ತಪ್ಪಿದ ಹ್ಯಾಟ್ರಿಕ್ ನಲ್ಲೂ ಉಮೇಶ್ ಯಾದವ್ ವಿಶೇಷ ಸಾಧನೆ

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಮುಕ್ತಾಯವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾನುವಾರ ಭಾರತದ ವೇಗಿ ಉಮೇಶ್ ಯಾದವ್ ವಿಶಿಷ್ಠ ಸಾಧನೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಹೈದರಾಬಾದ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಮುಕ್ತಾಯವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾನುವಾರ ಭಾರತದ ವೇಗಿ ಉಮೇಶ್ ಯಾದವ್ ವಿಶಿಷ್ಠ ಸಾಧನೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
4 ಎಸೆತಗಳಲ್ಲಿ ಮೂರು ವಿಕೆಟ್ ಪಡೆಯುವ ಮೂಲಕ ಉಮೇಶ್ ಯಾದವ್ ವಿಶಿಷ್ಠ ಸಾಧನೆಯೊಂದನ್ನು ಮಾಡಿದ್ದಾರೆ. ವಿಶ್ವ ಕ್ರಿಕೆಟ್ ಈ ಸಾಧನೆ ಗೈದ ಕೆಲವೇ ಕೆಲ ಕ್ರಿಕೆಟಿಗರ ಸಾಲಿಗೆ ಇದೀಗ ಉಮೇಶ್ ಯಾದವ್ ಸೇರ್ಪಡೆಯಾಗಿದ್ದಾರೆ. ಕೆರಿಬಿಯನ್ನರ ಮೊದಲ ಇನ್ನಿಂಗ್ಸ್ ನ ಕೊನೆಯ ಎರಡು ವಿಕೆಟ್ ಗಳನ್ನು ಸತತ ಎಸೆತಗಳಲ್ಲಿ ಪಡೆದಿದ್ದ ಉಮೇಶ್ ಎರಡನೇ ಇನ್ನಿಂಗ್ಸ್ ನ ಮೊದಲ ಎಸೆತದಲ್ಲಿ ವಿಕೆಟ್ ಪಡೆದಿದ್ದರೆ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದಂತಾಗುತ್ತಿತ್ತು. 
ಉಮೇಶ್ ಯಾದವ್ ಮೊದಲ ಎಸೆತವನ್ನು ಕ್ರೇಗ್ ಬ್ರಾಥ್ ವೇಟ್ ಸಮರ್ಥವಾಗಿ ಎದುರಿಸಿದರು. ಈ ಮೂಲಕ ಉಮೇಶ್ ಹ್ಯಾಟ್ರಿಕ್ ಆಸೆಗೆ ತಣ್ಣೀರೆರಚಿದರು. ಆದರೆ ಎರಡನೇ ಎಸೆತದಲ್ಲಿ ಬ್ರಾಥ್ ವೇಟ್ ವಿಕೆಟ್ ಪಡೆದ ಉಮೇಶ್ ಹೊಸತೊಂದು ದಾಖಲೆಗೆ ತನ್ನ ಹೆಸರು ಸೇರಿಸಿಕೊಂಡರು. 
ಇನ್ನು ಈ ಮೂಲಕ ಸತತ 4 ಎಸೆತಗಳಲ್ಲಿ ಮೂರು ವಿಕೆಟ್ ಪಡೆದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆ ವಿದರ್ಭ ಬೌಲರ್ ಪಾಲಾಯಿತು. ಈ ಹಿಂದೆ 1981 ರ ನ್ಯೂಜಿಲೆಂಡ್ ವಿರುದ್ದದ ಸರಣಿಯಲ್ಲಿ ವೆಲ್ಲಿಂಗ್ಟನ್ ನಲ್ಲಿ ರವಿಶಾಸ್ತ್ರೀ  ಈ ಸಾಧನೆ ಮಾಡಿದ್ದರು. ಇದಾದ ಬಳಿಕ 1985ರಲ್ಲಿ ಅಡಿಲೇಡ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಕಪಿಲ್ ದೇವ್ ಈ ಸಾಧನೆ ಮಾಡಿದ್ದರು. ಇದೀಗ ಈ ಪಟ್ಟಿಗೆ ಉಮೇಶ್ ಯಾದವ್ ಸೇರ್ಪಡೆಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com