ಮುಂದಿನ 18 ತಿಂಗಳು ಟೀಂ ಇಂಡಿಯಾಗೆ ಮುಳ್ಳಿನ ಹಾದಿ: ಕೋಚ್ ರವಿಶಾಸ್ತ್ರಿ

ಸ್ವದೇಶದಲ್ಲಿನ ಕ್ರಿಕೆಟ್ ಸರಣಿಗಳಲ್ಲಿ ಅಮೋಘ ನಿರ್ವಹಣೆ ನೀಡಿದ್ದ ಭಾರತೀಯ ಆಟಗಾರರು 2018ರಲ್ಲಿ ವಿದೇಶದಲ್ಲಿ ಬಹಳಷ್ಟು ಸವಾಲನ್ನು ಎದುರಿಸಬೇಕಾಗಿದೆ ಎಂದು...
ರವಿಶಾಸ್ತ್ರಿ
ರವಿಶಾಸ್ತ್ರಿ
Updated on: 
ಮುಂಬೈ: ಸ್ವದೇಶದಲ್ಲಿನ ಕ್ರಿಕೆಟ್ ಸರಣಿಗಳಲ್ಲಿ ಅಮೋಘ ನಿರ್ವಹಣೆ ನೀಡಿದ್ದ ಭಾರತೀಯ ಆಟಗಾರರು 2018ರಲ್ಲಿ ವಿದೇಶದಲ್ಲಿ ಬಹಳಷ್ಟು ಸವಾಲನ್ನು ಎದುರಿಸಬೇಕಾಗಿದೆ ಎಂದು ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ. 
ಮುಂಬರುವ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಪ್ರವಾಸ ಎಷ್ಟು ಕಠಿಣವಿರಬಹುದು ಎಂಬುದು ತಂಡದ ಸದಸ್ಯರಿಗೆ ತಿಳಿದಿದೆ. ಹೀಗಾಗಿ 18 ತಿಂಗಳು ಈ ಭಾರತೀಯ ಕ್ರಿಕೆಟ್ ತಂಡ ಏನೆಂಬುದನ್ನು ತೋರಿಸಲಿದೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ. 
ಕಳೆದ ಕೆಲವು ವರ್ಷಗಳಿಂದ ಟೀಂ ಇಂಡಿಯಾ ಉತ್ತಮ ನಿರ್ವಣೆ ನೀಡುತ್ತಾ ಬಂದಿರುವ ಕಾರಣ ಮುಂಬರುವ ಸವಾಲನ್ನು ಎದುರಿಸಲು ತಂಡ ಸನ್ನದ್ಧವಾಗಿದೆ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟರು. 
ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳಿಗೆ ಈ ಪ್ರವಾಸ ಕಠಿಣವಾಗಿರಬಹುದು. ಆದರೆ ಅವರ ಬ್ಯಾಟ್ಸ್ ಮನ್ ಗಳಿಗೆ ಪಂದ್ಯ ಕಠಿಣ ಎಂಬ ರೀತಿಯಲ್ಲಿ ನಿರ್ವಹಣೆ ನೀಡುವುದು ನಮ್ಮ ಕೆಲಸವಾಗಿದೆ ಎಂದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com