ್ರವನ್ನು ಟಾಲಿವುಡ್ ನಿರ್ದೇಶಕ ಕ್ರಿಶ್ ಮಣಿಕರ್ಣಿಕ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿ ಪಾತ್ರದಲ್ಲಿ ಕಂಗನಾ ನಟಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com