ಕುಲದೀಪ್ ಯಾದವ್ ದಾಳಿಗೆ ತತ್ತರಿಸಿದ ಆಸಿಸ್, ವಿದೇಶದಲ್ಲಿ ಭಾರತೀಯ ಸ್ಪಿನ್ನರ್ ನಿಂದ ಅಪರೂಪದ ಸಾಧನೆ

ಎಸ್ ಸಿಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸಮನ್ ಗಳ ಪಾಲಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಕುಲದೀಪ್ ಯಾದವ್ ಆಸಿಸ್ ನೆಲದಲ್ಲಿ ಅಪರೂಪದ ಸಾಧನೆಗೈದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಸಿಡ್ನಿ: ಎಸ್ ಸಿಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸಮನ್ ಗಳ ಪಾಲಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಕುಲದೀಪ್ ಯಾದವ್ ಆಸಿಸ್ ನೆಲದಲ್ಲಿ ಅಪರೂಪದ ಸಾಧನೆಗೈದಿದ್ದಾರೆ.
ಹೌದು.. ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಕಬಳಿಸುವ ಮೂಲಕ ಕುಲದೀಪ್ ಯಾದವ್ ಅಪರೂಪದ ಸಾಧನೆಗೈದಿದ್ದಾರೆ. ಆಸ್ಚ್ರೇಲಿಯಾದ ಐದು ವಿಕೆಟ್ ಕಬಳಿಸುವ ಮೂಲಕ ಕುಲದೀಪ್ ಯಾದವ್, ವೃತ್ತಿ ಜೀವನದ 2ನೇ ಬಾರಿಗೆ ಐದು ವಿಕೆಟ್ ಗೊಂಚಲು ಪಡೆದರು. ಅಂತೆಯೇ ವಿದೇಶದಲ್ಲಿ ಮತ್ತು ಆಸಿಸ್ ನೆಲದಲ್ಲಿ ಮೊದಲ ಐದು ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದರು.
ಕುಲದೀಪ್ ಯಾದವ್ ಮಾರಣಾಂತಿಕ ಬೌಲಿಂಗ್ ದಾಳಿ ನೆರವಿನಿಂದಾಗಿ ಭಾರತ ತಂಡ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದೆ. ಆಸಿಸ್ ಮೇಲೆ ಫಾಲೋ ಆನ್ ಹೇರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com