"ಪದ್ಮಾವತಿ"ಗಾಗಿ ರಣ್ ವೀರ್ ಸಿಂಗ್ ಗೆ 24 ಬಾರಿ ಕಪಾಳ ಮೋಕ್ಷ!

ಖ್ಯಾತ ಬಾಲಿವುಡ್ ನಟ ರಣ್ ವೀರ್ ಸಿಂಗ್ ತಮ್ಮ ನೂತನ ಚಿತ್ರ ಪದ್ಮಾವತಿಗಾಗಿ ಬರೊಬ್ಬರಿ 24 ಬಾರಿ ಕಪಾಳ ಮೋಕ್ಷ ಮಾಡಿಸಿಕೊಂಡಿದ್ದಾರಂತೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಖ್ಯಾತ ಬಾಲಿವುಡ್ ನಟ ರಣ್ ವೀರ್ ಸಿಂಗ್ ತಮ್ಮ ನೂತನ ಚಿತ್ರ ಪದ್ಮಾವತಿಗಾಗಿ ಬರೊಬ್ಬರಿ 24 ಬಾರಿ ಕಪಾಳ ಮೋಕ್ಷ ಮಾಡಿಸಿಕೊಂಡಿದ್ದಾರಂತೆ.
ಹೌದು...ರಾಜಸ್ತಾನದ ರಾಣಿ ಪದ್ಮಾವತಿ ಅವರ ಐತಿಹಾಸಿಕ ಕಥಾಹಂದರವುಳ್ಳ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರದ ಚಿತ್ರೀಕರಣದ ವೇಳೆ ನಟ ರಣ್ ವೀರ್ ಸಿಂಗ್ 24 ಬಾರಿ ಕಪಾಳಮೋಕ್ಷ ಮಾಡಿಕೊಂಡಿದ್ದಾರೆ.
ಚಿತ್ರದ ಸನ್ನಿವೇಶವೊಂದರಲ್ಲಿ ಖ್ಯಾತ ಹಿರಿಯ ನಟ ರಝಾ ಮುರಾದ್ ಅವರಿಂದ ರಣ್ ವೀರ್ ಸಿಂಗ್ ಕಪಾಳಕ್ಕೆ ಹೊಡೆಸಿಕೊಳ್ಳಬೇಕು. ಆದರೆ ಈ ಸನ್ನಿವೇಶ ಚಿತ್ರಕರಣದ ವೇಳೆ ಸಾಕಷ್ಟು ಟೇಕ್ ಗಳ ಬಳಿಕವೂ ನಿರ್ದೇಶಕ ಬನ್ಸಾಲಿ ತೃಪ್ತರಾಗಿರಲಿಲ್ಲ. ಸನ್ನಿವೇಶ ಅವರು ಅಂದುಕೊಂಡಂತೆ ಬರಲಿಲ್ಲ ಎಂದು ಪದೇ ಪದೇ ರಿಟೇಕ್ ತೆಗೆದುಕೊಳ್ಳಲು ಹೇಳುತ್ತಿದ್ದಾರೆ.
ಹೀಗೆ ಬನ್ಸಾಲಿ ಹೇಳಿದ್ದು ಬರೊಬ್ಬರಿ 24 ಬಾರಿ..ಅಂದರೆ 24 ಬಾರಿ ರಣ್ ವೀರ್ ಸಿಂಗ್ ಅವರಿಗೆ ನಟ ರಝಾ ಮುರಾದ್ ಅವರು ಕಪಾಳ ಮೋಕ್ಷ ಮಾಡಿದ್ದಾರೆ. ಈ ಬಗ್ಗೆ ಸ್ವತಃ ನಟ ರಣ್ ವೀರ್ ಸಿಂಗ್ ಅವರೇ ಬಹಿರಂಗ ಪಡಿಸಿದ್ದು, ಖ್ಯಾತ ಸಾಮಾಜಿಕ ಜಾಲತಾಣ  ಇನ್ ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಇದಕ್ಕೂ ಮೊದಲು ಇದೇ ರಣ್ ವೀರ್ ಸಿಂಗ್ ತಮ್ಮ ಬೇಫಿಕರ್ ಚಿತ್ರದಲ್ಲಿ 21 ಬಾರಿ ಕಪಾಳ ಮೋಕ್ಷ ಮಾಡಿಸಿಕೊಳ್ಳುವ ಮೂಲಕ ದಾಖಲೆ ಬರೆದಿದ್ದರು. ಇದೀಗ ಪದ್ಮಾವತಿಗಾಗಿ 24 ಬಾರಿ ಕಪಾಳ ಮೋಕ್ಷ ಮಾಡಿಸಿಕೊಂಡು ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ.
ಬಹುಕೋಟಿ ಬಜೆಟ್ ನ ಈ ಚಿತ್ರದಲ್ಲಿ ನಟ ರಣ್ ವೀರ್ ಸಿಂಗ್ ಸುಲ್ತಾನ್ ಅಲ್ಲಾದಿನ್ ಖಿಲ್ಜಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಟಿ ದೀಪಿಕಾ ಪಡುಕೋಣೆ ರಾಣಿ ಪದ್ಮಾವತಿಯಾಗಿ ಕಾಣಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com