ಬಾಲಿವುಡ್ ನಟಿ ಅನುಷ್ಕಾ ಶರ್ಮಾರ ಸೌಂದರ್ಯ ಹಾಗೂ ಆರೋಗ್ಯ ರಹಸ್ಯ ಏನು ಗೊತ್ತ?

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮಡದಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ತಾವು ಮೂರು ವರ್ಷಗಳಿಂದ ಮಾಂಸಾಹಾರವನ್ನು ತ್ಯಜಿಸಿದ್ದು ಇದು ನನ್ನ...
ಅನುಷ್ಕಾ ಶರ್ಮಾ
ಅನುಷ್ಕಾ ಶರ್ಮಾ
ಮುಂಬೈ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮಡದಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ತಾವು ಮೂರು ವರ್ಷಗಳಿಂದ ಮಾಂಸಾಹಾರವನ್ನು ತ್ಯಜಿಸಿದ್ದು ಇದು ನನ್ನ ಜೀವನದಲ್ಲಿ ತೆಗೆದುಕೊಂಡ ಉತ್ತಮ ನಿರ್ಧಾರ ಎಂದು ಹೇಳಿದ್ದಾರೆ. 
ನಾನು ಸಸ್ಯಹಾರಿ ಆಗಿರುವುದು ನನ್ನ ಜೀವನದಲ್ಲಿ ನಾನು ತೆಗೆದುಕೊಂಡ ಉತ್ತಮ ನಿರ್ಧಾರ. ನನಗೆ ಈಗ ಸಾಕಷ್ಟು ಶಕ್ತಿ ಇದೆ. ನಾನು ಈಗ ತುಂಬಾ ಆರೋಗ್ಯವಾಗಿದ್ದೇನೆ. ನನ್ನ ಆಹಾರದಿಂದ ಯಾವುದೇ ಪ್ರಾಣಿಗಳಿಗೆ ತೊಂದರೆಯಾಗುತ್ತಿಲ್ಲ ಎಂಬುದು ನನಗೆ ಖುಷಿ ಇದೆ ಎಂದು ಅನುಷ್ಕಾ ತಿಳಿಸಿದ್ದಾರೆ. 
ಅನುಷ್ಕಾ ಶರ್ಮಾ ಪೇಟಾ(ಪೀಪಲ್ ಫಾರ್ ದಿ ಎತಿಕಲ್ ಟ್ರೀಟ್ ಮೆಂಟ್ ಆಫ್ ಆನಿಮಲ್ಸ್) ಜಾಗೃತಿ ಮೂಡಿಸುತ್ತಿದ್ದು ಈ ಜಾಹಿರಾತಿನಲ್ಲಿ ನಾನು ಅನುಷ್ಕಾ ಶರ್ಮಾ 'ನಾನು ಸಸ್ಯಹಾರಿ' ಎಂದು ಹೇಳಿದ್ದಾರೆ. 
ಇನ್ನು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸಹ ಮಾಂಸಾಹಾರವನ್ನು ತ್ಯಜಿಸಿದ್ದಾರೆ. ಇದೀಗ ಗಂಡನ ಹಾದಿಯಲ್ಲೇ ಅನುಷ್ಕಾ ಶರ್ಮಾ ನಡೆಯುತ್ತಿದ್ದಾರೆ. ಅಂತೂ ಮಾಂಸಾಹಾರ ತ್ಯಜಿಸಿರುವುದು ಅನುಷ್ಕಾ ಶರ್ಮಾರ ಸೌಂದರ್ಯ ಮತ್ತು ಆರೋಗ್ಯ ವೃದ್ಧಿಗೆ ಕಾರಣ ಎನ್ನಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com