ಪ್ರಿಯಾಂಕಾ ಚೋಪ್ರಾ-ನಿಕ್ ಜೋನಾಸ್ ವಿವಾಹ ಫೋಟೊ ಹಕ್ಕು 2.5 ಮಿಲಿಯನ್ ಡಾಲರ್ ಗೆ ಮಾರಾಟ

ಇತ್ತೀಚೆಗಷ್ಟೇ ವಿವಾಹವಾಗಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಾಸ್ ಅವರ ವಿವಾಹ ಪೋಟೋ ಪ್ರಸಾರದ ಹಕ್ಕನ್ನು 2.5 ಮಿಲಿಯನ್ ಡಾಲರ್ ಗೆ ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪ್ರಿಯಾಂಕಾ ಚೋಪ್ರಾ-ನಿಕ್ ಜೋನಾಸ್ ವಿವಾಹ
ಪ್ರಿಯಾಂಕಾ ಚೋಪ್ರಾ-ನಿಕ್ ಜೋನಾಸ್ ವಿವಾಹ
Updated on
ನವದೆಹಲಿ: ಇತ್ತೀಚೆಗಷ್ಟೇ ವಿವಾಹವಾಗಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಾಸ್ ಅವರ ವಿವಾಹ ಪೋಟೋ ಪ್ರಸಾರದ ಹಕ್ಕನ್ನು 2.5 ಮಿಲಿಯನ್ ಡಾಲರ್ ಗೆ ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅವರ ವಿವಾಹ ಕಾರ್ಯಕ್ರಮ ರಾಜಸ್ಥಾನದ ಜೋಧ್ ಪುರದ ಪ್ಯಾಲೆಸ್ ನಲ್ಲಿ ಅದ್ಧೂರಿಯಾಗಿ ನಡೆದಿದೆಯಾದರೂ, ವಿವಾಹದ ಚಿತ್ರಗಳು ಅಷ್ಟಾಗಿ ಮಾಧ್ಯಮಗಳಲ್ಲಿ ಪ್ರಸಾರವಾಗಿರಲಿಲ್ಲ. ಕೇವಲ ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್ ಜೋನಾಸ್ ಅವರ ಟ್ವಿಟರ್ ಮತ್ತು ಇನ್ ಸ್ಟಾಗ್ರಾಮ್ ಖಾತೆಗಳಲ್ಲಿ ಮಾತ್ರ ಒಂದೆರಡು ಚಿತ್ರಗಳು ಹರಿದಾಡಿದ್ದವು. ಆದರೆ ಈ ಬಾಲಿವುಡ್ -ಹಾಲಿವುಡ್ ತಾರೆಯರ ಅದ್ಧೂರಿ ವಿವಾಹದ ಫೋಟೊಗಳಿಗೆ ಅತಿ ಹೆಚ್ಚು ಬೇಡಿಕೆ ಬಂದಿದ್ದು, ಇದರ ನಡುವೆಯೇ ಪೋಟೋ ಪ್ರಸಾರದ ಹಕ್ಕನ್ನು ಮಾರಾಟ ಮಾಡಲಾಗಿದೆ ಎಂಬ ಮಾಹಿತಿ ಕೇಳಿಬಂದಿದೆ.
ಪ್ರಿಯಾಂಕಾ ಮತ್ತು ನಿಕ್ ಕುಟುಂಬದ ಮೂಲಗಳು ತಿಳಿಸಿರುವಂತೆ ಪ್ರಿಯಾಂಕಾ ಹಾಗೂ ನಿಕ್ ವಿವಾಹದ ಫೋಟೊಗಳನ್ನು ಪ್ರಕಟಿಸುವುದಕ್ಕೆ ಅಂತಾರಾಷ್ಟ್ರೀಯ ನಿಯತಕಾಲಿಕೆ ಪೀಪಲ್ ಮ್ಯಾಗಜಿನ್ ಬರೊಬ್ಬರಿ 2.5 ಮಿಲಿಯನ್ ಡಾಲರ್ (ಸುಮಾರು 18 ಕೋಟಿ ರೂ.)ನೀಡಿ ಹಕ್ಕು ಖರೀದಿ ಮಾಡಿದೆ. ಇದೇ ಕಾರಣಕ್ಕೆ ಪ್ರಿಯಾಂಕಾ ಹಾಗೂ ನಿಕ್ ವಿವಾಹದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಹರಿದಾಡುತ್ತಿಲ್ಲ ಎನ್ನಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com