ಕ್ರಿಸ್ ನಿಂದ ದೂರ ಹೋಗಿದ್ದ ಮ್ಯಾಕ್ಸ್ ವೇಲ್ ಅಂಪೈರ್ ಅವರ ತೀರ್ಪಿಗೂ ಮುನ್ನ ಅಲ್ಲಿಂದ ಹೊರನಡೆದರು. ಇದು ಧೋನಿ ಅವರ 102ನೇ ಸ್ಟಂಪಿಂಗ್ ಆಗಿದೆ. ಈ ಹಿಂದೆ 100 ಸ್ಟಂಪಿಂಗ್ ಮಾಡುವ ಮೂಲಕ ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರ ಹೆಸರಿಲ್ಲಿದ್ದ ದಾಖಲೆಯನ್ನು ಧೋನಿ ಮುರಿದಿದ್ದು, ಇದೀಗ ತಮ್ಮದೇ ದಾಖಲೆಯನ್ನು ಮತ್ತಷ್ಟು ಉತ್ತಮಗೊಳಿಸಿಕೊಂಡಿದ್ದಾರೆ.