ಭಾರತ-ಆಫ್ರಿಕಾ ಏಕದಿನ ಸರಣಿ: ಮೊದಲ 3 ಪಂದ್ಯಗಳಿಂದ ಎಬಿಡಿ ಔಟ್!

ಪ್ರವಾಸಿ ಟೀಂ ಇಂಡಿಯಾ ವಿರುದ್ಧದ ಮೊದಲ ಮೂರು ಏಕದಿನ ಪಂದ್ಯಗಳಿಂದ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ಹೊರಗುಳಿದಿದ್ದು ಭಾರತ ತಂಡಕ್ಕೆ...
ಎಬಿಡಿ ವಿಲಿಯರ್ಸ್
ಎಬಿಡಿ ವಿಲಿಯರ್ಸ್
Updated on: 
ಪ್ರವಾಸಿ ಟೀಂ ಇಂಡಿಯಾ ವಿರುದ್ಧದ ಮೊದಲ ಮೂರು ಏಕದಿನ ಪಂದ್ಯಗಳಿಂದ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ಹೊರಗುಳಿದಿದ್ದು ಭಾರತ ತಂಡಕ್ಕೆ ಸ್ವಲ್ಪ ಬಲಬಂದಂತಾಗಿದೆ. 
ಭಾರತ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ವೇಳೆ ಎಬಿಡಿ ವಿಲಿಯರ್ಸ್ ಬಲಗೈನ ಬೆರಳಿಗೆ ಗಾಯಮಾಡಿಕೊಂಡಿದ್ದರು. ಎಬಿಡಿ ಸಂಪೂರ್ಣವಾಗಿ ಗುಣಮುಖರಾಗಲು ಎರಡು ವಾರಗಳ ವಿಶ್ರಾಂತಿ ಅವಶ್ಯಕತೆ ಇದೆ ಇದರಿಂದಾಗಿ ಅವರು ಮೊದಲ ಮೂರು ಏಕದಿನ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. 
ಆತಿಥೇಯ ಆಫ್ರಿಕಾ ಮತ್ತು ಭಾರತ ನಡುವೆ ಐದು ಏಕದಿನ ಪಂದ್ಯಗಳ ಸರಣಿ ನಡೆಯಲಿದ್ದು ಮೊದಲ ಏಕದಿನ ಪಂದ್ಯ ಫೆ.1ರಂದು ಡರ್ಬನ್ ನಲ್ಲಿ ನಡೆಯಲಿದೆ. ಎರಡನೇ ಹಾಗೂ ಮೂರನೇ ಏಕದಿನ ಪಂದ್ಯಗಳು ಸೆಂಚೂರಿಯನ್ ಮತ್ತು ಕೇಪ್ ಟೌನ್ ನಲ್ಲಿ ನಡೆಯಲಿದೆ. ಈ ಮೂರು ಪಂದ್ಯಗಳಿಂದ ಎಬಿಡಿ ಹೊರಗುಳಿಯಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com