ಕ್ರಿಕೆಟ್

ಹೆಸರಿಗಷ್ಟೇ ಕೊಹ್ಲಿ ನಾಯಕ, ಇಂದಿಗೂ ಆನ್ ಫೀಲ್ಡ್ ನಿಯಂತ್ರಣವೆಲ್ಲಾ ಧೋನಿಯದ್ದೇ!

ಹೆಸರಿಗಷ್ಟೇ ಕೊಹ್ಲಿ ನಾಯಕ, ಇಂದಿಗೂ ಆನ್ ಫೀಲ್ಡ್ ನಿಯಂತ್ರಣವೆಲ್ಲಾ ಧೋನಿಯದ್ದೇ!
ಸಂಗ್ರಹ ಚಿತ್ರ
Published On :
ಚೆನ್ನೈ: ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕರಲ್ಲಿ ಧೋನಿ ಕೂಡ ಒಬ್ಬರು. ಧೋನಿ ನಾಯಕತ್ವದಿಂದ ಕೆಳಗಿಳಿದಿದ್ದರೂ ಇಂದಿಗೂ ಅವರೇ ಟೀಂ ಇಂಡಿಯಾದ ನೈಜ ನಾಯಕ..
ಹೌದು..ವಿರಾಟ್ ಕೊಹ್ಲಿ ಟೀಂ ಇಂಡಿಯಾದ ನಾಯಕರಾಗಿದ್ದರೂ, ಆನ್ ಫೀಲ್ಡ್ ನಲ್ಲಿ ಮಹೇಂದ್ರ ಸಿಂಗ್ ಧೋನಿಯೇ ನಿಜವಾದ ನಾಯಕರಂತೆ.. ಇದನ್ನು ಈ ಹಿಂದಿನ ಹಲವು ಪಂದ್ಯಗಳಲ್ಲಿನ ಧೋನಿ ಮತ್ತು ಕೊಹ್ಲಿ ನಡೆ ಸಾಬೀತು  ಪಡಿಸಿದ್ದರೂ. ಇದಕ್ಕೊಂದು ಇತ್ತೀಚೆಗಿನ ಉದಾಹರಣೆಯೆಂದರೆ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯ..

ಮಳೆಯಿಂದಾಗಿ 21 ಓವರ್ ಗಳಿಗೆ ಸೀಮಿತವಾಗಿದ್ದ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಆನ್ ಫೀಲ್ಡ್ ನಲ್ಲಿ ಮುನ್ನಡೆಸಿದ್ದು ಮಾತ್ರ ನಾಯಕ ಕೊಹ್ಲಿಯಲ್ಲ..ಬದಲಾಗಿ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ..ಹೌದು ಈ  ವಿಚಾರವನ್ನು ಫೀಲ್ಡ್ ನಲ್ಲಿದ್ದ ಸ್ಟಂಪ್ ಮೈಕ್ ಗಳು ಬಹಿರಂಗ ಪಡಿಸಿವೆ. ಆಸ್ಟ್ರೇಲಿಯಾ ಬ್ಯಾಟಿಂಗ್ ವೇಳೆ ವಿಕೆಟ್ ಹಿಂದೆ ನಿಂತು ಕೀಪಿಂಗ್ ಮಾಡುತ್ತಿದ್ದ ಧೋನಿ ಪ್ರತೀ ಎಸೆತದ ವೇಳೆಯಲ್ಲೂ ಸಹ ಆಟಗಾರರಿಗೆ ನಿರ್ದೇಶನ  ನೀಡುತ್ತಿರುವುದು ಸ್ಟಂಪ್ ಮೈಕ್ ನಲ್ಲಿ ದಾಖಲಾಗಿದೆ.

ಫೀಲ್ಡಿಂಗ್ ನಲ್ಲಿ ಬದಲಾವಣೆ, ಬೌಲರ್ ಗಳ ಬದಲಾವಣೆ, ಬೌಲಿಂಗ್ ಮಾಡುವ ಸಂದರ್ಭದಲ್ಲಿ ಬೌಲರ್ ಗಳಿಗೆ ಸೂಚನೆ ಎಲ್ಲವೂ ಧೋನಿ ಅವರಿಂದಲೇ ಬರುತ್ತಿದ್ದವು. ಪ್ರಮುಖವಾಗಿ ಆಸಿಸ್ ದಾಂಡಿಗ ಗ್ಲೇನ್ ಮ್ಯಾಕ್ಸ್ ವೆಲ್  ಉತ್ತಮವಾಗಿ ಆಡುತ್ತಿದ್ದರು. ಈ ವೇಳೆ ಪಂದ್ಯ ಭಾರತದಿಂದ ಕೈತಪ್ಪುವ ಆತಂಕ ಎದುರಾಗಿತ್ತು. ಆದರೆ ಈ ಹಂತದಲ್ಲಿ ಬೌಲರ್ ಗಳಿಗೆ ನಿರ್ದೇಶನ ನೀಡಿದ ಮಹೇಂದ್ರ ಸಿಂಗ್ ಧೋನಿ ಫೀಲ್ಡಿಂಗ್ ನಲ್ಲಿ ಬದಲಾವಣೆ ತಂದರು. ಅಲ್ಲದೆ  ಕೊಹ್ಲಿ ವೇಗದ ಬೌಲಿಂಗ್ ಮುಂದಾದರೂ ಸ್ಪಿನ್ ಬೌಲಿಂಗ್ ದಾಳಿ ನಡೆಸುವಂತೆ ಕೊಹ್ಲಿ ಅವರನ್ನು ಮನವೊಲಿಸಿದರು.

