ನನ್ನ ಹೊಟ್ಟೆ ಮೇಲೆ ಮೊಟ್ಟೆ ಫ್ರೈ ಮಾಡಬೇಕೆಂದು ನಿರ್ಮಾಪಕರೊಬ್ಬರು ಹೇಳಿದ್ರು: ಮಲ್ಲಿಕಾ ಶೆರಾವತ್

ಸಹ ನಟನ ಜೊತೆ ಮಲಗಲಿಲ್ಲ ಎಂಬ ಕಾರಣಕ್ಕೆ ನನ್ನನ್ನು ಚಿತ್ರದಿಂದ ಕೈಬಿಡಲಾಗಿತ್ತು ಅಂತ ಬಾಲಿವುಡ್ ನ ಹಾಟ್ ನಟಿ ಮಲ್ಲಿಕಾ ಶೆರಾವತ್ ಈ ಹಿಂದೆ ಆರೋಪಿಸಿದ್ದು ಇದೀಗ ನಿರ್ಮಾಪಕರೊಬ್ಬರು ನನ್ನ...
ಮಲ್ಲಿಕಾ ಶೆರಾವತ್
ಮಲ್ಲಿಕಾ ಶೆರಾವತ್
ಮುಂಬೈ: ಸಹ ನಟನ ಜೊತೆ ಮಲಗಲಿಲ್ಲ ಎಂಬ ಕಾರಣಕ್ಕೆ ನನ್ನನ್ನು ಚಿತ್ರದಿಂದ ಕೈಬಿಡಲಾಗಿತ್ತು ಅಂತ ಬಾಲಿವುಡ್ ನ ಹಾಟ್ ನಟಿ ಮಲ್ಲಿಕಾ ಶೆರಾವತ್ ಈ ಹಿಂದೆ ಆರೋಪಿಸಿದ್ದು ಇದೀಗ ನಿರ್ಮಾಪಕರೊಬ್ಬರು ನನ್ನ ಹೊಟ್ಟೆ ಮೇಲೆ ಮೊಟ್ಟೆ ಫ್ರೈ ಮಾಡಬೇಕೆಂದು ಅಂತ ಅಂದಿದ್ರು ಎಂದು ಹೇಳಿದ್ದಾರೆ.
ಬೂ ಸಬ್ಕಿ ಫಟೇಗಿ ಚಿತ್ರತಂಡದ ಜೊತೆ ಕಪಿಲ್ ಶರ್ಮಾ ಶೋಗೆ ಮಲ್ಲಿಕಾ ಶೆರವಾತ್ ಅತಿಥಿಯಾಗಿ ಬಂದಿದ್ದರು. ಈ ವೇಳೆ ಕಪೀಲ್ ಕಾರ್ಯಕ್ರಮದಲ್ಲಿ ಮಲ್ಲಿಕಾ ಅವರ ಹಾಟ್ ನೆಸ್ ಬಗ್ಗೆ ಮಾತನಾಡುತ್ತಿದ್ದರು. 
ಒಂದು ಕಾಲದಲ್ಲಿ ಜನರು ಚಪಾತಿಯನ್ನು ಬಿಸಿ ಮಾಡಲು ಮಲ್ಲಿಕಾ ನಿಮ್ಮ ಪೋಸ್ಟರ್ ಅಥವಾ ನಿಮ್ಮ ಫೋಟೋ ಇರುವ ನ್ಯೂಸ್ ಪೇಪರ್ ಉಪಯೋಗಿಸುತ್ತಿದ್ದರು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಲ್ಲಿಕಾ ನಾನು ಈ ಹಿಂದೆ ಶೂಟಿಂಗ್ ಮಾಡುತ್ತಿದ್ದಾಗ ನಿರ್ಮಾಪಕರೊಬ್ಬರು ನನ್ನ ಹೊಟ್ಟೆ ಮೇಲೆ ಮೊಟ್ಟೆ ಫ್ರೈ ಮಾಡಿ ನನ್ನ ಹಾಟ್ ನೆಸ್ ಟೆಸ್ಟ್ ಮಾಡಬೇಕು ಎಂದು ಹೇಳಿದ್ದರು. ಅದಕ್ಕೆ ನಾನು ಒಪ್ಪಲಿಲ್ಲ ಎಂದು ಹೇಳಿದರು.
ಏಕ್ತಾ ಕಪೂರ್ ವೆಬ್ ಸಿರೀಸ್ ನ ಬೂ ಸಬ್ಕಿ ಫಟೇಗಿಯಲ್ಲಿ ಮಲ್ಲಿಕಾ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ತುಷಾರ್ ಕಪೂರ್ ನಾಯಕನಾಗಿ ಅಭಿನಯಿಸಿದ್ದಾರೆ. ಇದೊಂದು ಹಾರರ್-ಕಾಮಿಡಿ ಚಿತ್ರವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com