ಡಿಸೆಂಬರ್ 15ರಿಂದ 'ಕಬ್ಜಾ' ತಂಡವನ್ನು ಕೂಡಿಕೊಳ್ಳಲಿರುವ ನಟ ಸುದೀಪ್: ಮಾಫಿಯಾ ದೊರೆ ಭಾರ್ಗವ್ ಭಕ್ಷಿ ಪಾತ್ರದಲ್ಲಿ ಕಿಚ್ಚ

ಕಬ್ಜಾ ಸಿನಿಮಾ ಮೂಲಕ ಉಪೇಂದ್ರ ಮತ್ತು ಸುದೀಪ್ ಎರಡನೇ ಬಾರಿ ತೆರೆ ಮೇಲೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಮುಕುಂದ ಮುರಾರಿ ಸಿನಿಮಾದಲ್ಲಿ ಅವರಿಬ್ಬರೂ ಜೊತೆಯಾಗಿ ನಟಿಸಿದ್ದರು. 
ಸುದೀಪ್
ಸುದೀಪ್
Updated on

ಬೆಂಗಳೂರು: ಉಪೇಂದ್ರ ಅಭಿನಯದ, ಆರ್.ಚಂದ್ರು ನಿರ್ದೇಶನದ ಕಬ್ಜಾ ಸಿನಿಮಾ ಚಿತ್ರೀಕರಣದಲ್ಲಿ ನಟ ಸುದೀಪ್ ಡಿಸೆಂಬರ್ 15ರಿಂದ ಪಾಲ್ಗೊಳ್ಳಲಿದ್ದಾರೆ. ಅಂಡರ್ ವರ್ಲ್ಡ್ ಕಥೆಯನ್ನು ಹೊಂದಿರುವ ಕಬ್ಜಾ ರೆಟ್ರೋ ಲುಕ್ಕನ್ನು ಹೊಂದಿದೆ. 

ಕಬ್ಜಾ ಸಿನಿಮಾದಲ್ಲಿ ಸುದೀಪ್ ಅವರು ಭಾರ್ಗವ್ ಭಕ್ಷಿ ಎನ್ನುವ ಮಾಫಿಯಾ ದೊರೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಮೂಲಕ ಉಪೇಂದ್ರ ಮತ್ತು ಸುದೀಪ್ ಎರಡನೇ ಬಾರಿ ತೆರೆ ಮೇಲೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಮುಕುಂದ ಮುರಾರಿ ಸಿನಿಮಾದಲ್ಲಿ ಅವರಿಬ್ಬರೂ ಜೊತೆಯಾಗಿ ನಟಿಸಿದ್ದರು. 

ಕಬ್ಜಾ ಸಿನಿಮಾವನ್ನು ಚಂದ್ರು ಅವರೇ ನಿರ್ಮಾಣ ಮಾಡುತ್ತಿದ್ದು ಎಂಟಿಬಿ ನಾಗರಾಜ್ ಅವರು ಪ್ರಸ್ತುತ ಪಡಿಸುತ್ತಿದ್ದಾರೆ. ರವಿ ಬಸ್ರೂರು ಸಂಗೀತ ಈ ಸಿನಿಮಾದ ವೈಶಿಷ್ಟ್ಯಗಳಲ್ಲೊಂದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com