ಸಿಡ್ನಿ: ಐಸಿಸಿ ಟೆಸ್ಟ್ ನಂಬರ್ 1 ತಂಡವಾಗಿರುವ ಭಾರತದೊಂದಿಗಿನ ಟೆಸ್ಟ ಸರಣಿಗಾಗಿ ಆಸ್ಟ್ರೇಲಿಯಾ ದುಬೈನಲ್ಲಿ ತಯಾರಿ ನಡೆಸಲು ಯೋಜನೆ ಹಾಕಿಕೊಂಡಿದೆ.
ಸದ್ಯ ಟೆಸ್ಟ್ ಸರಣಿಗಳಲ್ಲಿ ಟೀ ಇಂಡಿಯಾ ಉತ್ತಮವಾಗಿ ಆಡುತ್ತಿದ್ದು ಭಾರತವನ್ನು ಮಣಿಸುವ ಸಲುವಾಗಿ ಮಾಸ್ಟರ್ ಪ್ಲಾನ್ ಮಾಡಿರುವ ಆಸ್ಟ್ರೇಲಿಯಾ ದುಬೈ ಅಕಾಡಮಿಯಲ್ಲಿರುವ 30ಕ್ಕೂ ಹೆಚ್ಚು ಪಿಚ್ ಗಳಲ್ಲಿ ತಯಾರಿ ನಡೆಸಲಿದೆ.
2004ರಿಂದ ಭಾರತದ ನೆಲದಲ್ಲಿ ಒಂದು ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ ಗೆಲ್ಲಲು ಸಾಧ್ಯವಾಗಿಲ್ಲ. ಅಲ್ಲದೆ 2013ರಲ್ಲಿ ಭಾರತ ಪ್ರವಾಸದಲ್ಲಿದ್ದ ಆಸ್ಟ್ರೇಲಿಯಾ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 4-0 ಅಂತರದಿಂದ ಹೀನಾಯ ಸೋಲು ಕಂಡಿತ್ತು.
ಫೆಬ್ರವರಿ 23 ರಂದು ಪುಣೆಯಲ್ಲಿ ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಟೆಸ್ಟ್ ಸರಣಿಗೆ ಇನ್ನೂ ಕಾಲಾವಕಾಶ ಇರುವುದರಿಂದ ಐಸಿಸಿ ಅಕಾಡಮಿಯಲ್ಲಿ ಆಸ್ಟ್ರೇಲಿಯಾ ಅಭ್ಯಾಸ ಶಿಬಿರ ನಡೆಸಲಿದೆ.