ಇದೇ ವೇಳೆ ರೋಹಿತ್ ಶರ್ಮಾ ಬ್ಯಾಟಿಂಗ್ ಶ್ಲಾಘಿಸಿದ ರಾಹುಲ್, ರೋಹಿತ್ ಶರ್ಮಾ ಅಮೋಘ ಲಯದಲ್ಲಿದ್ದಾರೆ. ಈಗಾಗಲೇ ನಾಲ್ಕು ಶತಕಗಳನ್ನು ದಾಖಲಿಸಿದ್ದಾರೆ. ಇಂಗ್ಲೆಂಡ್ ನ ಪಿಚ್‌ಗಳಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಲು ಅವರಿಂದ ಮಾತ್ರ ಸಾಧ್ಯ. ರೋಹಿತ್ ಜೊತೆ ಕ್ರೀಸ್ ನಲ್ಲಿದ್ದರೆ, ನಾನು ಬ್ಯಾಟಿಂಗ್ ಗೆ ಕುದುರಿಕೊಳ್ಳಲು ಕೆಲ ಸಮಯಾವಕಾಶ ಸಿಗುತ್ತದೆ. ಪ್ರತೀ ಇನ್ನಿಂಗ್ಸ್ ನಲ್ಲೂ ನಾನು ನನ್ನ ಬ್ಯಾಟಿಂಗ್ ಉತ್ತಮ ಪಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.