ಐತಿಹಾಸಿಕ ಟೆಸ್ಟ್ ಗೆ ಕ್ಷಣಗಣನೆ, ಇಂಡೋ-ಆಫ್ಘನ್ ಏಕೈಕ ಟೆಸ್ಟ್ ಪಂದ್ಯದ ಪ್ರಮುಖಾಂಶಗಳು
ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸುತ್ತಿದ್ದು, ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡುತ್ತಿರುವ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ಬೆಂಗಳೂರಿನಿಂದ ತನ್ನ ಅಂತಾರಾಷ್ಟ್ಪೀಯ ಟೆಸ್ಟ್ ಅಭಿಯಾನ ಆರಂಭಿಸಲಿದೆ.
ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸುತ್ತಿದ್ದು, ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡುತ್ತಿರುವ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ಬೆಂಗಳೂರಿನಿಂದ ತನ್ನ ಅಂತಾರಾಷ್ಟ್ಪೀಯ ಟೆಸ್ಟ್ ಅಭಿಯಾನ ಆರಂಭಿಸಲಿದೆ.
ನಂಬರ್ 1 ತಂಡದ ಎದುರು ಕ್ರಿಕೆಟ್ ಶಿಶು ಪದಾರ್ಪಣೆ
ಟೆಸ್ಟ್ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ಅಗ್ರ ಸ್ಥಾನದಲ್ಲಿದ್ದು, ಅಂತಹ ಬಲಿಷ್ಠ ತಂಡದ ಎದುರು ಆಫ್ಘಾನಿಸ್ತಾನ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡುತ್ತಿರುವುದು ವಿಶೇಷ.
ಮ್ಯಾಜಿಕ್ ಸ್ಪೆಲ್ ಸ್ಪೆಷಲಿಸ್ಟ್ ರಷೀದ್ ಖಾನ್
ಐಪಿಎಲ್ ಸೀಸನ್ 11 ನಲ್ಲಿ ಅತೀ ಹೆಚ್ಚು ವಿಕೆಟ್ ಗಳಿಸಿ ರಷೀದ್ ಖಾನ್ ಸುದ್ದಿಗೆ ಗ್ರಾಸವಾಗಿದ್ದರು. ರಷೀದ್ ಖಾನ್ ಬೆಂಗಳೂರು ಐತಿಹಾಸಿಕ ಟೆಸ್ಟ್ ಪಂದ್ಯದ ಕೇಂದ್ರ ಬಿಂದುವಾಗಿರಲಿದ್ದಾರೆ. ಐಪಿಎಲ್ ನಿಂದಾಗಿ ರಷೀದ್ ಖಾನ್ ಗೆ ಭಾರತದಲ್ಲಿಯೂ ಅಭಿಮಾನಿಗಳು ಹುಟ್ಟಿಕೊಂಡಿದ್ದು, ಐಪಿಎಲ್ ನಲ್ಲಿ ಸಿಕ್ಕ ಬೆಂಬಲ ಬೆಂಗಳೂರಿನಲ್ಲಿಯೂ ಮುಂದುವರೆಯುವ ಸಾಧ್ಯತೆ ಇದೆ.
ದಿನೇಶ್ ಕಾರ್ತಿಕ್ ಗೆ ಕಮ್ ಬ್ಯಾಕ್ ಪಂದ್ಯ
ಕಳಪೆ ಫಾರ್ಮ್ ನಿಂದಾಗಿ ತಂಡದಿಂದ ಹೊರಗುಳಿದಿದ್ದ ದಿನೇಶ್ ಕಾರ್ತಿಕ್ ಅದ್ಬುತ ರೀತಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕಮ್ ಬ್ಯಾಕ್ ಮಾಡಿದ್ದಾರೆ. ಯಾವುದೇ ಕ್ರಿಕೆಟಿಗನಿರಲಿ 8 ವರ್ಷಗಳ ಬಳಿಕ ಮರಳುವುದು ಎಂದರೆ ಅದು ಅತೀ ದೊಡ್ಡ ಸವಾಲೇ ಸರಿ. ಈ ಹಿಂದೆ ಏಷ್ಯಾಕಪ್ ಟಿ20 ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಅಬ್ಬರಿಸಿದ್ದ ದಿನೇಶ್ ಕಾರ್ತಿಕ್ ಅದೇ ಪ್ರದರ್ಶನವನ್ನು ಬೆಂಗಳೂರಿನಲ್ಲಿ ನೀಡಿ ತಮ್ಮ ಸ್ಥಾನ ಭದ್ರ ಮಾಡಿಕೊಳ್ಳಲು ಖಂಡಿತಾ ಪ್ರಯತ್ನಿಸಲಿದ್ದಾರೆ.
ಆಫ್ಘನ್ ನಾಯಕನಿಗೆ ಪ್ರತಿಷ್ಠೆಯ ಪಂದ್ಯ
ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ ನಾಯಕ ಅಸ್ಗರ್ ಸ್ಟಾಂಕಿಝೈ ತಂಡವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.ರುವ ಆಫ್ಗನ್ ನಾಯಕ ಅಸ್ಗರ್ ಸ್ಟಾಂಕಿಝೈಗೆ ಇದು ಪ್ರತಿಷ್ಟೆಯ ಪಂದ್ಯವಾಗಿರಲಿದೆ. ಈ ಹಿಂದೆ ಬಾಂಗ್ಲಾದೇಶದ ವಿರುದ್ಧದ ಟಿ20 ಸರಣಿಯನ್ನು ಭರ್ಜರಿಯಾಗಿ ತಂಡ ಜಯಿಸಿದ್ದು, ಈ ಐತಿಹಾಸಿಕ ಪಂದ್ಯವನ್ನು ಗೆದ್ದು ಅದ್ದೂರಿಯಾಗಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಬೇಕು ಎಂದು ಅಸ್ಗರ್ ಸ್ಟಾಂಕಿಝೈ ಆಸೆ. ಹೀಗಾಗಿ ಖಂಡಿತಾ ಪಂದ್ಯ ಕುತೂಹಲದಿಂದ ಕೂಡಿರುತ್ತದೆ.
ಟೀಂ ಇಂಡಿಯಾಗೆ ಕಾಡಲಿದೆ ಸ್ಟಾರ್ ಆಟಗಾರರ ಅನುಪಸ್ಥಿತಿ
ಮಹತ್ವದ ಟೆಸ್ಟ್ ಪಂದ್ಯವಾಡುತ್ತಿರುವ ಭಾರತಕ್ಕೆ ಸ್ಚಾರ್ ಆಟಗಾರರ ಅನುಪಸ್ಥಿತಿ ಕಾಡುವ ಸಾಧ್ಯತೆ ಇದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಬುಮ್ರಾ, ಭುವನೇಶ್ವರ್ ಕುಮಾರ್ ರಂತಹ ಘಟಾನುಘಟಿ ಆಟಗಾರರು ಈ ಪಂದ್ಯದಿಂದ ದೂರ ಉಳಿದಿದ್ದಾರೆ.