ವಿಂಡೀಸ್ ವಿರುದ್ಧದ ಪಂದ್ಯವೂ ಸೇರಿದಂತೆ ರೋಹಿತ್ ಶರ್ಮಾ ಈ ವರೆಗೂ 6 ಬಾರಿ 150ಕ್ಕೂ ಅಧಿಕ ರನ್ ಗಳನ್ನು ಪೇರಿಸಿದ್ದು, ಆ ಮೂಲಕ ರೋಹಿತ್ ಶರ್ಮಾ ಭಾರತ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಹಾಗೂ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಹೆಸರಲ್ಲಿದ್ದ ಜಂಟಿ ದಾಖಲೆಯನ್ನು ಮುರಿದಿದ್ದಾರೆ. ವಾರ್ನರ್ ಮತ್ತು ಸಚಿನ್ ತಲಾ 5 ಬಾರಿ 150ಕ್ಕೂ ಅಧಿಕ ರನ್ ಪೇರಿಸಿದ್ದರು. ಇದೀಗ ಈ ದಾಖಲೆಯನ್ನು ಹಿಂದಿಕ್ಕುವ ಮೂಲಕ ರೋಹಿತ್ ಶರ್ಮಾ 150ಕ್ಕೂ ಅಧಿಕ ರನ್ ಪೇರಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.