ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ತಮ್ಮ ವಿಚಿತ್ರ ವರ್ತನೆಗಳಿಂದ ಹೆಸರಾಗಿದ್ದಾರೆ. ಆದರೆ ಕೆಲವೊಮ್ಮೆ ಇದು "ಅತಿ" ಎನ್ನಿಸಬಹುದು. ಇದಕ್ಕೆ ಉದಾಹರಣೆಯಾಗಿ ಇತ್ತೀಚೆಗೆ ನಡೆದ ಲ್ಯಾಕ್ಮಿ ಫ್ಯಾಷನ್ ಶೋ ಕಾರ್ಯಕ್ರಮದಲ್ಲಾದ ಘಟನೆಯೇ ಸಾಕ್ಷಿ.
ಫ್ಯಾಷನ್ ವೀಕ್ ನ ಅಂತಿಮ ಪ್ರದರ್ಶನದಲ್ಲಿ ತನ್ನ ಮುಂದಿನ ಚಿತ್ರ "ಗಲ್ಲಿ ಬಾಯ್" ಪ್ರಮೋಷನ್ ಗಾಗಿ ಭಾಗವಹಿಸಿದ್ದ ನಟ ಆ ಚಿತ್ರದ ಹಾಡುಗಳಿಗೆ ನರ್ತಿಸುತ್ತಿದ್ದರು.ಈ ವೇಳೆ ಅವರು ಇದ್ದಕ್ಕಿದ್ದಂತೆ ಪ್ರೇಕ್ಷಕರಿದ್ದ ಗ್ಯಾಲರಿಗೆ ನೆಗೆದಿದ್ದಾರೆ. ಇದು ಅನೇಕರಿಗೆ ಅಚ್ಚರಿ ತಂದಿದೆ.