ಧೋನಿ ಸಲಹೆಯಂತೆ ಚಾಹಲ್ ಮತ್ತು ಕುಲದೀಪ್ ಯಾದವ್ ಮೂಲಕ ದಾಳಿ ನಡೆಸಿದ ಕೊಹ್ಲಿ ಯಶಸ್ಸು ಕೂಡ ಆದರು. ಇನ್ನು ಆಸಿಸ್ ಸ್ಫೋಟಕ ಆಟಗಾರ ಡೇವಿಡ್ ವಾರ್ನರ್ ಔಟ್ ಆಗಿದ್ದು ಕೂಡ ಇದೇ ಧೋನಿ ಸಲಹೆ ಮೇರೆಗೆ.  ಇದನ್ನು ಸ್ವತಃ ವಾರ್ನರ್ ವಿಕೆಟ್ ಪಡೆದ ಸ್ಪಿನ್ನರ್ ಕುಲದೀಪ್ ಯಾದವ್ ಬಹಿರಂಗ ಪಡಿಸಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ್ದ ಯಾದವ್ ವಾರ್ನರ್ ಅವರಿಗೆ ಯಾವರೀತಿ ಬೌಲ್ ಮಾಡಬೇಕು ಎಂಬುದನ್ನು ಧೋನಿ ಹೇಳಿದರು.  ಅವರ ಸಲಹೆಯಂತೆ ಬೌಲ್ ಮಾಡಿದೆ ಮತ್ತು ಅವರ ವಿಕೆಟ್ ಪಡೆಯುವಲ್ಲಿ ಯಶಸ್ವೀ ಕೂಡ ಆದೆ ಎಂದು ಯಾದವ್ ಹೇಳಿಕೊಂಡಿದ್ದಾರೆ.

ಇದಕ್ಕೆ ಇಂಬು ನೀಡುವಂತೆ ಧೋನಿ ಚಾಹಲ್ ಮತ್ತು ಕುಲದೀಪ್ ಯಾದವ್ ಅವರಿಗೆ ಸಲಹೆ ನೀಡುತ್ತಿರುವುದು ಸ್ಟಂಪ್ ಮೈಕ್ ನಲ್ಲಿ ದಾಖಲಾಗಿದ್ದು, ಚಾಹಲ್ ಬೌಲಿಂಗ್ ಮಾಡುವಾಗ ಧೋನಿ, "ವೋ ಮಾರ್ನೆ ವಾಲಾ ದಾಲ್ ನಾ;  ಆಂದರ್ ಯಾ ಬಾಹಾರ್ ಕೋಯಿ ಭಿ) (ಹೊಡೆಯಲು ಯತ್ನಿಸುವ ಎಸೆತವನ್ನು ಹಾಕು) ಎಂದು ಹೇಳಿರುವುದು ದಾಖಲಾಗಿದೆಯ ಅಂತೆಯೇ ಕುಲದೀಪ್ ಬೌಲ್ ಮಾಡುವಾಗ ಘುಮಾನೆ ವಾಲಾ ದಾಲ್ ಘುಮಾನೆ ವಾಲಾ (ತಿರುವು  ಪಡೆಯುವ ಎಸೆತ) ಎಂದು ಹೇಳಿದ್ದಾರೆ.

ಒಟ್ಟಾರೆ ಧೋನಿ ನಾಯಕತ್ವದಿಂದ ದೂರ ಉಳಿದರೂ ನಾಯಕತ್ವ ಅವರನ್ನು ಬಿಡುವಂತೆ ಕಾಣುತ್ತಿಲ್ಲ. ಈ ಹಿಂದೆ ಹಲವು ಬಾರಿ ಸ್ವತಃ ತಂಡದ ನಾಯಕ ಕೊಹ್ಲಿ ಧೋನಿಯೇ ತಮ್ಮ ನಾಯಕ ಎಂದು ಹೇಳಿದ್ದರು. ಬಹುಶಃ ಈ  ಮಾತನ್ನು ಧೋನಿ ಆನ್ ಫೀಲ್ಡ್ ನಲ್ಲಿ ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ ಎಂದೆನಿಸುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.